Advertisement

ಹಾಂಗ್‌ಕಾಂಗ್‌: ಇಲ್ಲೂ ಆರ್ಥಿಕ ಕುಸಿತದ ಭಯ

11:23 AM May 03, 2020 | mahesh |

ಮಣಿಪಾಲ : ಪ್ರಪಂಚದ ಬಹುತೇಕ ದೇಶಗಳ ಆರ್ಥಿಕತೆ ಕುಸಿಯಲು ಆರಂಭವಾಗಿದೆ. ಸೋಂಕು ಪ್ರಾರಂಭವಾದ ದಿನಗಳಲ್ಲಿ ಪರಿಸ್ಥಿತಿ ಹೀಗೆ ಮುಂದುವರೆದ್ದರೆ ಜಾಗತಿಕ ಆರ್ಥಿಕತೆ ನೆಲಕಚ್ಚಲಿದ್ದು, 3ನೇ ಮಹಾಯುದ್ಧದ ನಡೆದರೆ ಹೇಗಿರಬಹುದೋ ಅಂಥ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಆ ವರದಿಗಳೆಲ್ಲ ನಿಜವಾಗುತ್ತಿದ್ದು, ಪ್ರತಿ ರಾಷ್ಟ್ರಗಳೂ ಸಾಮಾಜಿಕ ಭದ್ರತೆಯಿಂದ ಹಿಡಿದು ಮಹಾ ಆರ್ಥಿಕ ಕುಸಿತವನ್ನು ಎದುರಿಸುತ್ತಿವೆ. ಕೋವಿಡ್‌-19 ಸಮಸ್ಯೆ ತಾತ್ಕಾಲಿಕವಾದರೂ ಆದರಿಂದ ಆರ್ಥಿಕ ಕ್ಷೇತ್ರಕ್ಕೆ ಉಂಟಾಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದು ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯ. ಹಾಂಗ್‌ಕಾಂಗ್‌ನಲ್ಲಿ ವೈರಸ್‌‌ ಇಲ್ಲದಿದ್ದರೆ ಪ್ರತಿಭಟನೆ. ಒಂದಲ್ಲಾ ಒಂದು ದೇಶದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಈಗ ಕೋವಿಡ್‌-19 ನಿಂದ ಆರ್ಥಿಕತೆ ಮತ್ತಷ್ಟು ಅಪಾಯ ಎದುರಿಸುವಂತಾಗಿದೆ.

Advertisement

ಪೆಟ್ಟಿನ ಮೇಲೆ ಪೆಟ್ಟು
ಸೋಂಕು ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಸಾರಿಗೆ ಕ್ಷೇತ್ರ ಸೇರಿದಂತೆ ವ್ಯಾಪಾರ ವಹಿವಾಟು ಚಟುವಟಿಕೆಗಳ ಮೇಲೆ ನಿಬಂಧನೆ ಹೇರಿತ್ತು. ಈಗಲೂ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾಗ್ಯೂ ಸಂಕಷ್ಟ ಮುಂದುವರಿದಿದೆ. ಇದರ ಪರಿಣಾಮ ಜಿಡಿಪಿ ಕುಸಿತಕ್ಕೆ ಒಳಗಾಗುತ್ತಿದೆ ಎನ್ನುತ್ತಾರೆ ಪ್ರಮುಖ ಅರ್ಥಶಾಸ್ತ್ರಜ್ಞರು. ಜಾಗತಿಕವಾಗಿ ಚಿಲ್ಲರೆ ವ್ಯಾಪಾರ ವಲಯ ಕುಸಿತಕ್ಕೆ ಒಳಗಾಗಿದ್ದು, ದೇಶದಲ್ಲಿ ಕೈಗಾರಿಕೆ ಘಟಕಗಳು ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ. ಉತ್ಪಾದನ ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಹೀಗೆ ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕಾ ಘಟಕಗಳ ಪುನರಾರಂಭಕ್ಕೆ ಆರ್ಥಿಕ ನೆರವಾಗಲಿ, ಉದ್ಯೋಗ ಭದ್ರತೆಗೆ ಸಂಬಂಧಪಟ್ಟಂತೆ ಯಾವುದೇ ಘೋಷಣೆ ಮಾಡಿಲ್ಲ ಎಂಬುದು ಉದ್ಯಮವಲಯದ ಬೇಸರದ ನುಡಿ.

ಶೇ.7 ರಷ್ಟು ಕುಸಿಯಲಿದೆ ಜಿಡಿಪಿ
ಕೋವಿಡ್‌-19ನಿಂದಾಗಿ 2020 ವಿತ್ತೀಯ ವರ್ಷದಲ್ಲಿ, ಹಾಂಗ್‌ ಕಾಂಗ್‌ನ ಪ್ರಮುಖ ಆದಾಯ ಮೂಲಗಳಲಾಗಿರುವ ವಿದೇಶಿ ವ್ಯಾಪಾರ, ಸರಕು ಸೇವೆ ಮತ್ತು ಹೂಡಿಕೆ – ಎಲ್ಲವೂ ಸ್ಥಗಿತಗೊಂಡಿವೆ. ಹಾಗಾಗಿ ಜಿಡಿಪಿ ಶೇ.4ರಿಂದ ಶೇ.7ರಷ್ಟು ಕುಸಿಯಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು. ಈ ಬೆಳವಣಿಗೆ 2008ರ ಸುನಾಮಿ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿಗಿಂತ ಭೀಕರವಾಗಿದ್ದು, ಅಂದಿನ ಆರ್ಥಿಕ ಹಿಂಜರಿತ ಮಟ್ಟಕ್ಕಿಂತ ಹೆಚ್ಚಿದೆ ಎಂದು ಹಾಂಗ್‌ ಕಾಂಗ್‌ ಹಣಕಾಸು ಕಾರ್ಯದರ್ಶಿ ಪಾಲ್‌ ಚಾನ್‌ ಹೇಳಿದ್ದಾರೆ.

ಪ್ರವಾಸೋದ್ಯಮಕ್ಕೂ ಹೊಡೆತ
ಸಾರಿಗೆ ಮತ್ತು ಪ್ರಯಾಣದ ಮೇಲೆ ಹೇರಿದ್ದ ನಿಷೇಧದಿಂದಾಗಿ ಪ್ರವಾಸೋದ್ಯಮ ಕ್ಷೇತ್ರವೂ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, 2020 ರ ಮೊದಲ ತ್ರೆ„ಮಾಸಿಕದಲ್ಲಿ ಪ್ರವಾಸಿಗರ ಪ್ರಮಾಣದಲ್ಲಿ ಶೇ.81ರಷ್ಟು (ವರ್ಷಕ್ಕೆ ) ಇಳಿಕೆಯಾಗಿದೆ. ನಿರುದ್ಯೋಗ ದರವು 2020ರ ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣ ಶೇ.8 ರಷ್ಟರಿಂದ ಶೇ.10ರಷ್ಟಕ್ಕೆ ಏರಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next