Advertisement

ಕನ್ನಡಾಭಿಮಾನಿ ಸಂಘದಿಂದ ನಾಡ ಹಬ್ಬಕ್ಕೆ ಸಕಲ ಸಿದ್ಧತೆ

03:47 PM Oct 27, 2018 | Team Udayavani |

ಹೊನ್ನಾವರ: ಕಳೆದ 23 ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ಹೊನ್ನಾವರದ ಕನ್ನಡಾಭಿಮಾನಿ ಸಂಘವು ಈ ಬಾರಿಯು 4 ದಿನ ಅದ್ಧೂರಿಯಾಗಿ ಆಚರಿಸಲಿದೆ ಎಂದು ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಸತ್ಯ ಜಾವಗಲ್‌ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಕಾರ್ಯಕ್ರಮದ ಕುರಿತು ವಿವರಿಸಿದರು.

Advertisement

ನ.1ರಂದು ಶಾಸಕ ಸುನೀಲ ನಾಯ್ಕ ಉದ್ಘಾಟಿಸಲಿದ್ದು, ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋವಾ ಸಹಾಯುಕ ಆಯುಕ್ತ ರಾಘವೇಂದ್ರ ರಾಯ್ಕರ್‌, ಪಪಂ ಅಧ್ಯಕ್ಷೆ ರಾಜಶ್ರೀ ನಾಯ್ಕ, ಸಿಪಿಐ ಚೆಲವರಾಜು, ಖ್ಯಾತ ವೈದ್ಯ ಡಾ| ಆಶಿಕ್‌ ಹೆಗ್ಡೆ, ಕಲ್ಪತರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಂಗಾಧರನ್‌ ಭಾಗವಹಿಸಲಿದ್ದಾರೆ.

ವಿಶೇಷ ಆಮಂತ್ರಿತರಾಗಿ ಚಿತ್ರನಟಿ ರೇಣು ಶಿಕಾರಿ ಭಾಗವಹಿಸಲಿದ್ದಾರೆ. ನಿವೃತ್ತ ಯೋಧರಾದ ಸುಬ್ರಹ್ಮಣ್ಯ ಭಟ್‌, ವಾಮನ ನಾಯ್ಕರನ್ನು ಸನ್ಮಾನಿಸಲಾಗುತ್ತಿದ್ದು, ಇತ್ತೀಚೆ ರಸ್ತೆ ಅಪಘಾತದಲ್ಲಿ ನಿಧನರಾದ ವಿದುಷಿ ಸೌಮ್ಯ ಭಟ್‌ ಶಿಷ್ಯರಿಂದ ನೃತ್ಯ ನಮನ ನಡೆಯಲಿದೆ. ಮುರುಳಿನಾದ ತಂಡದಿಂದ ಕೊಳಲು ವಾದನ ನಡೆಯಲಿದ್ದು, ಮೊದಲಿಗೆ ಫ್ರೆಂಡ್ಸ ಮೆಲೋಡಿಸ್‌ ತಂಡದಿಂದ ರಸಮಂಜರಿ ನಡೆಯಲಿದೆ.

2ನೇ ದಿನ ಭಟ್ಕಳ ಡಿವೈಎಸ್ಪಿ ವೆಲೈಂಟೈನ್‌ ಡಿಸೋಜಾ ಉದ್ಘಾಟಿಸುವರು. ಇಡಗುಂಜಿ ಧರ್ಮದರ್ಶಿ ಡಾ| ಜಿ.ಜಿ. ಸಭಾಹಿತ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಲಯನ್ಸ್‌ ಮಾಜಿ ಜಿಲ್ಲಾ ಗೌರ್ನರ್‌ ಗಣಪತಿ ನಾಯಕ, ಸಹಾಯಕ ಆಯುಕ್ತ ಸಾಧಿಕ್‌ ಅಹ್ಮದ್‌, ಎಂಪಿಇ ಸೊಸೈಟಿ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್‌ ಶಿವಾನಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಿ.ಹೆಗಡೆ, ಗ್ಲೋರಿ ವ್ಯಾಯಮ ಶಾಲೆ ಮಾಲೀಕ ಗ್ಲೋರಿ ಮಿರಾಂಡಾ ಪಾಲ್ಗೊಳ್ಳಲಿದ್ದಾರೆ.

ಈ ದಿನ ರಾಷ್ಟ್ರೀಯ ದೇಹದಾರ್ಡ್ಯ ತೀರ್ಪುದಾರ ಜಿ.ಡಿ.ಭಟ್‌, ಸಾಹಸಿ ಮೀನುಗಾರ ಕೇಶವ್‌ ತಾಂಡೇಲ್‌, ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಕ್ರೀಡಾಪಟು ರೋಷನ್‌ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು. ಈ ದಿನ ಜಿಲ್ಲಾ ಮಟ್ಟದ ದೇಹದಾರ್ಡ್ಯಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ನಂತರ ನೃತ್ಯ ಹಾಗೂ ಮನೊರಂಜನಾ ಕಾರ್ಯಕ್ರಮ ನಡೆಯಲಿದೆ. 

