Advertisement
ಹೋಂಡಾ ಸಿವಿಕ್ ಮತ್ತು ಹೋಂಡಾ ಸಿಆರ್-ವಿ ಕಾರು ಕೊಳ್ಳುವವರಿಗೆ ಭರ್ಜರಿ ದರ ಕಡಿತದ ಆಫರ್ ನೀಡಿದೆ.
Related Articles
Advertisement
ಮೂರು ಶ್ರೇಣಿಯಲ್ಲಿ ಹೋಂಡಾ ಸಿವಿಕ್ ಕಾರು ಲಭ್ಯವಿದ್ದು, ಇದರ ಪೆಟ್ರೋಲ್ ಕಾರಿನ ಮಾರುಕಟ್ಟೆ ಬೆಲೆ 17.70 ಲಕ್ಷದಿಂದ 21 ಲಕ್ಷ ರೂಪಾಯಿ ಇದೆ. ಹೋಂಡಾ ಸಿವಿಕ್ ಡೀಸೆಲ್ ಕಾರುಗಳ ಬೆಲೆ 20.50ಲಕ್ಷದಿಂದ 22.30 ಲಕ್ಷ ರೂಪಾಯಿ.
10ನೇ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಹೋಂಡಾ ಸಿವಿಕ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ವಿಭಾಗದಲ್ಲಿ 6 ಸ್ಪೀಡ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆವೃತ್ತಿಗಳು ಆಯ್ಕೆ ಮಾಡಬಹುದಾಗಿದೆ. ಎಲ್ ಇಡಿ ಟೈಲ್ಸ್ ಬೆಳಕು, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸೌಲಭ್ಯ ಹೊಂದಿದೆ. ಈ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 8 ಏರ್ ಬ್ಯಾಗ್ ವ್ಯವಸ್ಥೆ ಸೌಲಭ್ಯ ಇದೆ.
ಹೋಂಡಾ ಸಿಆರ್ ವಿಗೆ 4 ಲಕ್ಷ ರೂಪಾಯಿ ಡಿಸ್ಕೌಂಟ್:
ಕಾರು ತಯಾರಿಕೆ ಕಂಪನಿಗಳಿಗೆ ಹಬ್ಬದ ಸಂದರ್ಭದಲ್ಲಿ ಕಾರುಗಳ ಮಾರಾಟ ಹೆಚ್ಚಿಸಿಕೊಳ್ಳಲು ಒದಗಿ ಬರುವ ಸುಸಂದರ್ಭವಾಗಿದೆ. ಈ ಹಿನ್ನೆಲೆಯಲ್ಲಿ ಹೋಂಡಾ ಸಿಆರ್ ವಿ ಡೀಸೆಲ್ ಕಾರಿನ ಬೆಲೆಯಲ್ಲಿ 4 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಬಿಎಸ್ 4 (ಭಾರತ್ ಸ್ಟೇಜ್)ನ ವಾಹನಗಳ ಮಾರಾಟ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಹೊಂದಿರುವುದಾಗಿ ವಾಹನ ತಯಾರಿಕೆ ಸಂಸ್ಥೆಗಳಿ ನಿರೀಕ್ಷೆ ಹೊಂದಿವೆ.
ಪ್ರಸ್ತುತ ಹೋಂಡಾ ಮಾರ್ಕೆಟ್ ಶೇರುಗಳು ಶೇ.4.65ರಷ್ಟಿದ್ದು, ಒಂದು ವರ್ಷದ ಹಿಂದೆ ಶೇ.0.84ರಷ್ಟು ಕುಸಿತ ಕಂಡಿತ್ತು. ಇದೀಗ ಭಾರೀ ರಿಯಾಯ್ತಿ ಘೋಷಣೆಯಿಂದ ಮಾರುಕಟ್ಟೆ ಶೇರುಗಳ ಮೌಲ್ಯ ಹೆಚ್ಚಳವಾಗಲು ನೆರವಾಗಲಿದೆ ಎಂಬುದು ಹೋಂಡಾ ಕಂಪನಿಯ ಲೆಕ್ಕಚಾರವಾಗಿದೆ.