Advertisement

ದುಶ್ಚಟ ತ್ಯಜಿಸಿ ಬದುಕು ರೂಪಿಸಿಕೊಳ್ಳಿ

03:30 PM Jul 01, 2022 | Team Udayavani |

ಹೊನ್ನಾಳಿ: ಯುವ ಪೀಳಿಗೆನಮ್ಮ ದೇಶದ ಸಂಪತ್ತು. ಆದರೆಯುವಕರು ಮಾದಕ ವಸ್ತುಗಳಿಗೆದಾಸರಾಗುತ್ತಿರುವುದು ಬೇಸರದಸಂಗತಿ ಎಂದು ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಅಂತಾರಾಷ್ಟ್ರೀಯ ಮಾದಕ ವಸ್ತುವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿನಗರದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಹಮ್ಮಿಕೊಂಡಿದ್ದಜಾಗೃತಿ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

Advertisement

ಶಿಕ್ಷಣ ಎಂಬಮೂರಕ್ಷರ ಮನುಷ್ಯನ ಜೀವನದಲ್ಲಿಅತ್ಯಮೂಲ್ಯವಾಗಿದೆ. ಶಿಕ್ಷಣಇಲ್ಲದವರ ಬಾಳು ಅಂಧಕಾರದಲ್ಲಿಮುಳುಗಿ ಹೋಗುತ್ತದೆ. ಆದ್ದರಿಂದವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನಗಮನ ಹರಿಸಬೇಕು. ಯುವಕರುದುಶ್ಚಟಗಳಿಂದ ದೂರವಿದ್ದುಭವಿಷ್ಯವನ್ನು ಉಜ್ವಲವಾಗಿರೂಪಿಸಿಕೊಳ್ಳಬೇಕು ಎಂದರು.ಮಾದಕ ವಸ್ತುಗಳನ್ನು ಸೇವನೆಮಾಡುವುದರಿಂದ ಯುವಕರಜೀವನದ ಜೊತೆಗೆ ಪರಿಸರ ಕೂಡಹಾಳಾಗುತ್ತಿದೆ.

ಮಾದಕ ವಸ್ತುಗಳಿಂದಕೊಲೆ, ಸುಲಿಗೆಯಂತಹ ಪ್ರಕರಣಗಳುಹೆಚ್ಚಾಗುತ್ತಿವೆ. ಹೊನ್ನಾಳಿ ಪಟ್ಟಣದಲ್ಲಿಗಾಂಜಾ ಮಾರಾಟವಾಗುತ್ತಿದ್ದು,ಇದಕ್ಕೆ ಕಡಿವಾಣ ಹಾಕುವಂತೆಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆನೀಡಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next