Advertisement

ಬಾಳಿಗೊಂದು ಭರವಸೆ

06:04 PM Feb 06, 2020 | mahesh |

ಬರಗಾಲದ ದಿನಗಳು, ಅಂದು ನೀರಿನ ಕೊರತೆಯ ಕಾರಣ ಜನರು ತುಂಬಾ ದುಃಖೀತರಾಗಿದ್ದರು. ಟೋನ್‌ ಎಂಬ ಹುಡುಗನಿಗೆ ಒಣಗಿದ ಒಂದು ಹಣ್ಣು ಸಿಕ್ಕಿತ್ತು. ಆ ಹಣ್ಣನ್ನು ಕಂಡು ದುಃಖಪಡುತ್ತಿದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿಯು ಅಲ್ಲಿಗೆ ಬಂದ. ಆ ಊರಿನ ಜನರ ಪರಿಸ್ಥಿತಿಯನ್ನು ಕಂಡು ತುಂಬಾ ದುಃಖೀತನಾದ. ಟೋನ್‌ನ ಕೈಯಲ್ಲಿದ್ದ ಒಣಗಿದ ಹಣ್ಣನ್ನು ಕಂಡು,”ನಿಮ್ಮ ಈ ಊರಿನ ಪರಿಸ್ಥಿತಿಯು ಬೇಗನೇ ನಿವಾರಣೆಯಾಗಲಿದೆ. ಇನ್ನು ಒಂದು ವಾರದಲ್ಲಿ ಈ ಊರಿಗೆ ಮಳೆ ಬರಲಿದೆ. ಆ ಮಳೆಯ ನೀರನ್ನು ಹಾಳುಮಾಡದೇ ಸಂಗ್ರಹಿಸಿಡಿ. ಇದರಿಂದಾಗಿ ಎಂದೂ ಈ ಊರಿಗೆ ಬರಗಾಲದ ಸಮಸ್ಯೆ ಕಾಡದು’ ಎಂದನು. ಆ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಜನರ ಭರವಸೆಯ ಕಿರಣ ಮನದಲ್ಲಿ ಮೂಡಿತ್ತು. “ಇವತ್ತಿನವರೆಗೆ ನಿಮ್ಮನ್ನು ಈ ಊರಿನಲ್ಲಿ ಕಂಡಿಲ್ಲ, ನೀವು ಯಾವ ಊರಿನವರು’ ಎಂದು ಟೋನ್‌ ಪ್ರಶ್ನಿಸಿದನು. ಆಗ ಅಪರಿಚಿತ ವ್ಯಕ್ತಿಯು ಮುಗುಳು ನಗುತ್ತ, “ನಾನು ನಿನ್ನ ಹಿತೈಷಿ ಎಂದು ತಿಳಿಯಪ್ಪಾ’ ಎಂದನು. ಆಗ ಟೋನ್‌ ತನ್ನ ದುಃಖವನ್ನು ಆ ಅಪರಿಚಿತ ವ್ಯಕ್ತಿಯ ಬಳಿ ಹೇಳಿದನು. “ನೋಡಿ ಹಲವಾರು ವರ್ಷಗಳಾದರೂ ಮಳೆಬರುವ ಒಂದು ಕುರುಹೂ ಇಲ್ಲ. ಈ ಊರಿನ ಅನೇಕ ಜನರು ನೀರಿನ ಕೊರತೆಯಿಂದ ಬಳಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು’ ಎಂದನು. ಅಪರಿಚಿತ ವ್ಯಕ್ತಿಯು ಆಕಾಶದತ್ತ ತೋರಿಸುತ್ತ, “ಮೋಡ ಕಾಣಿಸುತ್ತಿದೆಯೇ, ಇದೇ ಮೋಡ ನಿಮ್ಮ ಭರವಸೆಯ ಪ್ರತೀಕ’ ಎಂದು ಸಂತೈಸಿದ. ಕೆಲ ಕ್ಷಣದಲ್ಲಿಯೇ ವ್ಯಕ್ತಿಯು ಮಾಯವಾಗಿದ್ದನು.

Advertisement

ಅಂತೆಯೇ ಕೊನೆಗೂ ಆ ಊರಿಗೆ ಮಳೆಬಂದು ಜನರು ಕುಣಿದು ಕುಪ್ಪಳಿಸಿದರು.

ಟೋನ್‌ ಆ ಅಪರಿಚಿತ ವ್ಯಕ್ತಿಯ ಸಂದೇಶ ಜನರಲ್ಲಿ ಪಸರಿಸಿ ನೀರಿನ ಸಂಗ್ರಹಣೆಯ ವ್ಯವಸ್ಥೆಯ ಮಾಡಿದನು. ಇದರಿಂದ ಯಾವತ್ತೂ ಆ ಊರಿಗೆ ಬರಗಾಲದ ಸಮಸ್ಯೆ ಕಾಡಲಿಲ್ಲ. ಟೋನ್‌ಗೆ ನಿಧಾನಕ್ಕೆ ಅರಿವಾಯಿತು, ಆ ಅಪರಿಚಿತ ವ್ಯಕ್ತಿ ಮತ್ಯಾರೂ ಅಲ್ಲ. ಪ್ರತಿಯೊಬ್ಬರ ಮನಸ್ಸಿನೊಳಗೆ ಇರುವ “ಬದುಕಿನ ಭರವಸೆ’.

ಪ್ರಜ್ಞಾ ಶೆಣೈ
ತೃತೀಯ ಬಿ.ಎ. ಶ್ರೀ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next