ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ಠಾಣೆಯ ಪೊಲೀಸರು ಹನಿಟ್ರ್ಯಾಪ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದ ಮೂವರು ಆರೋಪಿಗಳನ್ನು ಬಿಟ್ಟು ಕಳುಹಿಸಿದ ಘಟನೆ ನಡೆದಿದೆ. ಈ ಬಗ್ಗೆ ಎಸ್‌ಪಿ ಕೆ.ಅಣ್ಣಾಮಲೈ ಅವರು ಪೊಲೀಸರ ವಿರುದ್ಧ ಕಿಡಿ ಕಾರಿದ್ದು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳಾದ ಖೈರುನ್ನಿಸಾ, ರುಕ್ಸಾನಾ ಮತ್ತು ಅರುಣ್ ಎನ್ನುವವರು ಠಾಣೆಯಿಂದ ಪರಾರಿಯಾಗಿದ್ದರು. ಖೈರುನ್ನಿಸಾ ಮಗಳಾದ ರುಕ್ಸಾನಾಳನ್ನು 50 ಸಾವಿರಕ್ಕೆ ಮಾರಾಟ ಮಾಡಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದಳು ಎಂದು ವರದಿಯಾಗಿದೆ.
ಪೊಲೀಸರ ಕರ್ತವ್ಯ ಲೋಪದ ವಿರುದ್ಧ ತೀವ್ರ ಕಿಡಿ ಕಾರಿರುವ ಅಣ್ಣಾಮಲೈ ಅವರು ಪ್ರಕರಣದ ತನಿಖೆಯನ್ನು ನರಸಿಂಹರಾಜಪುರ ಪೊಲೀಸರು ನಡೆಸುವುದಿಲ್ಲ. ಹೆಚ್ಚುವರಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ. ಪೊಲೀಸರೇ ಕರ್ತವ್ಯ ಲೋಪ ಎಸಗಿದ್ದು ಜನವರಿ 18 ರಂದು ಎಫ್ಐಆರ್ ದಾಖಲಾಗುವ ಮುಎನ್ನವೇ ಮೂವರು ಆರೋಪಿಗಳನ್ನು ಬಿಟ್ಟು ಕಳುಹಿಸಿರುವಬಗ್ಗೆ ತಿಳಿದು ಬಂದಿದೆ.
ಎಎಸ್‌ಐಗಳಾದ ಶ್ರೀನಿವಾಸ್, ಕುಮಾರ್ ನಾಯ್ಕ ಪಿಸಿಗಳಾದ ಯೋಗೆಂದ್ರ ಮತ್ತು ಚಂದ್ರ ಅವರು ಕರ್ತವ್ಯ ಲೋಪ ಎಸಗಿರುವ ಬಗ್ಗೆ ತಿಳಿದು ಬಂದಿದ್ದು, ಸಂಜೆಯ šಒಳಗೆ ಸೂಕ್ತ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪರಾರಿಯಾಗಿರುವ ಮೂವರು ಆರೋಪಿಗಳು ಹಲವರಿಗೆ ವಂಚನೆ ನಡೆಸಿದ್ದರು ಎಂದು ಹೇಳಲಾಗಿದ್ದು ಇದೀಗ ಮತ್ತೆ ಅವರ ಶೀಘ್ರ ಬಂಧನಕ್ಕೆ ಎಸ್‌ಪಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಅರುಣ್‌ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಖೈರುನ್ನಿಸಾ ಮತ್ತು ರುಕ್ಸಾನಾಗಾಗಿ ಶೋಧ ಮುಂದುವರಿದಿದೆ.