Advertisement
ಈ ಟಿಪ್ಪಣಿ ಪ್ರಕಾರ ಜಲ ಸಂಪನ್ಮೂಲ ಇಲಾಖೆ ನೀರಾವರಿ ನಿಗಮಗಳಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುವ ಮತ್ತು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡು ಕಾರ್ಯಾದೇಶವನ್ನು ನೀಡುವುದಕ್ಕೆ ಬಾಕಿ ಇರುವ ಕಾಮಗಾರಿಗಳ ಕುರಿತು ಮುಂದಿನ ಯಾವುದೇ ಕ್ರಮ ತೆಗೆದುಕೊಳ್ಳದೇ ತಕ್ಷಣದಿಂದಲೇ ತಡೆಡಿಯಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
Related Articles
ಸ್ಕಾಡಾ 2ನೇ ಹಂತದ ಎನ್‌ಎಲ್‌ಬಿಸಿ, ಎಸ್‌ಬಿಸಿ, ಜೆಬಿಸಿ, ಎಂಬಿಸಿ ಮತ್ತು ಐಬಿಸಿ ಕೆನಾಲ್ ಸಂಪರ್ಕ ಕಲ್ಪಿಸುವ 872 ಕೋಟಿ ರೂ. ಯೋಜನೆ.
Advertisement
28 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಸೋಂತಿ ಮುಖ್ಯ ಕೆನಾಲ್ ನಿರ್ಮಾಣ, ಭೀಮಾ ನದಿಗೆ ಕಲ್ಲೂರು-ಬಿ ಬ್ಯಾರೇಜ್ ಹಾಗೂ ಘಟ್ಟರ್ಗಾ ಬ್ಯಾರೇಜ್‌ಗಳಿಗೆ ಸ್ವಯಂಚಾಲಿತ ಲಿಫ್ಟ್ ಗೇಟ್ ಅಳವಡಿಸುವ 83 ಕೋಟಿ ರೂ. ಯೋಜನೆಗಳಿಗೆ ಬ್ರೇಕ್ ಹಾಕಲಾಗಿದೆ. ಕೃಷ್ಣಾ ಜಲಭಾಗ್ಯ ನಿಗಮದ ವತಿಯಿಂದ ಕೈಗೆತ್ತಿಕೊಂಡಿರುವ 998 ಕೋಟಿ ರೂ. ಯೋಜನೆ.
ಇಷ್ಟೇ ಅಲ್ಲದೇ ಕೃಷ್ಣಾ ಜಲಭಾಗ್ಯ ನಿಗಮದ ವತಿಯಿಂದ ಕೈಗೆತ್ತಿಕೊಂಡು ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿ ಕಾಮಗಾರಿ ಆರಂಭಿಸಲು ಅನುಮತಿ ನೀಡಲು ಬಾಕಿ ಇರುವ 429 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಕಾರ್ಯಾದೇಶ ನೀಡಿಲ್ಲ. ಪ್ರಮುಖವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಕೂಡಲ ಸಂಗಮದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಿರುವ ಬಸವ ಅಂತಾರಾಷ್ಟ್ರೀಯ ಕೇಂದ್ರ ಹಾಗೂ ಮ್ಯೂಜಿಯಂ ಯೋಜನೆ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆಗಳ ಆಧುನೀಕರಣ ಯೋಜನೆಯೂ ಸೇರಿದೆ.
ಕಾವೇರಿ ಯೋಜನೆಗಳಿಗೂ ಬ್ರೇಕ್ :ಕಾವೇರಿ ನೀರಾವರಿ ನಿಗಮ ಕೈಗೆತ್ತಿಕೊಂಡಿರುವ ಕನ್ವಾ ಕೆನಾಲ್ ಮಳ್ಳಿಗೆರೆ ಎಲ್‌ಐಎಲ್ ಯೋಜನೆ ಸೇರಿದಂತೆ 688 ಕೋಟಿ ರೂ. ವೆಚ್ಚದ ಸಣ್ಣ ಪುಟ್ಟ ಯೋಜನೆಯೂ ಸೇರಿದೆ. ಸಾವಿರಾರು ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಗಳು ಇರುವುದರಿಂದ ಯಾವುದನ್ನು ಮೊದಲು ಕೈಗೆತ್ತಿಕೊಳ್ಳಬೇಕು ಎನ್ನುವ ಸಲುವಾಗಿ ಎಲ್ಲ ಯೋಜನೆಗಳನ್ನು ತಡೆ ಡಿಯಲಾಗಿತ್ತು. ಈಗ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ.
-ರಾಕೇಶ್‌ಸಿಂಗ್, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಥಗಿತಗೊಳಿಸಲು ಸೂಚಿಸಿರುವ ಯೋಜನೆಗಳ ಹಣಕಾಸು ವಿವರ
ಕೃಷ್ಣಾ ಭಾಗ್ಯ ಜಲ ನಿಗಮದ ಟೆಂಡರ್ ಪ್ರಕ್ರಿಯೆಯಲ್ಲಿರುವ ಯೋಜನೆಗಳು 998 ಕೋಟಿ ರೂ.
ಕಾವೇರಿ ನೀರಾವರಿ ನಿಗಮದಿಂದ ಟೆಂಡರ್ ಪ್ರಕ್ರಿಯೆಯಲ್ಲಿರುವ ಯೋಜನೆಗಳು 688.75 ಕೋಟಿ ರೂ.
ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿ ಆದೇಶ ನೀಡಬೇಕಿರುವ ಯೋಜನೆಗಳು
ಕೃಷ್ಣಾ ಜಲಭಾಗ್ಯ ನಿಗಮದಿಂದ 429 ಕೋಟಿ ರೂ. ಮೊತ್ತದ ಯೋಜನೆಗಳು
ಆದೇಶ ನೀಡಿ, ಚಾಲನೆಯಲ್ಲಿರುವ 1179 ಕೋಟಿ ರೂ. ಯೋಜನೆಗಳು ಶಂಕರ್ ಪಗೋಜಿ