Advertisement

ಶಿವನ ಆರಾಧನೆಯಿಂದ ಪಾಪ ದೂರ

08:37 PM Mar 02, 2022 | Team Udayavani |

ಹೊನ್ನಾಳಿ: ಈ ಜಗತ್ತು ಶಿವಮಯವಾಗಿದ್ದುಶಿವನೇ ಸೃಷ್ಟಿಕರ್ತ. ಶಿವನ ಕಲ್ಪನೆಅರ್ಥ ವ್ಯಾಪ್ತಿ ವಿಶಾಲವಾದುದು. ಶಿವಸಾಮೀಪ್ಯದಲ್ಲಿದ್ದು ಧ್ಯಾನಿಸುವುದೇನಿಜವಾದ ಮಹಾಶಿವರಾತ್ರಿ ಎಂದುಬಾಳೆಹೊನ್ನೂರು ರಂಭಾಪುರಿ ಪೀಠದಜಗದ್ಗುರು ಡಾ| ಪ್ರಸನ್ನ ರೇಣುಕವೀರಸೋಮೇಶ್ವರ ಶಿವಾಚಾರ್ಯಭಗವತ್ಪಾದರು ಹೇಳಿದರು.

Advertisement

ನ್ಯಾಮತಿ ತಾಲೂಕಿನ ದೊಡ್ಡೇರಿಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತಮಂಗಳವಾರ ಇಷ್ಟಲಿಂಗ ಪೂಜೆನೆರವೇರಿಸಿ ಶ್ರೀಗಳು ಆಶೀರ್ವಚನನೀಡಿದರು. ಸಮಸ್ತ ಜೀವಿಗಳನ್ನುಸಮಾನವಾಗಿ ಕಾಣುವ ದೇವರೆಂದರೆಶಿವನಾಗಿದ್ದಾನೆ. ಹೀಗಾಗಿ ಸಕಲದೇವಾನುದೇವತೆಗಳು ಋಷಿಮುನಿಗಳುದಾನವರು ಮಾನವರೆಲ್ಲರೂ ಶಿವನನ್ನುಪೂಜಿಸಿ ಸತ#ಲಗಳನ್ನು ಪಡೆದಿದ್ದಾರೆ.ಶಿವತತ್ವವನ್ನು ಸಾûಾತ್ಕಾರಗೊಳಿಸಿಕೊಳ್ಳುವದಿನವೇ ಶಿವರಾತ್ರಿಯಾಗಿದೆ.

ಶಿವನಿಗೆಅಭಿಷೇಕ, ಭಸ್ಮ, ಬಿಲ್ವ ಪತ್ರಿಗಳೆಂದರೆತುಂಬಾ ಪ್ರಧಾನವಾಗಿವೆ. ಜನ್ಮ ಜನ್ಮಗಳಪಾಪ ತಾಪಗಳು ಶಿವನ ಆರಾಧನೆಯಿಂದದೂರವಾಗಿ ಜೀವನದಲ್ಲಿ ಶಾಂತಿ, ಸಂತೃಪ್ತಿಮತ್ತು ಆತೊ¾àನ್ನತಿ ಪಡೆಯಬಹುದು.ಶಿವನ ಪೂಜಿಸಿದರೆ ಸರ್ವ ದೇವರನ್ನುಪೂಜಿಸಿದ ಫಲ ಪ್ರಾಪ್ತವಾಗುತ್ತದೆ. ಹಾಗಾಗಿಮಹಾ ಶಿವರಾತ್ರಿಯಂದು ಎಲ್ಲರೂ ಶಿವನಪೂಜೆ, ದರ್ಶನ ಮಾಡಿ ಪುನೀತರಾಗುವಸಂಪ್ರದಾಯ ಬೆಳೆದು ಬಂದಿದೆ ಎಂದರು.

ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯಸ್ವಾಮಿಗಳು ಶಿವನ ಮಹಿಮೆ ಬಗ್ಗೆತಿಳಿಸಿದರು. ಲೋಕಯ್ಯ ಸ್ವಾಗತಿಸಿದರು.ಸಿಎಂ ರಾಜಕೀಯ ಕಾರ್ಯದರ್ಶಿಎಂ.ಪಿ. ರೇಣುಕಾಚಾರ್ಯ ದಂಪತಿಗ್ರಾಮಕ್ಕೆ ಆಗಮಿಸಿ ರಂಭಾಪುರಿ ಶ್ರೀಗಳದರ್ಶನಾಶೀರ್ವಾದ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next