Advertisement

ಹಾಂಕಾಂಗ್‌ ಓಪನ್‌ ಟಿಟಿ ಕಂಚು ಗೆದ್ದ ಸ್ವಸ್ತಿಕಾ ಘೋಷ್‌

06:45 AM Aug 07, 2018 | Team Udayavani |

ಮುಂಬಯಿ: ಭಾರತದ ಯುವ ಆಟಗಾರ್ತಿ ಸ್ವಸ್ತಿಕಾ ಘೋಷ್‌ “ಹಾಂಗ್‌ ಸೆಂಗ್‌ ಹಾಂಕಾಂಗ್‌ ಜೂನಿಯರ್‌ ಆ್ಯಂಡ್‌ ಕ್ಯಾಡೆಟ್‌ ಓಪನ್‌’ ಟೇಬಲ್‌ ಟೆನಿಸ್‌ ಪಂದ್ಯಾವಳಿಯ ಬಾಲಕಿಯರ ಡಬಲ್ಸ್‌ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

Advertisement

ಸಿಂಗಾಪುರದ ಜಿಂಗಿÂ ಝೂ ಜತೆಗೂಡಿ ಆಡಿದ ಸ್ವಸ್ತಿಕಾ, ಚೈನೀಸ್‌ ತೈಪೆಯ ಪೀ ಲಿಂಗ್‌ ಸು-ಯು ಚಿನ್‌ ಸಾೖ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಸ್ವಸ್ತಿಕಾ-ಝೂ ಜೋಡಿಯನ್ನು ಲೀ ಲಿನ್‌ ಜಸ್ಸಿ ಟಾನ್‌ (ಸಿಂಗಾಪುರ್‌)-ರುಯಿ ಲಿಂಗ್‌ ವೆನ್‌ (ತೈಪೆ) ಸೇರಿಕೊಂಡು ಪರಾಭವಗೊಳಿಸಿದ್ದರು. ಹೀಗಾಗಿ ಚಿನ್ನದ ರೇಸ್‌ನಿಂದ ದೂರ ಉಳಿಯಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next