ಬೆಂಗಳೂರು: ವೃದ್ಧರನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿ ಸೇರಿ ಮೂವರು ಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೊಡಗು ಮೂಲದ ಲೋಕೇಶ್(30), ಆತನ ಪತ್ನಿ ಸ್ನೇಹಾ(27) ಮತ್ತು ಈಕೆಯ ಸಹೋದರಿ ಅಣ್ಣಮ್ಮ (40) ಬಂಧಿತರು. ಆರೋಪಿಗಳು ಇತ್ತೀಚೆಗೆ ಸುಧೀಂದ್ರ(65) ಎಂಬವರಿಗೆ ಬ್ಲ್ಯಾಕ್‌ವೆುàಲ್ ಮಾಡಿ 82 ಲಕ್ಷ ರೂ. ಸುಲಿಗೆ ಮಾಡಿದ್ದು, ಇದೀಗ ಮತ್ತೆ 42 ಲಕ್ಷ ರೂ.ಗೆ ಬೇಡಿಕೆ ಇಟ್ಟು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸ್ನೇಹಿತರ ಮೂಲಕ ಸುಧೀಂದ್ರಗೆ ಅಣ್ಣಮ್ಮ ಪರಿಚಯವಾಗಿದ್ದು, ಅವರ 5 ವರ್ಷದ ಪುತ್ರನಿಗೆ ಅನಾರೋಗ್ಯ ಸಮಸ್ಯೆ ಇದೆ. ಹಣಕಾಸಿನ ಸಹಾಯ ನೀಡುವಂತೆ ಕೋರಿದ್ದಳು. ಅದಕ್ಕೆ ಸುಧೀಂದ್ರ 5 ಸಾವಿರ ರೂ. ಕೊಟ್ಟಿ ದ್ದರು. ಅನಂತರ ವಿವಿಧ ಕಾರಣ ಗಳನ್ನು ನೀಡಿ ಆಗಾಗ್ಗೆ ಸಾವಿರಾರು ರೂ. ಪಡೆದುಕೊಂಡಿದ್ದಾಳೆ. ಈ ಮಧ್ಯೆ ಮೂರು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪ ಹುಸ್ಕೂರು ಗೇಟ್ ಬಳಿಯ ಲಾಡ್ಜ್ವೊಂದಕ್ಕೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದಾಳೆ.
ಅದೇ ರೀತಿ ಎರಡ್ಮೂರು ಬಾರಿ ಕರೆಯಿಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದಳು. ಈ ಖಾಸಗಿ ಕ್ಷಣಗಳನ್ನು ಆಕೆ ರಹಸ್ಯವಾಗಿ ಸೆರೆ ಹಿಡಿದು ಕೊಂಡು, ಅದನ್ನು ತನ್ನ ಸಹೋದರಿ ಸ್ನೇಹಾ ಮತ್ತು ಆಕೆಯ ಪತಿಲೋಕೇಶ್ ಕೊಟ್ಟಿದ್ದಾಳೆ. ಸ್ನೇಹಾ ಸುಧೀಂದ್ರರ ವಾಟ್ಸ್‌ಆ್ಯಪ್‌ಗೆ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಂತವಾಗಿ 82 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಆದರೂ, ಆರೋಪಿಗಳು ಇತ್ತೀಚೆಗೆ ಕರೆ ಮಾಡಿ ಮತ್ತೂಮ್ಮೆ 42 ಲಕ್ಷ ರೂ.ಗೆ ಬೇಡಿಕೆ ಇಟ್ಟಾಗ ಬೇಸರಗೊಂಡ ಸುಧೀಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾ ಗಿದೆ ಎಂದು ಪೊಲೀಸರು ಹೇಳಿ ದರು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.