Advertisement

ಹೊನ್ನಾಳಿ ಉಪವಿಭಾಗಾಧಿಕಾರಿ ಕೋರ್ಟ್‌ನಲ್ಲಿ ಕಲಾಪ ಶುರು

02:54 PM Mar 24, 2022 | Team Udayavani |

ಹೊನ್ನಾಳಿ: ಪಟ್ಟಣದಲ್ಲಿ ನೂತನಉಪವಿಭಾಗಾ ಧಿಕಾರಿಗಳ ಕಚೇರಿಅಸ್ತಿತ್ವಕ್ಕೆ ಬಂದಿದ್ದು ಉಪ ವಿಭಾಗದದಂಡಾಧಿ ಕಾರಿಗಳ ನ್ಯಾಯಾಲಯದಲ್ಲಿಸೋಮವಾರದಿಂದ ಅ ಧಿಕೃತವಾಗಿಕೋರ್ಟ್‌ ಕಲಾಪ ಆರಂಭವಾಯಿತು.ಕಳೆದ ಫೆ. 28ರಂದು ಹೊನ್ನಾಳಿಯಲ್ಲಿನೂತನ ವಿಭಾಗಾಧಿ ಕಾರಿಗಳ ಕಚೇರಿಕಂದಾಯ ಸಚಿವ ಆರ್‌. ಅಶೋಕ್‌,ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು.

Advertisement

ದಾವಣಗೆರೆ ಉಪವಿಭಾಗದ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿದ್ದ269 ಪ್ರಕರಣಗಳು ನೂತನವಾಗಿಆರಂಭವಾಗಿರುವ ಹೊನ್ನಾಳಿಉಪವಿಭಾಗದ ದಂಡಾಧಿ ಕಾರಿಗಳನ್ಯಾಯಾಲಯಕ್ಕೆ ವರ್ಗಾವಣೆಗೊಂಡಿವೆ.ಸದ್ಯಕ್ಕೆ ತಿಂಗಳಿಗೆ ಎರಡು ದಿನ ಹೊನ್ನಾಳಿಹಾಗೂ ಎರಡು ದಿನ ಚನ್ನಗಿರಿಯಲ್ಲಿನ್ಯಾಯಾಲಯ ಕಲಾಪ ನಡೆಯಲಿದೆ.ಮುಂದಿನ ದಿನಗಳಲ್ಲಿ ನಾಲ್ಕು ದಿನಗಳ ಕಾಲಹೊನ್ನಾಳಿಯಲ್ಲಿಯೇ ನಡೆಯಲಿದೆ ಎಂದುಉಪವಿಭಾಗಾಧಿ ಕಾರಿ ಕಚೇರಿ ಮೂಲಗಳುತಿಳಿಸಿವೆ.

ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಗಡಿ ಗ್ರಾಮಗಳಿಂದ ದಾವಣಗೆರೆಗೆ ನಾವುಹಾಗೂ ನಮ್ಮ ಕಕ್ಷಿದಾರರು ಹೋಗಿಬರುವುದರಲ್ಲೇ ಒಂದು ದಿನ ಪೂರ್ತಿವ್ಯಯವಾಗುತ್ತಿತ್ತು. ಆದರೆ ಶಾಸಕರಸತತ ಪ್ರಯತ್ನದಿಂದ ವಿಭಾಗ ದಂಡಾಧಿಕಾರಿಗಳ ನ್ಯಾಯಾಲಯ ಇಲ್ಲಿಯೇಪ್ರಾರಂಭವಾಗಿರುವುದರಿಂದ ವಕೀಲರುಹಾಗೂ ಕಕ್ಷಿದಾರರಿಗೆ ಸಮಯ ಹಾಗೂಹಣ ಉಳಿತಾಯವಾಗಿದೆ. ಅವಳಿತಾಲೂಕಿನ ಎಲ್ಲಾ ಕಕ್ಷಿದಾರರ ಪರವಾಗಿಶಾಸಕರನ್ನು ಅಭಿನಂದಿಸುವುದಾಗಿಹೊನ್ನಾಳಿಯ ಹಿರಿಯ ವಕೀಲ ಬಿ.ಉಮೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next