ಹೊನ್ನಾಳಿ: ಲಿಂ.ಒಡೆಯರ್ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮತ್ತು ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದ ನಿಮಿತ್ತ ಮಾರ್ಚ್ 5,6 ಮತ್ತು 7ರಂದು ಮೂರು ದಿನಗಳ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕೃಷಿ ಮೇಳ ಯಶಸ್ವಿಯಾಗಲು ಚನ್ನಪ್ಪಸ್ವಾಮಿ ವಿದ್ಯಾಪೀಠದ ಎಲ್ಲಾ ಶಾಲಾ, ಕಾಲೇಜುಗಳ ಸಿಬ್ಬಂದಿ ಶ್ರಮವಹಿಸಿ ಕೆಲಸ ನಿರ್ವಹಿಸಬೇಕು ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರು ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಧ್ಯಕ್ಷರಾದ ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ನುಡಿದರು.
ಹಿರೇಕಲ್ಮಠದಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಚನ್ನಪ್ಪಸ್ವಾಮಿ ವಿದ್ಯಾಪೀಠದಡಿ ನಡೆಯುವ ಶಾಲಾ, ಕಾಲೇಜುಗಳ ನೌಕರರಿಗೆ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯಮಟ್ಟದ ಕೃಷಿ ಮೇಳ ಇದಾಗಿರುವುದರಿಂದ ಎಲ್ಲಾ ನೌಕರರು ಶಿಸ್ತಿನಿಂದ ಕೆಲಸ ಮಾಡುವುದು ಅಗತ್ಯವಾಗಿದೆ. ಯಾರೂ ತಾತ್ಸಾರ ಮನೋಭಾವನೆ ಹೊಂದದೆ ಮೂರು ದಿನಗಳ ಕೃಷಿ ಮೇಳಕ್ಕೆ ಸಹಕಾರ ನೀಡಿ ಒಬ್ಬರಿಗೊಬ್ಬರು ಸೈನಿಕರಂತೆ ಕಾರ್ಯ ಮಾಡಬೇಕು ಎಂದು ಹೇಳಿದರು.
ರಾಜ್ಯ ಮಟ್ಟದ ಕೃಷಿ ಮೇಳೆದಲ್ಲಿ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ವಿದ್ಯಾಪೀಠದ ನೌಕರರು ಕುಟುಂಬದಂತೆ ಜೀವನ ಮಾಡಲು ಸಹಕಾರಿಯಾಗುತ್ತದೆ. ಹಿಂದಿನ ಲಿಂ.ಗುರುಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅನ್ನ, ಅಕ್ಷರ ದಾಸೋಹಕ್ಕೆ ದಾರಿ ಮಾಡಿ ಕೊಟ್ಟಿರುವುದು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಶಶಿಧರ್ ಮಾತನಾಡಿ, ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ವಿದ್ಯಾಪೀಠದಡಿಯಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳ ನೌಕರರ 12 ವಿವಿಧ ಸಮಿತಿಗಳನ್ನು ರಚಿಸಲಾಗುವುದು ಸಮಿತಿಗಳ ಸದಸ್ಯರು ತಮ್ಮನ್ನು ತಾವು ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಕೃಷಿ ಮೇಳದಲ್ಲಿ ವಿವಿಧ ಸ ³ರ್ಧೆಗಳನ್ನು, ಪ್ರಾತ್ಯಕ್ಷಿಕೆಯನ್ನು, ಕೃಷಿಗೋಷ್ಠಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ವಿದ್ಯಾಪೀಠದ ನೌಕರ ವರ್ಗ ಕಾರಣಕರ್ತರಾಗಬೇಕು ಎಂದು ಹೇಳಿದರು. ಕೃಷಿ ಮೇಳದಲ್ಲಿ 200 ಸ್ಟಾಲ್‌ಗಳಿಗೆ ಸ್ಥಳಾವಾಕಾಶ ಮಾಡಿಕೊಡಲಾಗುವುದು ಒಂದು ಸ್ಟಾಲ್‌ಗೆ ಮೂರು ದಿನ ಸೇರಿ ಕೇವಲ ರೂ.3 ಸಾವಿರ ನಿಗದಿ ಮಾಡಲಾಗಿದೆ ಕೃಷಿಗೆ ಸಂಬಂಧಪಟ್ಟ ಉಪಕರಣಗಳಿಗೆ ಸ್ಟಾಲ್‌ಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಹೇಳಿದರು.
ಆಕಾಶವಾಣಿ ಕೃಷಿ ರಂಗದ ನಿವೃತ್ತ ಮುಖ್ಯಸ್ಥ ವೇದಮೂರ್ತಿ ಮಾತನಾಡಿದರು. ಚನ್ನಪ್ಪಸ್ವಾಮಿ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ನೌಕರರು ಉಪಸ್ಥಿತರಿದ್ದರು.