Advertisement

ಪ್ರಾಮಾಣಿಕತೆ ಮೆರೆದ ಹುಡುಗರಿಗೆ ಸಮ್ಮಾನ

02:40 PM Apr 27, 2019 | Suhan S |

ಕುಂದಾಪುರ, ಎ. 26: ಕಳೆದು ಹೋಗಿದ್ದ 7 ಲಕ್ಷ ರೂ. ಮೌಲ್ಯದ ಚಿನ್ನದ ಸೊಂಟ ಪಟ್ಟಿಯನ್ನು ವಾರಸುದಾರರಿಗೆ ಮರಳಿಸಿದ್ದ ಕುಂದಾಪುರದ ಗುರುಪ್ರಸಾದ್‌ ಖಾರ್ವಿ ಮತ್ತು ರಾಘವೇಂದ್ರ ಖಾರ್ವಿ ಅವರನ್ನು ಕುಂದಾಪುರದ ಆಶಾಕಿರಣ್‌ ಟ್ರಸ್ಟ್‌ ವತಿಯಿಂದ ಗೌರವಿಸಲಾಯಿತು.

Advertisement

ಕುಂದಾಪುರದ ಶರೋನ್‌ ಹೋಟೆಲ್ನಲ್ಲಿ ಎ. 25ರಂದು ನಿಗದಿಯಾಗಿದ್ದು, ವಧುವಿನ 7 ಲಕ್ಷ ರೂ. ಮೌಲ್ಯದ ಚಿನ್ನದ ಸೊಂಟ ಪಟ್ಟಿ ಕಳೆದು ಹೋಗಿತ್ತು. ಆ ಚಿನ್ನದ ಸೊಂಟ ಪಟ್ಟಿ ಗುರುಪ್ರಸಾದ್‌ ಖಾರ್ವಿ ಮತ್ತು ರಾಘವೇಂದ್ರ ಖಾರ್ವಿ ಅವರಿಗೆ ಸಿಕ್ಕಿದ್ದು, ಅವರು ಅದನ್ನು ಆ ಹೋಟೆಲ್ ರಿಸೆಪ್ಶನಿಸ್ಟ್‌ ಗಮನಕ್ಕೆ ತಂದು ವಧುವಿಗೆ ಹಸ್ತಾಂತರಿ ಔದಾರ್ಯ ಮೆರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next