ಡಬ್ಲಿನ್: ಐರ್ಲೆಂಡ್ ವಿರುದ್ಧ ಮಂಗಳವಾರ ನಡೆದ ಸರಣಿಯ ಎರಡನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಮುಖಾಮುಖಿಯಲ್ಲಿ ಪ್ರವಾಸಿ ಭಾರತ 4 ರನ್‌ಗಳ ಜಯ ಸಾಧಿಸಿ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ಬ್ಯಾಟಿಂಗ್ ಆಯ್ದುಕೊಂಡ ಭಾರತ, ದೀಪಕ್ ಹೂಡಾ 104 ರನ್ ಮತ್ತು ಸಂಜು ಸ್ಯಾಮ್ಸನ್ 77 ರನ್ ಕೊಡುಗೆಯೊಂದಿಗೆ 7 ವಿಕೆಟ್‌ಗೆ 225 ರನ್ ಗಳಿಸಿತು.
ದೀಪಕ್ ಹೂಡಾ ಚೊಚ್ಚಲ ಶತಕವನ್ನು ಬಾರಿಸಿದರು, 57 ಎಸೆತಗಳಲ್ಲಿ 104 ರನ್ ಗಳಿಸಿ ಟಿ 20 ಅಂತಾರಾಷ್ಟ್ರೀಯ ಶತಕ ಬಾರಿಸಿದ ನಾಲ್ಕನೇ ಭಾರತೀಯ ಎನಿಸಿಕೊಂಡರು, ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 77 ರನ್ ಗಳಿಸಿ ಭಾರತ 7 ವಿಕೆಟ್‌ಗೆ 225 ರನ್ ಗಳಿಸಲು ಶಕ್ತಿ ತುಂಬಿದರು.
ಭಾರತದ ಆಟಗಾರರು ಐರ್ಲೆಂಡ್ ಅನ್ನು ಐದು ವಿಕೆಟ್ ನಷ್ಟಕ್ಕೆ 221 ಕ್ಕೆ ಸೀಮಿತಗೊಳಿಸಿ ಪಂದ್ಯವನ್ನು ಗೆದ್ದರು. ಐರ್ಲೆಂಡ್ ಪರ ನಾಯಕ ಆಂಡಿ ಬಲ್ಬಿರ್ನಿ 60 ರನ್ ಗಳಿಸಿದರೆ, ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್ 40 ರನ್ ಗಳಿಸಿದರು. ಹ್ಯಾರಿ ಟೆಕ್ಟರ್ ಮತ್ತು ಜಾರ್ಜ್ ಡಾಕ್ರೆಲ್ ಕ್ರಮವಾಗಿ 39 ಮತ್ತು 34 ರನ್ ಗಳಿಸಿ ಔಟಾಗದೆ ಉಳಿದರು.
ಮೊದಲ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದಿತ್ತು.
ಸಂಕ್ಷಿಪ್ತ ಸ್ಕೋರ್‌ಗಳು
ಭಾರತ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 225 (ದೀಪಕ್ ಹೂಡಾ 104, ಸಂಜು ಸ್ಯಾಮ್ಸನ್ 77; ಮಾರ್ಕ್ ಅದೈರ್ 3/42, ಜೋಶ್ ಲಿಟಲ್ 2/38, ಕ್ರೇಗ್ ಯಂಗ್ 2/35).
ಐರ್ಲೆಂಡ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 221 (ಪಾಲ್ ಸ್ಟಿರ್ಲಿಂಗ್ 40, ಆಂಡ್ರ್ಯೂ ಬಲ್ಬಿರ್ನಿ 60, ಹ್ಯಾರಿ ಟೆಕ್ಟರ್ 39; ಜಾರ್ಜ್ ಡಾಕ್ರೆಲ್ ಔಟಾಗದೆ 34; ರವಿ ಬಿಷ್ಣೋಯ್ 1/41, ಉಮ್ರಾನ್ ಮಲಿಕ್ 1/42)