Advertisement
ಅವರು ಶಿವಮೊಗ್ಗ ಹಾಗೂ ಶಿಕಾರಿಪುರದ ವಿವಿಧ ಭಾಗಗಳಲ್ಲಿ ಬುಧವಾರ ಮತದಾರರ ಸಭೆ ನಡೆಸಿದರು.ಪದವೀಧರರಿಗೆ ಉದ್ಯೋಗ – ಪದವೀಧರರಿಂದ ಉದ್ಯಮ – ಸಹಾಯ – ಸಹಕಾರ – ಸಂಪರ್ಕ ಇದು ನನ್ನ ಆಶಯವಾಗಿದೆ. ಎಲ್ಲ ಸರಕಾರಿ ನೌಕರರ ಬೇಡಿಕೆಯಾದ ಎನ್‌ಪಿಎಸ್ (ನೂತನ ಪಿಂಚಣಿ ಯೋಜನೆ) ರದ್ದುಪಡಿಸಿ ಒಪಿಎಸ್ (ಹಳೆ ಪಿಂಚಣಿ ಯೋಜನೆ) ಜಾರಿಗೆ ತರಲು ವಿಧಾನ ಪರಿಷತ್ ನ ಒಳಗೆ ಮತ್ತು ಹೊರಗೆ ನಿಮ್ಮ ಧ್ವನಿಯಾಗುತ್ತೇನೆ. ಹಾಗೂ ಶಿಕ್ಷಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು ಇದನ್ನು ಈಡೇರಿಸಲು ನಿಮ್ಮ ಧ್ವನಿಯಾಗುತ್ತೇನೆ ಎಂದ ಅವರು ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ತ್ಯದ ಮತ ನೀಡಿ ಹರಿಸುವಂತೆ ಮನವಿ ಮಾಡಿದರು.