ಉಡುಪಿ: ಆಸ್ಪತ್ರೆಗಳಿಗೆ ದೊರೆಯುವ ಗೌರವ, ಪ್ರಸಿದ್ಧಿಯಲ್ಲಿ ನರ್ಸಿಂಗ್ ಸೇವೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಅವರು ಮಾಹೆಯ ಬೆಳ್ಳಿಹಬ್ಬ ಸಂಭ್ರಮಾಚರಣೆಯ ಪ್ರಯುಕ್ತ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ
ಡಾ| ಟಿ.ಎಂ.ಎ. ಪೈ ಆಡಿಟೋರಿಯಂ ನಲ್ಲಿ ಜರಗಿದ “ಆರೋಗ್ಯ ಕಾಳಜಿ ಕ್ಷೇತ್ರದಲ್ಲಿ ಜಾಗತಿಕ ಸವಾಲುಗಳು’ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನಶೈಲಿ ಬದಲಾವಣೆಯಿಂದ ಬರುವ ಮಧುಮೇಹ, ಅಧಿಕ ರಕ್ತ ದೊತ್ತಡ ಪೀಡಿತರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಖಾಸಗಿ ಸಂಸ್ಥೆಗಳು ಆರೋಗ್ಯ ಕ್ಷೇತ್ರಕ್ಕೆ ಹಣ್ತೀದ ಕೊಡುಗೆ ನೀಡುತ್ತಿವೆ. ತಾಂತ್ರಿಕವಾಗಿ ಇಂದು ತುಂಬಾ ಬೆಳವಣಿಗೆಗಳಾಗಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜನರ ಆರೋಗ್ಯ ಸುಧಾರಣೆಗೂ ಗಮನ ನೀಡಬೇಕಾದ ಆವಶ್ಯಕತೆ ಇದೆ ಎಂದು ಡಾ| ಬಲ್ಲಾಳ್ ಹೇಳಿದರು.
ಅಸೋಸಿಯೇಟ್ ಡೀನ್ ಡಾ| ಜುಡಿತ್ ಎ. ನೊರೋನ್ಹಾ ಸ್ವಾಗತಿಸಿದರು. ಡಾ| ಎಲ್ಸಾ ಸನತೊಂಬಿ ದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಜ್ಯೋತಿ ಚಕ್ರವರ್ತಿ ವಂದಿಸಿದರು. ದೇಶ ವಿದೇಶಗಳ 228 ಮಂದಿ
ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.