Advertisement
ಸರಕಾರಿ ಶಾಲೆಗಳ ದುರವಸ್ಥೆ ಕಂಡಿರುವಶಾಸಕ ಸತೀಶ ಜಾರಕಿಹೊಳಿ ಈಗ ಉಳ್ಳಾಗಡ್ಡಿ ಖಾನಾಪುರದ ಕರ್ನಾಟಕ ಪಬ್ಲಿಕ್ ಶಾಲೆ ಹಾಗು ಗುಟಗುದ್ದಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನುಅಭಿವೃದ್ಧಿ ಪಡಿಸುವ ಉದ್ದೇಶದಿಂದದತ್ತು ಪಡೆದುಕೊಂಡಿದ್ದಾರೆ. ಕ್ಷೇತ್ರದ ಪ್ರಗತಿಗೆ ಶಿಕ್ಷಣವೇ ಮೂಲಮಂತ್ರ ಎಂಬುದನ್ನುಬಲವಾಗಿ ನಂಬಿರುವ ಶಾಸಕ ಸತೀಶ ಜಾರಕಿಹೊಳಿ ಅವರು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಈ ಎರಡೂ ಶಾಲೆಗಳಿಗೆ ಒಟ್ಟು253.25 ಲಕ್ಷ ರೂ. ಅಂದಾಜು ವೆಚ್ಚದಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಇದರಲ್ಲಿ ಗುಟಗುದ್ದಿ ಶಾಲೆಗೆ 163.85 ಲಕ್ಷದ ಯೋಜನೆ ಸಿದ್ಧವಾಗಿದೆ.
Related Articles
Advertisement
ಹಿರಿಯ ಪ್ರಾಥಮಿಕ ಶಾಲೆ, ಗಟಗುದ್ದಿ :
ಒಟ್ಟು 718 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ 1ರಿಂದ 10ರ ವರೆಗೆ ತರಗತಿಗಳಿವೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಶಾಲೆಯಲ್ಲಿ ಈಗ ಕೊಠಡಿಗಳಕೊರತೆ ಎದ್ದುಕಾಣುತ್ತಿದೆ. ಶಾಲೆಯ ಅಭಿವೃದ್ಧಿಗೆ ಬೇಕಾಗಿರುವ ಬೇಡಿಕೆಗಳದೊಡ್ಡ ಪಟ್ಟಿಯನ್ನು ಶಿಕ್ಷಕರು ಶಾಸಕರು ಹಾಗೂ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ. ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿಸ್ಪಂದಿಸಿರುವ ಯಮಕನಮರಡಿ ಶಾಸಕಸತೀಶ ಜಾರಕಿಹೊಳಿ ಅವರು 163.85ಲಕ್ಷ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಶಾಸಕರಪ್ರದೇಶಾ ಭಿವೃದ್ಧಿ ಯೋಜನೆಯಡಿ ಇದರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಮುಖ್ಯವಾಗಿ ಶಾಲೆಗೆ ಐದು ಹೈಟೆಕ್ ಕೊಠಡಿಗಳು, ಸಭಾಭವನ, ಶೌಚಾಲಯ, ಕುಡಿಯುವ ನೀರು, ಶಾಲಾ ಆವರಣದ ಗೋಡೆ, ಮುಖ್ಯೋಪಾಧ್ಯಾಯರ ಮತ್ತು ಶಿಕ್ಷಕರ ಕೊಠಡಿಗಳು ಹಾಗೂ ನಾಲ್ಕು ಸ್ಮಾರ್ಟ್ ಕ್ಲಾಸ್‌ಗಳನ್ನು ನಿರ್ಮಾಣ ಮಾಡಲು ಶಾಸಕರು ಯೋಜನೆ ರೂಪಿಸಿದ್ದಾರೆ.ಸರಕಾರದಿಂದ ಹಣ ಬಿಡುಗಡೆಯಾಗಿಕಾಮಗಾರಿ ನಡೆದರೆ ಈ ಶಾಲೆ ಸಮಸ್ಯೆಗಳಿಗೆಪರಿಹಾರ ಕಂಡುಕೊಳ್ಳಬಹುದು.
ಶಾಲೆಗೆ ಈಗ ಕೊಠಡಿಗಳ ಅಗತ್ಯತೆ ಬಹಳ ಇದೆ. ಇದೇ ಕಾರಣದಿಂದಎಂಟು ಕೊಠಡಿಗಳ ಬೇಡಿಕೆಯನ್ನುಶಾಸಕರಿಗೆ ಸಲ್ಲಿಸಲಾಗಿದೆ. ಇದರಜೊತೆಗೆ ಶೌಚಾಲಯದ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಸಹ ಮನವಿ ಮಾಡಲಾಗಿದೆ. –ಗಂಗಪ್ಪ ಬುಡಕಿ, ಮುಖ್ಯಾಧ್ಯಾಪಕ
-ಕೇಶವ ಆದಿ