Advertisement

3ನೇ ದಿನ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಲಿದ್ದು ಖ್ಯಾತ ಪತ್ರಿಕಾ ಛಾಯಾ ಗ್ರಾಹಕ ಅಷ್ಟ್ರೋ ಮೋಹನ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ, ಹಿರಿಯ ರಾಜಕೀಯ ಧುರೀಣ ಗಣಪಯ್ಯ ಗೌಡ, ಶ್ರೀಕುಮಾರ ಸಮೂಹ ಸಂಸ್ಥೆ ಮಾಲೀಕ ವೆಂಕಟಮಣ ಹೆಗಡೆ, ಬಿಎಸ್‌ಎನ್‌ಎಲ್‌ ಉಪವಿಭಾಗಿಯ ಅಭಿಯಂತ ನೀಲಂ ಪಾಯ್ದೆ, ವಿಶೇಷ ಆಮಂತ್ರಿತರಾಗಿ ಖ್ಯಾತ ಚಿತ್ರನಟ ಸುರೇಶ ರೈ ಭಾಗವಹಿಸಲಿದ್ದಾರೆ. 

ಕಿರುತರೆಯಲ್ಲಿ ಸಾಧನೆ ಮಾಡುತ್ತಿರುವ ನಟ ಲಕ್ಷ್ಮೀಶ ಭಟ್‌, ಗುರುಕುಲದ ಮುಖ್ಯಾಧ್ಯಾಪಕ ಮಹೇಶಪ್ಪ ಅವರನ್ನು ಸನ್ಮಾನಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಕನ್ನಡ ಶೇ.100 ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಕರಾವಳಿ ಕನ್ನಡ ಕೋಗಿಲೆಯ ಅಂತಿಮ ಸ್ಪರ್ಧೆ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಇನ್ಪಿನಿಟಿ ಡಾನ್ಸ ಕ್ರ್ಯೂ  ತಂಡದಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು ನಂತರ ಮಹೇಶ ಆಚಾರ್ಯ ತಂಡವರಿಂದ ಸಂಗೀತ ಸಂಜೆ ನಡೆಯಲಿದೆ.

ಕೊನೆಯ ದಿನ ಭಾರತದ ಉದ್ಯೋಗರತ್ನ ಪ್ರಶಸ್ತಿ ಪುರಸ್ಕೃತ ಯಶೋಧರ ನಾಯ್ಕ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ್ಯೂ ಎಜ್ಯುಕೇಶನ್‌ ಸಂಸ್ಥೆಯ ಜಗದೀಶ ಪೈ, ಅಂತಾರಾಷ್ಟ್ರೀಯ ಮತ್ಸೋದ್ಯಮಿ ಸ್ಟೀವನ್‌ ಡಿಸೋಜಾ, ಖ್ಯಾತ ವೈದ್ಯ ಡಾ| ಚಂದ್ರಶೇಖರ ಶೆಟ್ಟಿ, ಉದ್ಯಮಿ ರವಿಕುಮಾರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ವಿಶೇಷ ಆಮಂತ್ರಿತರಾಗಿ ಚಿತ್ರನಟಿ ಸುರೇಖಾ ಭಾಗವಹಿಸಲಿದ್ದಾರೆ. ಈ ದಿನ ಪ್ಯಾರ್‌ ಏಷ್ಯಾ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಕಿಶನ್‌ ಗಂಗೊಳ್ಳಿ, ಅಂತಾರಾಷ್ಟ್ರೀಯ ಕ್ರೀಡಾಪಟು ರಾಜೇಶ ಮಡಿವಾಳ, ಕಾರ್ಯನಿರ್ವಾಹಕ ಅಭಿಯಂತರ ಸದಾನಂದ ಸಾಳೆಹಿತ್ತಲ್‌ ಅವರನ್ನು ಸನ್ಮಾನಿಸಲಾಗುವುದು.

ಮೊದಲಿಗೆ ರಾಜ್ಯಮಟ್ಟದ ಆಯ್ದ ಗುಂಪು ನೃತ್ಯ ಸ್ಪರ್ಧೆ ಡಾನ್ಸ್‌ ಕರ್ನಾಟಕ ಡಾನ್ಸ್‌ ಹಮ್ಮಿಕೊಳ್ಳಲಾಗಿದೆ. ನಂತರ ವಾಕ್‌ ಚತುರ ನಾರಾಯಣ ಶಾಸ್ತ್ರಿ ವಾಗ್‌ ಜರಿ, ಕರ್ನಾಟಕ ದರ್ಶನ ನಡೆಯಲಿದೆ. ನಂತರ ರಾಗಶ್ರೀ ತಂಡದಿಂದ ನಾದಝರಿ, ಸುದೇಶ ಮಂಗಳೂರು ತಂಡದಿಂದ ಸಂಗೀತ ಸಂಜೆ ನಡೆಯಲಿದೆ ಎಂದು ಅವರು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳಿಯ ಕಲಾವಿದರಿಗೆ ಪೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ. ಆಸಕ್ತರು ಸ್ಪರ್ಧಾ ವಿವರಣೆಯೊಂದಿಗೆ ಅ.31 ರೊಳಗೆ ಹೆಸರನ್ನು ನೋಂದಾಯಿಸುವಂತೆ ಕೋರಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಉದಯರಾಜ ಮೇಸ್ತ, ಗೌರವಾಧ್ಯಕ್ಷ ಎಸ್‌.ಜೆ. ಕೈರನ್‌, ಗೌರವ ಸದಸ್ಯ ಜಿ.ಟಿ.ಪೈ, ಡಾ ಚಂದ್ರಶೇಖರ ಶೆಟ್ಟಿ, ಡಾ| ಆಶಿಕ್‌ಕುಮಾರ್‌ ಹೆಗಡೆ, ಸದಸ್ಯರಾದ ಸುಧಾಕರ ಹೊನ್ನಾವರ, ಗಣಪತಿ ಮೆಸ್ತ, ವಿನಾಯಕ ಆಚಾರಿ, ರಾಜು ಮಾಳಗಿಮನಿ, ಭಾಸ್ಕರ್‌ ತಾಂಡೇಲ್‌, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next