Advertisement
ಪಟ್ಟಣದ ಗುರುಭವನದಲ್ಲಿ ದೇವದಾಸಿ ವಿಮೋಚನೆ ಸಂಘ ಮತ್ತು ಡಾ| ಜ್ಯೋತಿಬಸು ಸೇವಾ ಟ್ರಸ್ಟ್‌ನಿಂದ ನಡೆದ ದೇವದಾಸಿ ಮಕ್ಕಳ ಸರಳ ಸಾಮೂಹಿಕ ಮದುವೆ ಸಮಾರಂಭದಲ್ಲಿ ಅವರು ಮಾತನಾಡಿದರು. ದೇವದಾಸಿ ಪದ್ಧತಿ, ಅಸ್ಪೃಶ್ಯತೆ ಸಾಮಾಜಿಕ ಪಿಡುಗುಗಳಾಗಿದ್ದು, ಸರಕಾರ ಅನಿಷ್ಟ ಪದ್ದತಿ ಹೋಗಲಾಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಸರಳ ಸಾಮೂಹಿಕ ವಿವಾಹಗಳು ಪ್ರಜಾಸತ್ತತೆಯ ಆದರ್ಶಗಳು. ಸರಳತೆಯ ಮೌಲ್ಯಗಳಿಗೆ ಮನ್ನಣೆ ಸಿಗಬೇಕು. ಸರಳ ಸಾಮೂಹಿಕ ವಿವಾಹಗಳು, ಸಾಂಪ್ರಾದಾಯಿಕ ವಿವಾಹಗಳಿಂದ ಶ್ರೇಷ್ಠವಾದವುಗಳು. ಕುಟುಂಬಗಳು ಸುಖಮಯ ಜೀವನಸಾಗಿಸಬೇಕಾದರೆ ಸೊಸೆ ಮಗಳಾಬೇಕು, ಅತ್ತೆ ತಾಯಿಯಂತಾದರೆ ಮನೆಗಳು ಹೊಡೆಯುವುದಿಲ್ಲ. ಭೌತಿಕವಾಗಿ ಪರಾವಲಂಬಿಗಳಾಗಬಾರದು. ವಿವೇಕತನದಿಂದ ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳಬೇಕು. ವಿಚಾರಗಳಲ್ಲಿ ಬದಲಾವಣೆಯಾದರೆ ಮಾತ್ರ ಬದುಕು ಬದಲಾವಣೆಯಾಗುತ್ತದೆ ಎಂದು ಹೇಳಿದರು.
ಸಮಿತಿಯ ಜಿಲ್ಲಾ ಸಂಚಾಲಯ ಎಂ.ಜಂಬಯ್ಯ ನಾಯ್ಕ, ಬರಹಗಾರ ಹುರುಕಡ್ಲಿ ಶಿವಕುಮಾರ, ಎಸ್ಸಿಎಸ್ಟಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ್, ದೇವದಾಸಿ ವಿಮೋಚನಾ ಸಂಘದ ತಾಲೂಕು ಅಧ್ಯಕ್ಷೆ ಎಚ್.ಬಿ. ಮೈಲಮ್ಮ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಮಂಜುಳಾ ಹವಾಲ್ದಾರ್, ಸಂಘದ ತಾಲೂಕು ಕಾರ್ಯದರ್ಶಿ ಡಿ.ಚಾಂದ್‌ಬಿ, ಬಿ.ಸರೋಜ, ಕಾರ್ಯದರ್ಶಿ ಎಚ್.ಮಂಜುನಾಥ ಇತರರಿದ್ದರು.