Advertisement

ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಕೆ

08:26 PM Jul 24, 2022 | Team Udayavani |

ಹೊನ್ನಾಳಿ: ಮುಂದಿನ ದಿನಗಳಲ್ಲಿ ತಿಂಗಳಿಗೆ ಎರಡುಜಿಲ್ಲಾ ಧಿಕಾರಿಗಳ ನಡೆ-ಹಳ್ಳಿಯ ಕಡೆ ಯೋಜನೆಯಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದುಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕಮ್ಮಾರಗಟ್ಟ ಗ್ರಾಮದಲ್ಲಿ ಶನಿವಾರಹಮ್ಮಿಕೊಂಡಿದ್ದ ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪ್ರತಿ ಗ್ರಾಪಂನಲ್ಲಿ ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಬಂಧಪಟ್ಟಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಫಲಾನುಭವಿಗಳಿಗೆಸರ್ಕಾರದ ವಿವಿಧ ಸೌಲತ್ತುಗಳನ್ನು ವಿತರಿಸಿಸಾಮಾನ್ಯ ಜನರ ಸಮಸ್ಯೆ ಆಲಿಸಿ ಪರಿಹಾರಕಂಡುಕೊಳ್ಳಲಾಗುವುದು ಎಂದು ಹೇಳಿದರು.ಜನಪ್ರತಿನಿ ಧಿಗಳು ಹಾಗೂ ಅ ಧಿಕಾರಿಗಳುಒಂದೇ ನಾಣ್ಯದ ಎರಡು ಮುಖಗಳಿದ್ದಂತೆಶಾಸಕರು ಶಾಸನ ಸಭೆಯಲ್ಲಿ ಶಾಸನಗಳನ್ನು,ಯೋಜನೆಗಳನ್ನು ರೂಪಿಸಿದರೆ, ಅ ಧಿಕಾರಿಗಳುರೂಪಿಸಿದ ಎಲ್ಲ ಶಾಸನಗಳನ್ನು ಹಾಗೂ ಯೋಜನೆಕಾರ್ಯಗತಗೊಳಿಸುವರು.

ಶಾಸಕರು ಏನೇ ಕಾನೂನು,ಕಟ್ಟಳೆ ರೂಪಿಸಿ ಅನುದಾನ ಬಿಡುಗಡೆಗೊಳಿಸಿದರೂಅಂಬೇಡ್ಕರ್‌ ಸಂವಿಧಾನದಲ್ಲಿ ಅ ಧಿಕಾರಿಗಳು ಕಾನೂನಿನಪ್ರಕಾರ ಸಹಿ ಹಾಕಿ ಎಲ್ಲ ವ್ಯವಸ್ಥೆ ಮಾಡಬೇಕು ಎನ್ನುವಅಂಶವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಎಲ್ಲ ಅಧಿ ಕಾರವನ್ನುಶಾಸಕರಿಗೆ ನೀಡಿದ್ದರೇ ಬೇಕಾದ ಹಾಗೆ ಅನುದಾನಹಂಚಿ ಆರ್ಥಿಕ ದಿವಾಳಿತನ ಉಂಟು ಮಾಡುತ್ತಿದ್ದರುಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next