ಬೆಂಗಳೂರು: ಹುವಾವೇ ಸಮೂಹದ ಇ-ಬ್ರಾಂಡ್ ಹಾನರ್ ತನ್ನ ಇತ್ತೀಚೆಗೆ ಬಿಡುಗಡೆಯಾದ “ಹಾನರ್ 9ಎನ್ 4+128 ಜಿಬಿ’ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಸಂಗೀತಾ ಮೊಬೈಲ್ಸ್ ಸಹಯೋಗದಲ್ಲಿ ಆಫ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಿದೆ.
ಗುರುವಾರ ಗಾಂಧಿ ಬಜಾರ್‌ನ ಸಂಗೀತಾ ಮೊಬೈಲ್ಸ್ ಪಿಂಕ್ ಮಳಿಗೆಯಲ್ಲಿ ನಡೆದ ಫೋನ್ ಅನಾವರಣ ಕಾರ್ಯಕ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್, ಹುವಾವೇಯ ಕನ್ಸೂಮರ್ ಬ್ಯುಸಿನೆಸ್ ಗ್ರೂಪ್‌ನ ಮಾರಾಟ ಉಪಾಧ್ಯಕ್ಷ ಪಿ. ಸಂಜೀವ್, ಎಲ್‌ಎಫ್‌ಆರ್ ಬ್ಯುಸಿನೆಸ್ ನಿರ್ದೇಶಕ ಹಿತೇಶ್ ಶರ್ಮ ಹಾಗೂ ಸಂಗೀತಾ ಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಚಂದ್ರ ಅವರು ಹಾನರ್ 9ಎನ್ ಪ್ರದರ್ಶಿಸಿದರು.
ನಂತರ ಪಿ. ಸಂಜೀವ್ ಅವರು ಮಾತನಾಡಿ, 17,999 ರೂ.ಗಳಿಂದ ಆರಂಭಗೊಳ್ಳುವ ಈ ಸ್ಮಾರ್ಟ್‌ಫೋನ್ ಆನ್‌ಲೈನ್ ಬೆಲೆಗೆ ಸರಿಸಮನಾಗಿದ್ದು, ಫುಲ್ ಎಚ್‌ಡಿ ನಾಚ್ ಡಿಸ್‌ಪ್ಲೇ ಮತ್ತು ಅತ್ಯಾಕರ್ಷಕ ವಿನ್ಯಾಸದಿಂದ ಕೂಡಿದೆ. ಕಡಿಮೆ ಬಂಡವಾಳದಲ್ಲಿ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದರ ಮಾಲೀಕತ್ವ ಗ್ರಾಹಕರು ಪಡೆಯಲಿದ್ದಾರೆ. ಆ.2ರಿಂದಲೇ ದೇಶದ ಎಲ್ಲ ಸಂಗೀತಾ ಮೊಬೈಲ್ ಸ್ಟೋರ್‌ಗಳಲ್ಲಿ ಹಾನರ್-9ಎನ್ ದೊರೆಯುತ್ತಿ¤ದೆ ಎಂದು ತಿಳಿಸಿದರು.
ಹಾನರ್ 9ಎನ್ ವೈಶಿಷ್ಟ: 14.84 ಸೆಂ.ಮೀ. ನ್ಯಾರೊ ನಾಚ್ ಡಿಸೈನ್, ಎಫ್‌ಎಚ್‌ಡಿ+ ರೆಸೊಲ್ಯೂಷನ್ 19:9 ಆಸ್ಪೆಕ್ಟ್ ರೇಷಿಯೊ ಮತ್ತು ಶೇ.79ರಷ್ಟು ಸ್ಕ್ರೀನ್ ಟು ಬಾಡಿ ರೇಷಿಯೊ ಇದಕ್ಕಿದೆ. ಕನಿಷ್ಠ ಬೆಜೆ‚ಲ್ ಅನುಭವದೊಂದಿಗೆ ಹೆಚ್ಚು ಸ್ಕ್ರೀನ್ ಏರಿಯಾ, 12 ಪದರಗಳ ಪ್ರೀಮಿಯಂ ರಿಯರ್ ಗ್ಲಾಸ್ ಡಿಸೈನ್ ವಿತ್ ಗ್ಲಾಸಿ ಫಿನಿಷ್, ಪ್ರೈಮರಿ ಕ್ಯಾಮೆರಾ ಅಡ್ವಾನ್ಸಡ್ ಹಾರ್ಡ್‌ವೇರ್‌ನೊಂದಿಗೆ ಸನ್ನದ್ಧವಾಗಿದೆ.
ಆಪ್ಟಿಮೈಸ್ಡ್ ಸಾಫ್ಟ್‌ವೇರ್ ಮೂಲಕ ಸ್ಪಷ್ಟ ಹಾಗೂ ಉತ್ತಮ ಛಾಯಾಚಿತ್ರಗಳನ್ನು ಸೆರೆ ಹಿಡಿಯಬಹುದು. 9ಎನ್‌ನ ಫಾಸ್ಟ್ ಫೋಕಸಿಂಗ್ ತಂತ್ರಜ್ಞಾನದ ಬೊಕೆ ಎಫೆಕ್ಟ್ ಮೂಲಕ ವೃತ್ತಿಪರರಂತೆ ಛಾಯಾಚಿತ್ರಗಳನ್ನು ಸೆರೆ ಹಿಡಿಯಬಹುದು. 16ಎಂಪಿ ಫ್ರಂಟ್ ಸೆಲ್ಫಿ ಕ್ಯಾಮರಾ 4 ಇನ್ 1 ಲೈಟ್ ಫ್ಯೂಷನ್ ತಂತ್ರಜ್ಞಾನದಿಂದ ಕೂಡಿದೆ. ಸಂಗೀತಾ ಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್. ಸುಭಾಷ್ ಚಂದ್ರ ಹಾಜರಿದ್ದರು.