Advertisement

ಪ್ರಾಮಾಣಿಕ ಸೇವೆಗೆ ಭಗವಂತನ ಅನುಗ್ರಹವಿದೆ: ಪುತ್ತಿಗೆಶ್ರೀ

08:00 AM Aug 12, 2017 | |

ಉಡುಪಿ: “ವೈದ್ಯೋ ನಾರಾಯಣೋ ಹರಿಃ’ ಎನ್ನುವಂತೆ ರೋಗ ಕಾರಕನೂ, ರೋಗ ನಿವಾ ರಕನೂ ಪರಮಾತ್ಮನೇ ಆಗಿದ್ದಾನೆ. ಈ ನೆಲೆಯಲ್ಲಿ ವೈದ್ಯರು ತಮ್ಮ ವೃತ್ತಿಯನ್ನು “ದೇವರ ಸೇವೆ’ ಎನ್ನುವ ದೃಷ್ಟಿಯಿಂದ ದೇವರ ನಾಮಸ್ಮರಣೆಯೊಂದಿಗೆ ರೋಗಿ ಗಳ ಸೇವೆ ಮಾಡಿದಾಗ ಪರ ಮಾತ್ಮನ ಅನುಗ್ರಹವಾಗಿ ರೋಗಿಯು ಶೀಘ್ರ ಗುಣಮುಖನಾಗುತ್ತಾನೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ 
ತೀರ್ಥ ಶ್ರೀಪಾದರು ನುಡಿದರು.ಅಂಬಲಪಾಡಿ ಹೈಟೆಕ್‌ ಮೆಡಿಕೇರ್‌ ಆಸ್ಪತ್ರೆಯಲ್ಲಿ ಶುಕ್ರವಾರ ಮಕ್ಕಳ ಚಿಕಿತ್ಸಾ ವಿಭಾಗದ ಉದ್ಘಾಟನೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

Advertisement

ವೈದ್ಯಕೀಯ ವೃತ್ತಿ ಅತ್ಯಂತ ಶ್ರೇಷ್ಠ ವಾದ ವೃತ್ತಿಯಾಗಿದ್ದು ಆಸ್ಪತ್ರೆಯೊಂದು ಯೋಗ್ಯ ವೈದ್ಯರು, ಉತ್ತಮ ಆಧುನಿಕ ಸೌಲಭ್ಯ ಹಾಗೂ ಆಡಳಿತ ಮಂಡಳಿಯ ಸೇವಾ ಮನೋಭಾವದಿಂದ ಮಾತ್ರ ಉತ್ತಮ ಹೆಸರು ಗಳಿಸಲು ಸಾಧ್ಯವಿದೆ. ಸರಳ ಸಜ್ಜನಿಕೆ ವ್ಯಕ್ತಿತ್ವದ ಟಿ.ವಿ. ರಾವ್‌ ಅವರಿಂದ ಸ್ಥಾಪಿಸಲ್ಪಟ್ಟ ಈ ಆಸ್ಪತ್ರೆ ಆಧುನಿಕ ಸೌಲಭ್ಯಗಳೊಂದಿಗೆ ಸ್ಪೆಶಾಲಿಟಿ ಚಿಕಿತ್ಸಾ ವಿಭಾಗಗಳ ವೈದ್ಯ ಕೀಯ ಸೇವೆ ಮೂಲಕ ಇನ್ನಷ್ಟು ಹೆಸರು ಗಳಿಸಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

“ಹೈಟೆಕ್‌’ ಆಗಿ ಬೆಳವಣಿಗೆಯಾಗಲಿ
ಉದ್ಘಾಟನೆ ನೆರವೇರಿಸಿದ ಅಂಬಲ ಪಾಡಿ ದೇಗುಲದ ಧ‌ರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌ ಅವರು, ಆಸ್ಪತ್ರೆ ತನ್ನ ಹೆಸರಿಗೆ ತಕ್ಕಂತೆ ಇನ್ನಷ್ಟು “ಹೈಟೆಕ್‌’ ಆಗಿ ಬೆಳವಣಿಗೆ ಹೊಂದಲಿ ಎಂದರು.

