Advertisement

ಮನೆಯಿಂದ ಹೊರ ಬರುತ್ತಿಲ್ಲ ಜನ

11:32 AM Mar 21, 2020 | Naveen |

ಹೊನ್ನಾಳಿ: ಕೊರೊನಾ ವೈರಸ್‌ ಭೀತಿಯಿಂದ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಜನತೆ ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ರಸ್ತೆಗೆ ಬಂದರೆ ವೈರಸ್‌ ಹರಡಬಹುದೆಂಬ ಭೀತಿಯಂದ ಜನತೆ ಹೊರ ಬರಲು ಹೆದರುತ್ತಿದ್ದಾರೆ.

Advertisement

ಸಿನೆಮಾ, ಶಾಲಾ-ಕಾಲೇಜುಗಳು ಬಂದ್‌ ಮಾಡಿರುವದರಿಂದ ಗ್ರಾಮೀಣ ಭಾಗದ ಬಹುತೇಕರು ಪಟ್ಟಣಕ್ಕೆ ಬರುತ್ತಿಲ್ಲ. ಬೇರೆ ಯಾವ ಕೆಲಸಕ್ಕೆ ಬಾರದಿದ್ದರೂ ರೈತರು, ಸಾರ್ವಜನಿಕರು, ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಪ್ರತಿನಿತ್ಯ ಬ್ಯಾಂಕಿಗೆ ಬರುತ್ತಿದ್ದರು. ಆದರೆ ಕೊರೋನಾ ಭೀತಿಯಿಂದ ಅದರಲ್ಲೂ ಅರ್ಧದಷ್ಟು ಗ್ರಾಹಕರು ಬ್ಯಾಂಕಿನತ್ತ ಬರುವುದನ್ನು ನಿಲ್ಲಿಸಿದ್ದಾರೆ.

ಸ್ಯಾನಿಟೆ„ಜರ್‌ಗೆ ಗ್ರಾಹಕರ ಒತ್ತಾಯ: ಪಟ್ಟಣದಲ್ಲಿರುವ ಮೂರು ಎಟಿಎಂ ಗಳಲ್ಲಿ ಈ ವರೆಗೂ ಸ್ಯಾನಿಟೈಸರ್‌ ಇರಿಸಿಲ್ಲ. ಈ ಕುರಿತು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೆ ಬ್ಯಾಂಕ್‌ ವ್ಯವಸ್ಥಾಪಕರು ಎಟಿಎಂ ನಲ್ಲಿ ಸ್ಯಾನಿಟೈಸರ್‌ ಇರಿಸಬೇಕು ಎಂದು ಬ್ಯಾಂಕ್‌ ಗ್ರಾಹಕರು ಆಗ್ರಹಿಸಿದ್ದಾರೆ.

ಮೆಚ್ಚುಗೆ: ಪ.ಪಂ. ಮುಖ್ಯಾಧಿಕಾರಿ ಎಸ್‌. ಆರ್‌. ವೀರಭದ್ರಯ್ಯ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಬೆಳಗ್ಗೆ ಹಾಗೂ ಸಂಜೆ ಪಟ್ಟಣದ ಎಲ್ಲಾ ಚರಂಡಿಗಳಿಗೆ ಡಿಡಿಟಿ ಪೌಡರ್‌ ಸಿಂಹಪಡಿಸುತ್ತಿದ್ದಾರೆ. ಗೂಡಂಗಡಿಗಳ ತೆರವು, ವಾರದ ಸಂತೆ ರದ್ದು ಸೇರಿದಂತೆ ಅನೇಕ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪೊಲೀಸ್‌ ಸ್ಟೇಷನ್‌ ಖಾಲಿ: ವಿವಿಧ ಚಿಕ್ಕಪುಟ್ಟ ಜಗಳಗಳ ಕಾರಣದಿಂದ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರುತ್ತಿದ್ದ ಜನರ ಸಂಖ್ಯೆಯೂ ಕಳೆದ 15 ದಿನಗಳಿಮದ ಕಡಿಮೆಯಾಗಿದೆ. ತುಂಬಾ ಅನಿವಾರ್ಯವಾದರೆ ಮಾತ್ರ ಠಾಣೆಗೆ ಬರುತ್ತಿದ್ದಾರೆ ಹೊರತು ಸುಖಾ ಸುಮ್ಮನೆ ಮೊದಲಿನಂತೆ ಬರುತ್ತಿಲ್ಲ. ಇದರಿಂದ ಪೊಲೀಸರು ತುಸು ನಿಟ್ಟಿಸಿರು ಬಿಟ್ಟಿದ್ದಾರೆ.

Advertisement

ಮತ್ತೊಬ್ಬನ ಮೇಲೆ ತೀವ್ರ ನಿಗಾ: ವಿದೇಶಗಳಿಂದ ಆಗಮಿಸಿರುವ ಐವರ ಜತೆಗೆ ಕೇರಳದ ಕಾಸರಗೋಡಿನಿಂದ ಬಂದಿರುವ ವ್ಯಕ್ತಿಯೊಬ್ಬರನ್ನು ಕೂಡ ಮನೆಗೆ ತೆರಳಿ ತಾಲೂಕು ವೈದ್ಯಾಧಿಕಾರಿಗಳ ತಂಡ ಪರಿಶೀಲಿಸಿದೆ. ಸ್ವಲ್ಪ ಜ್ವರ ಇದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರನ್ನೂ ಮನೆ ನಿಗಾವಣೆಯಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next