Advertisement

ಸಾಧನಗೈದ ವಿದ್ಯಾರ್ಥಿನಿಗೆ ಗಣ್ಯರಿಂದ ಸನ್ಮಾನ

05:39 PM May 14, 2018 | |

ಗೋಕಾಕ: ಹುಣಶ್ಯಾಳ ಪಿ.ಜಿ. ಗ್ರಾಮದ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಜನ್ಯ ಶಂಕರ ನೇಸರಗಿ 622 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 4ನೇ ರ್‍ಯಾಂಕ್‌ ಗಳಿಸಿದ್ದು ಹೆಮ್ಮೆಯ ವಿಷಯ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಎಂ.ಜಿ. ದಾಸರ ಹೇಳಿದರು.

Advertisement

 ಹುಣಶ್ಯಾಳ ಪಿ.ಜಿ. ಗ್ರಾಮದ ಸೌಜನ್ಯ ನೇಸರಗಿ ಮನೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿನಿಯನ್ನು ಸತ್ಕರಿಸಿ ಮಾತನಾಡಿದ ಅವರು,ವಿದ್ಯಾರ್ಥಿನಿ ಹಾಗೂ ಇತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕ ವೃಂದ ಅಭಿನಂದನಾರ್ಹರು. ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಅವರು ನೆಟ್ಟಿದ್ದ ಶೈಕ್ಷಣಿಕ ಮರ ಈಗ ಫಲ ನೀಡಲಾರಂಭಿಸಿದೆ ಎಂದರು. 

ಡೈಟ್‌ ಉಪನ್ಯಾಸಕಿ ರೇವತಿ ಪ್ರಕಾಶ ಮಠದ ಮಾತನಾಡಿ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದು, ಶೈಕ್ಷಣಿಕ ರಂಗದಲ್ಲಿಯೂ ಮಿಂಚುತ್ತಿದ್ದಾರೆ. ಮಹಿಳೆಯರಿಗೆ ಅವಶ್ಯಕ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದರೆ ಹೆಚ್ಚಿನ ಸಾಧನೆ ಮಾಡಬಲ್ಲಳು ಎಂದು ಹೇಳಿದರು. ವಿಷಯ ಪರಿವೀಕ್ಷಕ ಕೆ.ಎಚ್‌. ಹುದ್ದಾರ ಮಾತನಾಡಿ, ವಿದ್ಯಾರ್ಥಿನಿ ಸೌಜನ್ಯ ಸಾಧನೆ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದರು.

ಮೂಡಲಗಿ ವಲಯದ ಬಿಇಒ ಎ.ಸಿ. ಗಂಗಾಧರ ಮಾತನಾಡಿದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಸೌಜನ್ಯಾ ನೇಸರಗಿ, ಐಎಎಸ್‌ ಮಾಡುವ ಆಸೆ ಹೊಂದಿರುವುದಾಗಿ ತಿಳಿಸಿದಳು. ಮುಖ್ಯೋಪಾಧ್ಯಾಯ ಜಿ.ಎಲ್‌. ಕೋಳಿ, ಗಣಿತ ಶಿಕ್ಷಕ ಕೆ.ಎನ್‌. ಅರಭಾವಿ, ಶಿಕ್ಷಕ ವೃಂದ ಮತ್ತು ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next