Advertisement
ವೀಳ್ಯದೆಲೆ 3 ರಿಂದ 4 ತಿಂಗಳಿಗೆ ಇಳುವರಿ ಬರುತ್ತದೆ. 1 ಎಕರೆ ವೀಳ್ಯದೆಲೆ ಬೆಳೆಗೆ ವರ್ಷದಲ್ಲಿ ಮೂರು ಬಾರಿ ತಿಪ್ಪೆಗೊಬ್ಬರ, ಬೇವಿನ ಹಿಂಡಿ, ತಂಬಾಕು ದೂಸು, ಜೊತೆಗೆ 15 ದಿನಕ್ಕೊಮ್ಮೆ ಆಕಳ ಮೂತ್ರವನ್ನು ಸಿಂಪಡಿಸಲಾಗುತ್ತದೆ. ಕೀಟಬಾಧೆ ತಡೆಗಟ್ಟಲು ಬೇವಿನ ಎಣ್ಣೆ ಮತ್ತು ಸಾವಯವ ಔಷಧ ಸಿಂಪರಣೆ ಮಾಡಲಾಗುತ್ತದೆ. 1 ಎಕರೆ ಪ್ರದೇಶದಲ್ಲಿ ಹನಿ ನೀರಾವರಿಯ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಉತ್ತಮ ಇಳುವರಿ ಪಡೆಯಬಹುದು. ನುಗ್ಗೆ, ಚೊಗಚೆ ಗಿಡಗಳನ್ನೂ ಸದಾಶವಿ ಬೆಳೆಸಿದ್ದಾರೆ. ಅವು ಬಳ್ಳಿಗೆ ಆಸರೆಯಾಗಿವೆ. ಬಳ್ಳಿಗೆ ಆಸರೆಯಾಗಿವೆ. ಹವಾಮಾನಕ್ಕೆ ತಕ್ಕಂತೆ ಗಿಡಗಳಿಗೆ ಬಿಸಿಲು ನೆರಳು ಬೇಕಾಗುತ್ತದೆ. ಅದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಗದಾಳ ಗ್ರಾಮದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚಿನ ವೀಳ್ಯದೆಲೆ ಬೆಳೆಗಾರರಿದ್ದು, ಅಂದಾಜು 500 ರಿಂದ 600 ಎಕರೆ ಭೂಮಿಯಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ. ಇಲ್ಲಿಂದ ಪ್ರತಿನಿತ್ಯ ಹೊರರಾಜ್ಯಗಳಿಗೂ ವೀಳೆÂದೆಲೆ ರಪ್ತಾಗುತ್ತಿವೆ. ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಹಾಗೂ ಗುಜರಾತ, ಫೂಣಾ ಸಾತಾರಾ, ಮುಂಬೈ, ಔರಂಗಾಬಾದ, ಜಾಲನಾ, ಬೀಡ, ನಾಸಿಕ, ಸಾವಂತವಾಡಿ, ಕಳಂಬಾ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆ ಜಗದಾಳದಿಂದ ಪ್ರತಿನಿತ್ಯ 150 ರಿಂದ 200 ಡಾಗ್(ಪೆಂಡಿ)ಗಳು ಮಾರುಕಟ್ಟೆಗೆ ಹೋಗುತ್ತವೆ.
Related Articles
Advertisement
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸದಾಶಿವ ಬಂಗಿ ಮೊ: 9945329829
ಕಿರಣ ಶ್ರೀ ಶೈಲ ಆಳಗಿ