Advertisement
ಕನ್ನಡದಲ್ಲಿ 15ಕ್ಕೂ ಹೆಚ್ಚು ಕೃತಿಗಳನ್ನು, ಮರಾಠಿ ಮತ್ತು ಇಂಗ್ಲಿಷ್ ಕೃತಿಗಳನ್ನು ರಾಮತೀರ್ಥದ ಶ್ರೀಧರ ನಿವಾಸ ಪ್ರಕಟಿಸಿದೆ. ಶ್ರೀಧರರಿಗೆ ಇಂದಿಗೂ ಲಕ್ಷಾಂತರ ಭಕ್ತರಿದ್ದಾರೆ. ಇವರಲ್ಲಿ 30ವರ್ಷಕ್ಕೂ ಹೆಚ್ಚುಕಾಲ ಅವರ ಹತ್ತಿರ ಇದ್ದು ಸೇವೆ ನಡೆಸಿ, ಯೋಗಕ್ಷೇಮ ನೋಡಿಕೊಳ್ಳುತ್ತ ಶ್ರೀಧರರಿಗೆ ಲೋಕದ ಯೋಗಕ್ಷೇಮದ ಕುರಿತು ತಪಸ್ಸು ಮಾಡಲು ಅವಕಾಶ ಮಾಡಿಕೊಟ್ಟವರು ಹೊನ್ನಾವರ ಗಾಣಗೆರೆಯ ಜನಾರ್ದನ ಭಟ್ಟರು ಮತ್ತು ಸಿದ್ಧಾಪುರದ ಜಾನಕಕ್ಕನವರು.
Related Articles
Advertisement
ಭವತಿ ಭಿಕ್ಷಾಂದೇಹಿ ಎಂಬ ಸಮರ್ಥ ರಾಮದಾಸರ ಸಂಪ್ರದಾಯದಲ್ಲಿ ಆಶ್ರಮ ನಡೆಸುವ ಜನಾರ್ದನ ರಾಮದಾಸಿ ಮತ್ತು ಜಾನಕಕ್ಕ ಶ್ರೀಧರರ ಭಕ್ತರ ಸಹಕಾರದಿಂದ ಪುಟ್ಟ ಆಶ್ರಮ ನಿರ್ಮಿಸಿಕೊಂಡು ವರ್ಷಕ್ಕೆರಡು ಬಾರಿ ಶ್ರೀಧರರ ಸ್ಮರಣೆ ಕಾರ್ಯಕ್ರಮ ಮಾಡುತ್ತ ಭವಿಷ್ಯತ್ತಿನಲ್ಲಿ ಶ್ರೀಧರರು ಪವಾಡ ಪುರುಷ, ಮೂರ್ತಿರೂಪಿ ಮಾತ್ರ ಆಗದೆ ಮಹಾನ್ ಧಾರ್ಮಿಕ ಚಿಂತಕರು ಎಂಬುದನ್ನು ಶಾಶ್ವತಗೊಳಿಸಿದ್ದಾರೆ. ಅವಧೂತ ಪರಂಪರೆಯ ಶ್ರೀಧರರು ತಮ್ಮ ಸಂಕಲ್ಪದಂತೆ ಜೀವನದುದ್ದಕ್ಕೂ ಎಲ್ಲ ಸ್ತ್ರೀಯರನ್ನು ತಾಯಿಯಂತೆ ಕಂಡರು.
ಹಣವನ್ನು ಕೈಯಿಂದ ಮುಟ್ಟಲಿಲ್ಲ. ಕಾಣಿಕೆ ಹಣವನ್ನು ಆಯಾ ಊರಿನ ದೇವಾಲಯದ ಅಭಿವೃದ್ಧಿಗೆ ಬಳಸಿ ಮುಂದಿನೂರಿಗೆ ಪ್ರಯಾಣ ಬೆಳೆಸುತ್ತ ದೇಶ ತಂಬ ಓಡಾಡಿದವರು. ಸತ್ಛರಿತರಾದ ಜನರಿಂದ ಸಂಗ್ರಹಿಸಲ್ಪಟ್ಟ, ಬರೆಯಲ್ಪಟ್ಟ ಎಲ್ಲಾ ವೈದಿಕ ಧರ್ಮ ಗ್ರಂಥಗಳು ಧರ್ಮಪ್ರಾಣರಾದ ಎಲ್ಲ ಸಜ್ಜನರಿಗಾಗಿ ಆನಂದ ಮಂಗಳವಾದವು. ಕರ್ಮ, ಜ್ಞಾನ ಮತ್ತು ಉಪಾಸನೆಗಳೆಂಬ ಮೂರು ಬಗೆಯುಳ್ಳ ವೈದಿಕ ಧರ್ಮ ವಿಜೃಂಭಿಸಲಿ ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ರಾಮತೀರ್ಥ ಶ್ರೀಧರಾಶ್ರಮ ಧನ್ಯವಾಗಿದೆ, ಭವಿತವ್ಯದ ಪುಣ್ಯವಾಗಿದೆ.
ಜೀಯು, ಹೊನ್ನಾವರ