Advertisement
ಡಾ| ಎಚ್. ತಿಪ್ಪೇರುದ್ರಸ್ವಾಮಿ ಅವರು ಬಹು ದೊಡ್ಡ ಸಾಹಿತಿ ಹಾಗೂ ನಾಡು ಕಂಡ ಉತ್ತಮ ಕವಿ. ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಜನಿಸಿ ಮೈಸೂರು ಹಾಗೂ ವಿವಿಧ ಸ್ಥಳಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಕದಳಿ ಕರ್ಪೂರ, ಕರ್ತಾರನ ಕಮ್ಮಟ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದರು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಡಾ| ಎಚ್.ತಿಪ್ಪೇರುದ್ರಸ್ವಾಮಿ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
Related Articles
Advertisement
ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಡಾ| ಎಚ್. ತಿಪ್ಪೇರುದ್ರಸ್ವಾಮಿ ಸ್ಮಾರಕ ಗ್ರಂಥ ಭವನ ಹೊಸರೂಪ ಕಂಡು ಓದುಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ.
ಚಿಂತನ ಸಂಜೆ: ಪ್ರತಿ ಶನಿವಾರ ಮಧ್ಯಾಹ್ನ 3.30ಕ್ಕೆ ಸ್ಮಾರಕ ಗ್ರಂಥ ಭವನದ ಎದುರು ಚಿಂತನ ಸಂಜೆ ಆಯೋಜಿಸಲಾಗುತ್ತದೆ.
ಸಾಹಿತಿಗಳು, ಉಪನ್ಯಾಸಕರು, ಚಿಂತಕರು ಭಾಗವಹಿಸಿ ಒಂದೆರೆಡು ಗಂಟೆ ಕಾಲ ಚಿಂತನ ಮಂಥನ ಕಾರ್ಯದಲ್ಲಿ ತೊಡಗುತ್ತಾರೆ. ಪ್ರತಿ ಶನಿವಾರ ಒಬ್ಬ ಸಾಹಿತಿ ಒಂದು ವಿಷಯದ ಕುರಿತು ಮಾತನಾಡುತ್ತಾರೆ. ನಂತರ ಆ ವಿಷಯದ ಸಮಗ್ರ ವಿಶ್ಲೇಷಣೆ ನಡೆಯುತ್ತದೆ. ಬಲು ಆಸಕ್ತಿಯಿಂದ ಸಾಗುವ ಈ ಕಾರ್ಯಕ್ರಮ ಒಮ್ಮೊಮ್ಮೆ ರಾತ್ರಿ 7.30ರವರೆಗೂ ಮುಂದುವರಿಯುತ್ತದೆ.
ನಮ್ಮ ತಾಲೂಕಿನವರೇ ಆದ ಡಾ| ಎಚ್.ತಿಪ್ಪೇರುದ್ರಸ್ವಾಮಿ ಸ್ಮಾರಕ ಗ್ರಂಥ ಭವನವನ್ನು ಈ ಹಿಂದೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದ, ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರ ಕಾಲದಲ್ಲಿ ನಿರ್ಮಿಸಲಾಗಿದೆ. ಇದು ಸದಾ ಚಟುವಟಿಕೆಯಿಂದ ಕೂಡಿರಬೇಕು ಹಾಗೂ ಓದುಗರನ್ನು ಆಕರ್ಷಿಸಬೇಕು ಎಂದು ಕಟ್ಟಡಕ್ಕೆ ಕಾಯಕಲ್ಪ ನೀಡಲಾಗಿದೆ. •ಎಚ್.ಎಂ. ಅರುಣ್‌ಕುಮಾರ್, ಕಾರ್ಯದರ್ಶಿ, ಹೊಸ ಸಂಪದ, ಹೊನ್ನಾಳಿ.