Advertisement

ಸಚಿವ ಸ್ಥಾನಕ್ಕಿಂತ ಅಭಿವೃದ್ಧಿ ಮುಖ್ಯ

03:08 PM Jan 24, 2021 | Team Udayavani |

ಹೊನ್ನಾಳಿ: ನನಗೆ ಸಚಿವ ಸ್ಥಾನಕ್ಕಿಂತ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ಧಿಯೇ ಮುಖ್ಯ ಎಂದು
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಇದನ್ನೂ ಓದಿ :  ಎಪಿಎಂಸಿಯಲ್ಲಿ ಲಾರಿ ಸಾಲು-ಆಕ್ರೋಶ

ತಾಲೂಕಿನ ವಿವಿಧೆಡೆ ಶನಿವಾರ ಪೂರ್ಣಗೊಂಡ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಹಲವು ಕಾಮಗಾರಿಗಳಿಗೆ ಚಾಲನೆ
ನೀಡಿ ಅವರು ಮಾತನಾಡಿದರು. ಅವಳಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ಗುರಿ. 2 ತಾಲೂಕುಗಳನ್ನು ಧೂಳು ಮುಕ್ತ ಮಾಡುವುದರ ಜೊತೆಗೆ ರಾಜ್ಯದಲ್ಲಿಯೇ ಮಾದರಿ ತಾಲೂಕುಗಳನ್ನಾಗಿ ಮಾಡುತ್ತೇನೆ ಎಂದರು.

ಅಯೋಧ್ಯೆಯಲ್ಲಿ ನಿರ್ಮಾಣ ಮಾಡುತ್ತಿರುವ ಶ್ರೀರಾಮ ಮಂದಿರ ಐತಿಹಾಸಿಕ ಸ್ಮಾರಕವಾಗಲಿದೆ. ರಾಮಮಂದಿರವನ್ನು ಸರ್ಕಾರಗಳು, ಶ್ರೀಮಂತರಿಂದ ಹಣ ಪಡೆದು ಕಟ್ಟಬಹುದಿತ್ತು. ಆದರೆ ದೇಶದ ಜನರಿಂದ ದೇಣಿಗೆ ಪಡೆದು ಕಟ್ಟಲು ನಿರ್ಧರಿಸಲಾಗಿದ್ದು, ಪ್ರತಿಯೊಬ್ಬರೂ ಐತಿಹಾಸಿಕ ಶ್ರೀರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಕ್ಯಾಸಿನಕೆರೆ, ಕರಡಿ ಕ್ಯಾಂಪ್‌, ತ್ಯಾಗದಕಟ್ಟೆ, ಹುಣಸಘಟ್ಟ, ಲಿಂಗಾಪುರ, ಹನಗವಾಡಿ, ಹನುಮನಹಳ್ಳಿ, ಐನೂರುಗ್ರಾಮಗಳಲ್ಲಿ ಸಿಸಿ ರಸ್ತೆ, ಡಾಂಬರ್‌ ರಸ್ತೆ, ವಾಟರ್‌ ಟ್ಯಾಂಕ್‌, ಅಂಬೇಡ್ಕರ್‌ ಭವನ, ಶಾಲಾ ಕೊಠಡಿಗಳು ಸೇರಿದಂತೆ 15.24 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು  ಶಾಸಕರು ನೆರವೇರಿಸಿ ದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ವೀರಶೇಖರಪ್ಪ, ಎಪಿಎಂಸಿ ಅಧ್ಯಕ್ಷ ಸುರೇಶ್‌, ತಾಲೂಕು ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ಉಪಾಧ್ಯಕ್ಷ ಕೆ.ಎಲ್‌. ರಂಗನಾಥ್‌, ಎಪಿಎಂಸಿ ಸದಸ್ಯ ರಾಜು, ಬಿಜೆಪಿ ರೈತ ಮೋರ್ಚಾ ತಾಲೂಕು ಕಾರ್ಯದರ್ಶಿ ಹರೀಶ್‌ ಪಟೇಲ್‌ ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು, ಗ್ರಾಪಂ ಸದಸ್ಯರು ಹಾಗೂ ಮುಖಂಡರು ಇದ್ದರು.

Advertisement

ಇದನ್ನೂ ಓದಿ :   ರೈತರ ಟ್ರಾಕ್ಟರ್ ರ‍್ಯಾಲಿಗೆ ಮಾರ್ಗಗಳನ್ನು ಸೂಚಿಸಿದ ದೆಹಲಿ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next