ಹೊಳಲ್ಕೆರೆ: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಭಯದ ನಡುವೆಯೂ ತಾಲೂಕಿನ ಶ್ರೀ ಕರಿಯಮ್ಮ ದೇವಿ ಅಮ್ಮನವರ ರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.
ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ರಥವನ್ನು ಎಳೆದು ಪುನೀತರಾದರು. “ತಾಳಕಟ್ಟದ ಸತ್ಯೆ, ತಾಳಕಟ್ಟದ ಸತ್ಯೇ ಕರಿಯಮ್ಮ ದೇವಿ’ ಎಂದು ಉದ^ರಿಸುತ್ತಾ ಭಕ್ತರು ರಥವನ್ನು ಎಳೆದರು. ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಬೇಕಿತ್ತು. ಕೊರೊನಾ ವೈರಸ್ ಹಿನ್ನೆಲೆ ಭಕ್ತರ ಸಂಖ್ಯೆ ಕಡಿಮೆ ಇತ್ತು.
ತೆಂಗಿನ ಕಾಯಿ ವಿತರಣೆ: ತಾಳಕಟ್ಟ ಹಾಗೂ ಕೆಲ ಗ್ರಾಮಗಳ ಭಕ್ತರು ರಥೋತ್ಸವಕ್ಕೆ ಆಗಮಿಸುವಂತ ಭಕ್ತರಿಗೆ ಉಚಿತವಾಗಿ ತೆಂಗಿನ ಕಾಯಿ ನೀಡುವ ಪದ್ಧತಿ ರೂಢಿಸಿಕೊಂಡು ಬಂದಿದ್ದಾರೆ. ಅವರವರ ಶಕ್ತಿಯನುಸಾರ ತೆಂಗಿನಕಾಯಿ ವಿತರಿಸುವ ಮೂಲಕ ಹರಕೆ ತೀರಿಸಿದರು. ತದನಂತರ ತೆಂಗಿನಕಾಯಿ ಪಡೆದಂತಹ ಭಕ್ತರು ರಥ ಎಳೆಯುವ ಮೊದಲು ರಥದ ಗಾಲಿಗೆ ತೆಂಗಿನಕಾಯಿ ಒಡೆಯಲಾಗುತ್ತದೆ. ರಥೋತ್ಸವದಲ್ಲಿ ಶ್ರೀ ಕರಿಯಮ್ಮ ದೇವಿ, ಚಿಕ್ಕಮ್ಮದೇವಿ, ಶ್ರೀ ಆಂಜನೇಯ ಸ್ವಾಮಿ ಪ್ರತಿಷ್ಠಾಪಿಸಲಾಗಿತ್ತು.
ಅನ್ನಸಂತರ್ಪಣೆ ಇಲ್ಲ: ರಥೋತ್ಸವ ಕಾರ್ಯಕ್ರಮದ ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಭೇಟಿ ನೀಡಿದರು. ಅನ್ನಸಂತರ್ಪಣೆ ಸ್ಥಳಕ್ಕೆ ಭೇಟಿ ನೀಡಿ ಎರಡು ದಿನಗಳ ಕಾಲ ನಡೆಯಬೇಕಿದ್ದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದರು. ಜಾಗ್ರತೆ
ಕ್ರಮ ವಹಿಸಬೇಕಿರುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ ಎಂದು ಮಾಹಿತಿ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಭಕ್ತರು ಹಾಗೂ ತಾಳಕಟ್ಟ ಗ್ರಾಮಸ್ಥರು ಇದ್ದರು.