Advertisement
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ”ಇಂದು ನನ್ನ ಬೆಂಬಲಕ್ಕೆ ಬಂದ ಎಲ್ಲಾ ನಾಯಕರು, ಕಾರ್ಯಕರ್ತರು, ಪ್ರತಿನಿಧಿಗಳು ಮತ್ತು ಸಚಿವರು ಬಂದು ನನ್ನನ್ನು ಪ್ರೋತ್ಸಾಹಿಸಿದರು, ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಕ್ಟೋಬರ್ 17 ರಂದು ಫಲಿತಾಂಶಗಳು ಏನೆಂದು ನಾವು ನೋಡುತ್ತೇವೆ. ನಾನು ಗೆಲ್ಲುವ ಭರವಸೆ ಇದೆ” ಎಂದರು.
Related Articles
Advertisement
ಖರ್ಗೆ ಪಕ್ಷದ ಭೀಷ್ಮ: ತರೂರ್ ಪ್ರತಿಕ್ರಿಯೆ
”ನಾವು ಶತ್ರುಗಳಲ್ಲ, ಪ್ರತಿಸ್ಪರ್ಧಿಗಳಲ್ಲ, ನಾವು ಸಹೋದ್ಯೋಗಿಗಳು ಮತ್ತು ಪಕ್ಷವು ಮುಂದುವರಿಯುವುದನ್ನು ನೋಡಲು ನಮಗೆ ಆಸಕ್ತಿ ಇದೆ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ‘ಭೀಷ್ಮ ಪಿತಾಮಹ’. ಪಕ್ಷದ ಕಾರ್ಯಕರ್ತರು ಹೇಗೆ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸಲಿ. ಖರ್ಗೆ, ದಿಗ್ವಿಜಯ ಸಿಂಗ್, ತ್ರಿಪಾಠಿ ಬಗ್ಗೆ ನಾನು ನಕಾರಾತ್ಮಕವಾಗಿ ಏನನ್ನೂ ಹೇಳುವುದಿಲ್ಲ” ಎಂದು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಗಾಂಧಿ ಕುಟುಂಬ ತಟಸ್ಥ
”ಪಕ್ಷಕ್ಕೆ ಅಧಿಕೃತ ಅಭ್ಯರ್ಥಿ ಇಲ್ಲ, ಗಾಂಧಿ ಕುಟುಂಬ ಈ ರೇಸ್‌ನಲ್ಲಿ ತಟಸ್ಥವಾಗಿರುತ್ತದೆ ಮತ್ತು ಸಾಧ್ಯವಾದಷ್ಟು ಅಭ್ಯರ್ಥಿಗಳನ್ನು ಅವರು ಸ್ವಾಗತಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ನನಗೆ ಭರವಸೆ ನೀಡಿದರು. ಆ ಉತ್ಸಾಹದಲ್ಲಿ ನಾನು ನನ್ನ ಉಮೇದುವಾರಿಕೆಯನ್ನು ಮುಂದಿಟ್ಟಿದ್ದೇನೆ. ಇದು ಯಾರನ್ನೂ ಅಗೌರವಿಸಲು ಅಲ್ಲ. ನಮ್ಮದು ಸೌಹಾರ್ದ ಸ್ಪರ್ಧೆ” ಎಂದು ಶಶಿ ತರೂರ್ ಹೇಳಿದ್ದಾರೆ.
”ಯಥಾಸ್ಥಿತಿಯನ್ನು ಮುಂದುವರಿಸಲು ಬಯಸುವವರು ನನಗೆ ಮತ ಹಾಕಲು ಒಲವು ತೋರುವುದಿಲ್ಲ. ಏಕೆಂದರೆ ನಾನು ಬದಲಾವಣೆ, ವಿಭಿನ್ನ ವಿಧಾನ ಮತ್ತು ಪಕ್ಷವನ್ನು ವಿಭಿನ್ನ ರೀತಿಯಲ್ಲಿ ಮುನ್ನಡೆಸುವ ದೃಷ್ಟಿಕೋನವನ್ನು ಪ್ರತಿನಿಧಿಸುತ್ತೇನೆ ಏಕೆಂದರೆ ಕೆಲವು ವರ್ಷಗಳಿಂದ ನಾವು ಹಿನ್ನಡೆ ಅನುಭವಿಸುತ್ತಿದ್ದೇವೆ” ಎಂದೂ ತರೂರ್ ಹೇಳಿದ್ದಾರೆ.