Advertisement

ಕೋವಿಡ್ ನಿಯಂತ್ರಿಸಲು ಎಚ್ಚರಿಕೆ ನಡೆ ಅಗತ್ಯ

11:48 AM May 20, 2020 | Naveen |

ಹೊನ್ನಾಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಎಚ್ಚೆತ್ತುಕೊಂಡು ಮುಂದಿನ ನಡೆ ಇಡಬೇಕು ಎಂದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್  ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸದೆ ಹೊರಬರಬೇಡಿ ಎಂದು ಸಾರಿ ಸಾರಿ ಹೇಳಿದರೂ ಜನರು ಮಾತ್ರ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತಮಗೇನೂ ಆಗುವುದಿಲ್ಲ ಎನ್ನುವ ಮನೋಭಾವದಿಂದ ಗುಂಪಾಗಿ ಅಡ್ಡಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ತಾಲೂಕಿನಲ್ಲಿ ಕೋವಿಡ್ ಸೋಂಕಿಲ್ಲ ಎಂದು ಧೈರ್ಯವಾಗಿದ್ದ ಸಂದರ್ಭದಲ್ಲಿಯೇ ತಾಲೂಕಿನ ಮಾದೇನಹಳ್ಳಿಯ ಯುವಕನಿಗೆ ಕೋವಿಡ್ ಸೋಂಕು ತಗಲಿರುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಆ ಯುವಕ ಹತ್ತು ಹಲವಾರು ಗ್ರಾಮಗಳಿಗೆ ತೆರಳಿದ್ದಾನೆ ಎಂದು ಗ್ರಾಮದವರು ನನಗೆ ದೂರವಾಣಿ ಮೂಲಕ ತಿಳಿಸುತ್ತಿದ್ದಾರೆ ಹಾಗೂ ಗ್ರಾಮಗಳಿಗೆ ತೆರಳಿದಾಗ ನಮ್ಮ ಗ್ರಾಮಕ್ಕೂ ಬಂದು ಎಲೆ ವ್ಯಾಪಾರ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ ಎಂದರು. ತಹಶೀಲ್ದಾರ್‌, ಸಿಪಿಐ, ಪಿಎಸ್‌ಐ ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಕರೆ ಸ್ವೀಕರಿಸಿ ಉತ್ತಮ ಕಾರ್ಯ ಮಾಡಿದ್ದಾರೆ. ಕೆಲವು ಅಕಾರಿಗಳು ಸಂಜೆ 6ಕ್ಕೆ ಮೊಬೆ„ಲ್‌ ಬಂದ್‌ ಮಾಡುವುದು, ಸ್ವೀಕರಿಸದೇ  ರುವುದು ಮಾಡಿದ್ದಾರೆ ಇದನ್ನು ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next