Advertisement

ಹಾಂಕಾಂಗ್‌: ಪ್ರತಿಭಟನಕಾರನ ಎದೆಗೆ ಗುಂಡು

12:02 AM Oct 02, 2019 | Team Udayavani |

ಹಾಂಕಾಂಗ್‌: ಚೀನ ವಿರುದ್ಧ ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪೊಲೀಸ್‌ ಅಧಿಕಾರಿ ಪ್ರತಿಭಟನಾಕಾರನ ಎದೆಗೆ ಗುಂಡು ಹಾರಿಸಿದ್ದಾರೆ.

Advertisement

ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೀನದಲ್ಲಿ ಕಮ್ಯೂನಿಸ್ಟ್‌ ಪಕ್ಷದ ಆಡಳಿತ ಜಾರಿಯಾಗಿ 70 ವರ್ಷ ಪೂರ್ತಿಗೊಂಡಿರುವ ಬಗ್ಗೆ ಬೀಜಿಂಗ್‌ ಮತ್ತು ಇತರ ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವಂತೆಯೇ ಹಾಂಕಾಂಗ್‌ನಲ್ಲಿ ಸರಕಾರಿ ವಿರೋಧಿ ಪ್ರತಿಭಟನೆ ಬಿರುಸಾಗಿದೆ.

ಹಾಂಕಾಂಗ್‌ನ ಸುನ್‌ ವಾನ್‌ ಜಿಲ್ಲೆಯಲ್ಲಿ ಈ ಘಟನೆಯಲ್ಲಿ ಪ್ರತಿಭಟನಾಕಾರನ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಗುಂಡು ಹಾರಿದ ಸುದ್ದಿ ತಿಳಿದ ಕೂಡಲೇ ಹಿಂಸಾತ್ಮಕ ತಿರುವು ಪಡೆಯಿತು.

ಲಾಠಿ ಪ್ರಹಾರ
ಪೊಲೀಸ್‌ ಮತ್ತು ಇತರ ರಕ್ಷಣಾ ಪಡೆಗಳನ್ನು ಗುರಿಯಾಗಿಸಿ ಪ್ರತಿಭಟನಾಕಾರರು ದಾಳಿ ನಡೆಸಲು ಶುರು ಮಾಡಿದರು. ಅವರನ್ನು ನಿಯಂತ್ರಿಸಲು ಟಿಯರ್‌ ಗ್ಯಾಸ್‌, ಲಾಠಿ ಪ್ರಹಾರ ನಡೆಸಿದರು. ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದೂ ಒತ್ತಾಯಿಸಿದರು. ಪ್ರಮುಖ ರಸ್ತೆಗಳಲ್ಲಿ ಮಲಗಿ ಸಂಚಾರಕ್ಕೆ ಅಡ್ಡಿಯನ್ನೂ ಉಂಟು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next