ಹೊನ್ನಾಳಿ: ನೇರಲಗುಂಡಿ ಗ್ರಾಮದಕೆರೆ ಹೂಳೆತ್ತುವ ಕಾಮಗಾರಿಯಲ್ಲಿಶಾಸಕರು ತಮ್ಮ ಜಮೀನಿಗೆಗುತ್ತಿಗೆದಾರರಿಂದ 3 ಸಾವಿರಟಿಪ್ಪರ್ ಲಾರಿಗಳಿಂದ ಮಣ್ಣುಹಾಕಿಸಿಕೊಂಡಿರುವುದು ಸತ್ಯಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಆರೋಪಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, 3 ಸಾವಿರಟಿಪ್ಪರ್ ಲಾರಿ ಮಣ್ಣನ್ನು ತಮ್ಮಜಮೀನಿಗೆ ಹಾಕಿಸಿಕೊಳ್ಳಲು ಶಾಸಕರುನಯಾಪೈಸೆ ಖರ್ಚು ಮಾಡಿಲ್ಲ. ಕಳೆದವಾರ ನೇರಲಗುಂಡಿ ಗ್ರಾಮದ ಕೆರೆಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆಮಾಡುವ ಸಂದರ್ಭದಲ್ಲಿ ಕೆರೆ ಹೂಳೆತ್ತುವಕಾಮಗಾರಿಯಲ್ಲಿ ಯಾವುದೇ ಭ್ರಷ್ಟಾಚಾರನಡೆದಿಲ್ಲ ಹಾಗೂ ಕೆರೆ ಮಣ್ಣನ್ನು ತಮ್ಮಜಮೀನಿಗೆ ಹಾಕಿಸಿಕೊಂಡಿಲ್ಲ.
ಮಾಜಿಶಾಸಕರು ಸುಳ್ಳು ಆರೋಪ ಮಾಡಿದ್ದಾರೆಎಂದು ಶಾಸಕ ರೇಣುಕಾಚಾರ್ಯ ಸ್ಪಷ್ಟೀಕರಣನೀಡಿದ್ದಾರೆ. ಇದಕ್ಕೆ ನಾನು ಈಗ ಉತ್ತರನೀಡುತ್ತಿದ್ದೇನೆ ಎಂದು ಹೇಳಿದರು.2020ರ ಜೂ.18ರಂದು ತಾಲೂಕಿನ8 ಕೆರೆಗಳ ಹೂಳೆತ್ತುವ ಕಾಮಗಾರಿಗೆಒಟ್ಟು 4 ಕೋಟಿ ರೂ. ಮಂಜೂರಾಗಿತ್ತು.ಈ ಅನುದಾನದ 50 ಲಕ್ಷ ರೂ.ವೆಚ್ಚದಲ್ಲಿ ನೇರಲಗುಂಡಿ ಕೆರೆ ಹೂಳೆತ್ತುವಕಾಮಗಾರಿಗೆ 2021ರ ಜೂ.18ರಂದುಶಾಸಕರು ಭೂಮಿಪೂಜೆ ಮಾಡಿದ್ದರು.
ಕಾಮಗಾರಿ ಇಲ್ಲದೆ ಬಿಲ್‌ಮಾಡಿಸಿಕೊಳ್ಳಲು ಶಾಸಕರುಹೊರಟ ವಿಚಾರ ತಿಳಿದ ಜಿಪಂಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ಮುಖಂಡ ಆರ್. ನಾಗಪ್ಪಅವರು ಸರ್ಕಾರದ ಮುಖ್ಯಕಾರ್ಯದರ್ಶಿ, ಹಾಗೂ ಸಂಬಂ ಧಿಸಿದಇಲಾಖೆಗೆ ಪತ್ರ ಬರೆದು ದೂರು ದಾಖಲುಮಾಡಿದ್ದರು. ನಂತರ ಬಿಲ್ ಮಾಡಿಕೊಳ್ಳುವಪ್ರಕ್ರಿಯೆಗೆ ತಡೆಯಾಯಿತು. ಅದೇಅನುದಾನಕ್ಕೆ ಈಗ ಮತ್ತೆ ಭೂಮಿಪೂಜೆಮಾಡಿದ್ದಾರೆ ಎಂದು ಟೀಕಿಸಿದರು.
ಒಂದು ಪೈಸೆ ಖರ್ಚಿಲ್ಲದೆ ತಮ್ಮ ಜಮೀನಿಗೆ3 ಸಾವಿರ ಟಿಪ್ಪರ್ ಲಾರಿ ಮಣ್ಣುಹಾಕಿಸಿಕೊಂಡಿರುವುದು ಚನ್ನೇಶನಾಣೆಗೂಸತ್ಯ. ಇದಕ್ಕೆ ನಾನು ಬದ್ಧನಾಗಿದ್ದೇನೆ ಎಂದರು. ಉಪ ನೋಂದಣಾಧಿ ಕಾರಿಗಳಕಚೇರಿ, ಕಂದಾಯ ಇಲಾಖೆ ಸೇರಿದಂತೆಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರವ್ಯಾಪಕವಾಗಿದೆ. ತಕ್ಷಣ ಭ್ರಷ್ಟಾಚಾರನಿಲ್ಲದಿದ್ದರೆ ತಾಲೂಕು ಕಚೇರಿ ಮುಂದೆಧರಣಿ ನಡೆಸುವುದಾಗಿ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿಅಧ್ಯಕ್ಷ ಆರ್. ನಾಗಪ್ಪ, ಯುವ ಕಾಂಗ್ರೆಸ್‌ತಾಲೂಕು ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ,ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷಮನು, ಕಾರ್ಯದರ್ಶಿ ಸುಜಯ್ ಇದ್ದರು.