ಹೊನ್ನಾವರ: ಅಪಘಾತದಲ್ಲಿ ಗಾಯವಾಗಿಮಿದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಅಂಗಾಂಗಗಳನ್ನು ದಾನ ಮಾಡಲಾಗಿದ್ದು,6 ಜನರ ಜೀವ ಉಳಿಸಲು ಸಹಾಯಕವಾಗಿದೆ.
ದಾವಣಗೆರೆ ಬಳಿಯ ಗುಡಾಳ ಗುಮ್ಮನೂರುಗ್ರಾಮದಲ್ಲಿ ಜ.22 ರಂದು ಸಂಭವಿಸಿದಅಪಘಾತದಲ್ಲಿ ನಂಜುಂಡಪ್ಪ ಎಚ್.ಎನ್. ಅವರಪತ್ನಿ ಇಂದ್ರಮ್ಮ (57) ಗಾಯಗೊಂಡಿದ್ದರು. ಹೆಚ್ಚಿನಚಿಕಿತ್ಸೆಗಾಗಿ 23 ರಂದು ಅವರನ್ನು ಮಣಿಪಾಲಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಇಂದ್ರಮ್ಮಅವರನ್ನು ರಕ್ಷಿಸಲು ಎಲ್ಲ ಸೂಕ್ತ ಚಿಕಿತ್ಸೆ ನೀಡಿಪ್ರಯತ್ನಿಸಿದರೂ ಚೇತರಿಸಿಕೊಳ್ಳುವ ಯಾವುದೇಲಕ್ಷಣ ಕಂಡುಬಂದಿಲ್ಲ. ಅವರನ್ನು 6ಗಂಟೆಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ ಕೊನೆಗೆಅ ಧಿಕೃತವಾಗಿ ಮಿದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದರು.
ಮಿದುಳು ನಿಷ್ಕ್ರಿಯಗೊಂಡಅವರ ಅಂಗಾಂಗಗಳನ್ನು ದಾನ ಮಾಡುವುದು ಪುಣ್ಯದ ಕೆಲಸ ಎಂದು ಭಾವಿಸಿದ ನಂಜುಡಪ್ಪಎಚ್.ಎನ್. ಈ ಬಗ್ಗೆ ನಿರ್ಧರಿಸಿದ್ದಾರೆ.ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವಅಂಗವನ್ನು ದಾನಮಾಡುವ ತಮ್ಮ ಇಚ್ಛೆಯನ್ನುನಂಜುಂಡಪ್ಪ ಅವರು ವೈದ್ಯರಿಗೆ ತಿಳಿಸಿ ಹೃದಯ,ಹೃದಯ ಕವಾಟಗಳು, ಯಕೃತ್ತು, ಎರಡುಮೂತ್ರಪಿಂಡ ಮತ್ತು ಎರಡು ಕಾರ್ನಿಯಾಗಳನ್ನು,ಎರಡು ಕಣ್ಣುಗುಡ್ಡೆಗಳನ್ನು ದಾನ ಮಾಡಿದ್ದರಿಂದ6 ಜನರ ಜೀವ ಉಳಿಸಲು ಸಹಾಯಕವಾಗಿದೆ.ಜೀವನ ಸಾರ್ಥಕತೆ ಪ್ರೊಟೋಕಾಲ್ ಮತ್ತುನಿರ್ಧಾರದ ಪ್ರಕಾರ ನೋಂದಾಯಿತ ರೋಗಿಗಳಿಗೆಎರಡು ಕಾರ್ನಿಯಾಗಳು ಮತ್ತು ಒಂದುಮೂತ್ರಪಿಂಡವನ್ನು ಮಣಿಪಾಲದ ಕಸ್ತೂರ್ಬಾಆಸ್ಪತ್ರೆ ರೋಗಿಗಳಿಗೆ ಬಳಸಲಾಯಿತು.
ಒಂದು ಮೂತ್ರಪಿಂಡವನ್ನು ಮಂಗಳೂರಿನ ಯನಪೋವಾಆಸ್ಪತ್ರೆಗೆ, ಹೃದಯ, ಹೃದಯ ಕವಾಟವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ದಾನಮಾಡಿದ ಅಂಗಾಂಗವನ್ನು ಉಡುಪಿಪೊಲೀಸ್ ಇಲಾಖೆ ಸಹಯೋಗದೊಂದಿಗೆಗ್ರೀನ್ ಕಾರಿಡಾರ್‌ನಲ್ಲಿ ಮಣಿಪಾಲದಿಂದಮಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಕೊಂಡೊಯ್ದು ಬಳಿಕ ಚೆನ್ನೈಗೆ ರವಾನಿಸಲಾಯಿತು.