ಹಿರಿಯ ವೈದ್ಯೆ ಡಾ| ನಳಿನಿ ಭಾಸ್ಕರಾನಂದ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ| ಸಪ್ನಾ ವಿನೀತ್‌ ಅಮೀನ್‌ ಅವರು ಮಾತನಾಡಿ, ವೈದ್ಯ ಕೀಯ ವೃತ್ತಿ ದೇವರ ಪೂಜೆ ಎನ್ನುವ ನೆಲೆಯಲ್ಲಿ ಸೇವೆ ಸಲ್ಲಿಸಿದಲ್ಲಿ ಜನರ ಪ್ರೀತಿಗೆ ಪಾತ್ರರಾಗಲು ಸಾಧ್ಯವಾಗಿದೆ. ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಬದ್ಧರಿದ್ದೇವೆ ಎಂದರು. 

ಡಾ| ಕೆ.ಎನ್‌. ರಾವ್‌ ಶುಭ ಹಾರೈಸಿ ದರು. ಸಾಯಿನಾಥ್‌ ಉದ್ಯಾವರ ಕಾರ್ಯ ಕ್ರಮ ನಿರೂಪಿಸಿದರು. ನವಜಾತ ಶಿಶು ಶುಶ್ರುತಾ ತಜ್ಞ ಡಾ| ಜನಾರ್ದನ ಪ್ರಭು ಅವರು ವಂದಿಸಿದರು.

Advertisement

ವಿವಿಧ ವಿಭಾಗಗಳು-ವಿಶೇಷ ಸೌಲಭ್ಯಗಳು
ಪ್ರಸಿದ್ಧ ವೈದ್ಯರನ್ನು ಒಳಗೊಂಡ ಸ್ತ್ರೀರೋಗ, ಜನರಲ್‌ ಮೆಡಿಸಿನ್‌, ಜನರಲ್‌ ಸರ್ಜರಿ, ಮಕ್ಕಳ ವಿಭಾಗ, ಎಲುಬು ಮತ್ತು ಕೀಲು ವಿಭಾಗ, ನರರೋಗ ವಿಭಾಗ, ಚರ್ಮರೋಗ ವಿಭಾಗ ಮುಂತಾದ ಹೊರರೋಗಿ ವಿಭಾಗ ಹಾಗೂ ಸುಸಜ್ಜಿತ ಸೌಲಭ್ಯಗಳ ಒಳರೋಗಿ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ಘಟಕವನ್ನು ಆಸ್ಪತ್ರೆ ಹೊಂದಿದೆ. ಆಸ್ಪತ್ರೆಯಲ್ಲಿ ರೋಗ ಪತ್ತೆ ಹಚ್ಚಲು ಸಹಕಾರಿಯಾಗಲು ವಿಭಾಗವು ಅತ್ಯಾಧುನಿಕ ಸಿಟಿ, ಎಂಆರ್‌ಐ, ಇಇಜಿ, ಇಎಂಜಿ, ಎನ್‌ಸಿವಿ ಉಪಕರಣಗಳನ್ನು ಹೊಂದಿದೆ. ಡೊಪ್ಲರ್‌ ಸ್ಕ್ಯಾನ್‌, ಸುಸಜ್ಜಿತ ಆಪರೇಶನ್‌ ಥಿಯೇಟರ್‌, ಲ್ಯಾಬೋರೇಟರಿ, ಅತ್ಯುತ್ತಮ ನರ್ಸಿಂಗ್‌ ಕೇರ್‌, ಎಕ್ಸ್‌ರೇ ವಿಭಾಗ, ಐವಿಎಫ್ ಸೆಂಟರ್‌ ಲಭ್ಯವಿದೆ ಎಂದು ಆಸ್ಪತ್ರೆ ವೈದ್ಯಕೀಯ ನಿರ್ದೇಶಕ, ಸೂಕ್ಷಾತಿಸೂಕ್ಷ್ಮ ಶಸ್ತ್ರಚಿಕಿತ್ಸಾ ತಜ್ಞ ಡಾ| ಟಿ.ಎಸ್‌. ರಾವ್‌ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next