Advertisement
ಪಟ್ಟಣದಿಂದ ಸುಮಾರು ಮೂರು ಕಿ.ಮೀ.ದೂರವಿರುವ ತುಂಗಾ ಮೇಲ್ದಂಡೆ ಕಚೇರಿ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಒಂದು ವರ್ಷದ ಹಿಂದೆ ಮಕ್ಕಳಿಲ್ಲದೆ ಸೊರಗಿತ್ತು. ಇನ್ನೇನು ಇತಿಹಾಸದ ಪುಟ ಸೇರಲಿದೆ ಈ ಶಾಲೆ ಎನ್ನುವಷ್ಟರಲ್ಲಿ ಶಾಲೆಯಲ್ಲಿ ಉತ್ತಮ ವಾತಾವರಣ ಹಾಗೂ ಪರಿಸರ ಸೃಷ್ಟಿಸಿ ಮಕ್ಕಳನ್ನು ಶಾಲೆಗೆ ಬರುವಂತೆ ಆಕರ್ಷಣೀಯವಾಗಿ ಮಾಡಿದ್ದಾರೆ ಶಿಕ್ಷಕಿ ಕೆ.ಸಿ.ಅನಿತಾ.ಬಹಳ ವರ್ಷಗಳಿಂದ ಸುಣ್ಣ ಬಣ್ಣ ಕಾಣದ ಶಾಲೆ ಕಟ್ಟಡ ಕಳೆಗುಂದಿತ್ತು. ಗ್ರಾ.ಪಂ, ಎಸ್ ಡಿಎಂಸಿ ಸಹಕಾರದಿಂದ ಎರಡು ಕೊಠಡಿಗಳ ಕಟ್ಟಡಕ್ಕೆ ಆಯಿಲ್ ಪೈಂಟ್ ಮಾಡಿಸಿ ಶಾಲಾ ಕಟ್ಟಡ ಮಿರಿ ಮಿರಿ ಮಿಂಚುವಂತೆ ಮಾಡಿದ್ದಾರೆ. ಗ್ರಾಪಂ 9 ಸಾವಿರ ರೂ. ಅನುದಾನ ನೀಡಿದ್ದರೆ ಶಿಕ್ಷಕಿ ಅನಿತಾ 15 ಸಾವಿರ ರೂ. ತಮ್ಮ ಸಂಬಳದಿಂದ ಖರ್ಚು ಮಾಡಿ 24 ಸಾವಿರ ರೂ. ವೆಚ್ಚದಲ್ಲಿ ಬಣ್ಣ ಮಾಡಿಸಿದ್ದಾರೆ. . ಶಾಲಾ ಆವರಣದಲ್ಲಿ ಹೂವಿನ ಗಿಡಗಳು ಹಾಗೂ ಇತರ ಸಸ್ಯ ಸಂಕುಲ ಬೆಳೆಸಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಿದ್ದಾರೆ.
ಜಿ.ಇ. ರಾಜೀವ್,
ಬಿಇಒ, ಹೊನ್ನಾಳಿ