ಗ್ರಾಮ ಚಾವಡಿ ಅಂದರೆ ತಪ್ಪಾಗಲಾರದು. ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಗೆ ಸಕಲ ಸೇವೆ ನೀಡುವ ಈ ಕಚೇರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲ. ತಾಲೂಕಿನಲ್ಲಿ 24 ಗ್ರಾಮ ಚಾವಡಿಗಳಲ್ಲಿ ಸಮಪರ್ಕ ಕುಡಿಯುವ ನೀರು, ಶೌಚಾಲಯ ಸೌಕರ್ಯವಿಲ್ಲದೇ ಇರುವ ಚಾವಡಿಗಳೆ ಅಧಿಕ. ಹಲವಡೆ ವಿದ್ಯುತ್ ಸಂಪರ್ಕವು ಇಲ್ಲದೇ ಪರದಾಡಬೇಕಾದ ಸ್ಥಿತಿ ಇದೆ.
Advertisement
ಹೊಸಾಕುಳಿ, ಕಡತೋಕಾ ಹಾಗೂ ಸಾಲ್ಕೋಡ್ ಗ್ರಾಮ ಚಾವಡಿಯಲ್ಲಿ ಕುಳಿತು ಕಾರ್ಯ ನಿರ್ವಹಿಸಲು ಭಯಪಡಬೇಕಾದ ಸ್ಥಿತಿ ಇದೆ. ಕಟ್ಟಡ ಬಿರುಕು ಬಿಟ್ಟಿರುವುದು ಒಂದಡೆಯಾದರೆ ಮೇಲ್ಛಾವಣೆ ಈಗಲೋ ಆಗಲೋ ಬೀಳುವಂತಿದೆ. ಗ್ರಾಮ ಲೆಕ್ಕಿಗರು, ಗ್ರಾಮದ ಕುಟುಂಬಗಳು ಹಾಗೂ ಆಸ್ತಿ-ಪಾಸ್ತಿಗಳ ಬಗ್ಗೆ ಕಳೆದ ಮೂರ್‍ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಹುಟ್ಟಿದವರು, ಸತ್ತವರ ಲೆಕ್ಕವನ್ನೆಲ್ಲಾ ಕಡತದ ಜೊತೆ ತಲೆಯಲ್ಲಿಯೂ ತುಂಬಿಕೊಂಡಿರುವ ಉಗ್ರಾಣರು ನಿತ್ಯ ಕರ್ತವ್ಯಕ್ಕೆ ಹಾಜರಾಗುವ ಕಚೇರಿಯ ಬಗ್ಗೆ ಈ ಪರಿಯ ನಿಷ್ಕಾಳಜಿ ಯಾಕೆ?
ದಾಖಲಾತಿಗಳನ್ನು ಅ ಧಿಕೃತವಾಗಿ ಯಾವುದೇ ಇಲಾಖೆಗೆ ಸಲ್ಲಿಸುವುದಿದ್ದರೂ ಗ್ರಾಮಲೆಕ್ಕಿಗರ ಪರಿಶೀಲನೆ ಅತೀ ಅಗತ್ಯ.
ಮೂರು ಗ್ರಾಮ ಚಾವಡಿಯ ಒಂದು ಭಾಗ ಮುರಿದು ಬಿಳುವಂತಿದ್ದರೆ, ಅಲ್ಲಲ್ಲಿ ಹಂಚು ಪಕಾಸುಗಳು ಆಗಲೋ ಈಗಲೋ ಬೀಳುವಂತಿದೆ.