Advertisement

ಜಿನಸೇನ ಪಟ್ಟಾಚಾರ್ಯರಿಗೆ ಗೌರವ: “ಮಠಗಳ ಸೇವಾಕಾರ್ಯ ವಿಸ್ತರಿಸಲಿ’

04:40 AM Feb 15, 2019 | Team Udayavani |

ಬೆಳ್ತಂಗಡಿ: ಸಮಾಜ ಸೇವೆಯಲ್ಲಿ ತೊಡಗುವವರಿಗೆ ಮಠಗಳಿಂದ ಅವಶ್ಯ ಮಾರ್ಗದರ್ಶನ ವಾಗಬೇಕಿದೆ. ಹೀಗಿದ್ದಾಗ ನಮ್ಮ ನಡುವಿನ ಕುಂದು ಕೊರತೆಗಳನ್ನು ಹೋಗಲಾಡಿಸುವ ಸುವಿಯೋಗ ಪ್ರಾಪ್ತಿಯಾಗುತ್ತದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.

Advertisement

ಪಂಚಮಹಾವೈಭವ ಮಂಟಪದಲ್ಲಿ ಗುರುವಾರ ನಾಂದಿಣಿ ಮಠದ ಶ್ರೀ ಜಿನಸೇನ ಪಟ್ಟಾಚಾರ್ಯವರ್ಯ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು.

ಮುನಿಗಳು ಆತ್ಮಲಾಭಕ್ಕಾಗಿ ಲೋಕ ಸಂಚಾರ ಮಾಡುತ್ತಾರೆ. ಭಟ್ಟಾರಕರು ಮಠ ಕಟ್ಟಿ ಸಮಾಜ ಸನ್ಮಾರ್ಗದಲ್ಲಿ ಮುನ್ನಡೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಶ್ರಾವಕ ಶ್ರಾವಕಿಯರ ಸಂಘಟನೆ ಸಮಾಜ ಬಲಿಷ್ಠವಾಗಿಸುವ ಪ್ರಕ್ರಿಯೆಯಲ್ಲಿ ತೊಡಗಬೇಕಿದ್ದು, ಸಮಾಜದ ಕೊರಗು ನೀಗಿಸುವ ಕಾರ್ಯವಾಗಬೇಕಿದೆ ಎಂದರು.

ಮಠಗಳು ಜೈನ ಸಮಾಜಕ್ಕೆ ಮಾರ್ಗ
ದರ್ಶನ ನೀಡುತ್ತಾ ಬಂದಿವೆ. ಕೆಲವು ಮಠಗಳು ವಿದ್ಯೆ, ಸಂಸ್ಕಾರ ಕಲಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದರು.
ಅರಹಂತಗಿರಿ ಮಠದ ಸೇವಾ ಚಟುವಟಿಕೆಗಳು ಹರ್ಷಕರ ವಿಚಾರ. ಮಠದಲ್ಲಿ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಧಾರ್ಮಿಕ ವಿದ್ಯೆ ಪಡೆಯುತ್ತಿದ್ದಾರೆ ಎಂದ ಹೆಗ್ಗಡೆ ಯವರು, ಆತ್ಮಜ್ಞಾನಕ್ಕಾಗಿ ಮುನಿಗಳು ದೇಶ ಸಂಚಾರ ನಡೆಸಿದರೆ ಮಠದ ಭಟ್ಟಾರಕರು ಸಾಮಾಜಿಕ ಕಾರ್ಯ ಗಳನ್ನು ನಡೆಸುತ್ತಿದ್ದಾರೆ ಎಂದರು.
ಶ್ರೀ ಜಿನಸೇನ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಸಮ್ಮಾನ ಸ್ವೀಕರಿಸಿ ಮಾತನಾಡಿ, ಡಾ| ಹೆಗ್ಗಡೆಯವರು ಧರ್ಮಸೇವೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಮಠಕ್ಕೆ ಮಾರ್ಗ ದರ್ಶನ ನೀಡಲು ಸದಾ ಸಿದ್ಧರಿರುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಅರಹಂತಗಿರಿ ಶ್ರೀ ಧವಲಕೀರ್ತಿ ಪಟ್ಟಾ ಚಾರ್ಯ ವರ್ಯ ಸ್ವಾಮೀಜಿ, ಕನಕಗಿರಿಯ ಶ್ರೀ ಭುವನಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಹುಂಚದ ಶ್ರೀ ಮದ್ದೇವೇಂದ್ರ ಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಕಂಬದಹಳ್ಳಿ ಶ್ರೀ ಭಾನುಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಗೆ ಬೆಳ್ಳಿಯ ದೀಪಗಳನ್ನು ನೀಡಿ ಗೌರವಿಸಲಾಯಿತು.

Advertisement

ಡಿ. ಹಷೇìಂದ್ರ ಕುಮಾರ್‌, ಡಿ. ಸುರೇಂದ್ರ ಕುಮಾರ್‌, ಡಿ. ರಾಜೇಂದ್ರ ಕುಮಾರ್‌, ನಿರಂಜನ್‌ ಕುಮಾರ್‌ ಉಪಸ್ಥಿತರಿದ್ದರು. ಸಂಪತ್‌ ಕುಮಾರ್‌ ಸ್ವಾಗತಿಸಿ, ಮಿತ್ರಸೇನ ಶೆಟ್ಟಿ ಹಾಗೂ ಸುವೀರ ಜೈನ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next