ಹೊಸದಿಲ್ಲಿ : ‘ಸಲಿಂಗ ರತಿ ಎನ್ನುವುದು ವಂಶವಾಹಿ ದೋಷ; ಅದನ್ನು ನೈಸರ್ಗಿಕ ಲೈಂಗಿಕ ಪ್ರವೃತ್ತಿ ಎಂದು ಪರಿಗಣಿಸಲಾಗದು’ ಎಂದು ಬಿಜೆಪಿ ಹಿರಿಯ ನಾಯಕ, ಸಂಸದ, ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸಲಿಂಗ ರತಿಯನ್ನು ಅಪರಾಧೀಕರಿಸುವ ಐಪಿಸಿಯ ಸೆ.377ನ್ನು ಸುಪ್ರೀಂ ಕೋರ್ಟ್ ನಿನ್ನೆ ಗುರುವಾರದ ತನ್ನ ಐತಿಹಾಸಿಕ ತೀರ್ಪಿನಲ್ಲಿ ಅಸಿಂಧು ಗೊಳಿಸಿತ್ತು.
“ಸಲಿಂಗರತಿಯು ಶಿಶುರತಿ, ಸಲಿಂಗ ಬಾರ್‌ಗಳು ಮತ್ತು ಎಚ್‌ಐವಿ ಗೆ ಕಾರಣವಾಗಿರುವ ಹಲವಾರು ನಿದರ್ಶನಗಳಿವೆ. ಸಲಿಂಗರತಿಗಳಾಗಿರುವ ಅನೇಕ ನ್ಯಾಯಾಧೀಶರುಗಳನ್ನು ಕೂಡ ನಾನು ಬಲ್ಲೆ’ ಎಂದು ಸ್ವಾಮಿ ಹೇಳಿದರು.
ಜನರ ಲೈಂಗಿಕತೆಯ ವಿಷಯದಲ್ಲಿ ಪೊಲೀಸರಿಗೆ ಬೆಡ್ ರೂಮ್ ಪ್ರವೇಶಿಸುವ ಯಾವುದೇ ಹಕ್ಕು ಇರುವುದಿಲ್ಲ ಎಂಬುದನ್ನು ಸ್ವಾಮಿ ಒಪ್ಪಿಕೊಂಡರು.
ಸ್ವಾಮಿ ಅವರು ಸಲಿಂಗರತಿ ಮತ್ತು ಎಲ್‌ಜಿಬಿಟಿ ಸಮುದಾಯದ ವಿರುದ್ಧ ಬಹಳ ಹಿಂದಿನಿಂದಲೂ ಟೀಕೆ ಮಾಡುತ್ತಲೇ ಬಂದಿದ್ದಾರೆ.