Advertisement

ಡಯಾಬಿಟಿಸ್‌ ಸಮಸ್ಯೆಗೆ ಹೋಮಿಯೋ ಪರಿಹಾರ

06:07 PM May 21, 2019 | mahesh |

ಕೆಲವು ವರ್ಷಗಳಿಂದ ಡಯಾಬಿಟಿಸ್‌ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಧುನಿಕ ಕಾಲದಲ್ಲಿ ಮನುಷ್ಯನ ಜೀವನಶೈಲಿಯಲ್ಲಿ ಆಗ ಇರುವ ಬದಲಾವಣೆ ಇದಕ್ಕೆ ಕಾರಣ. ಮಾನಸಿಕ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮ ಮಾಡದೇ ಇರುವುದು ಮುಂತಾದ ಕಾರಣಗಳಿಂದ ಡಯಾಬಿಟಿಸ್‌ ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿದೆ.

Advertisement

ಸಾಮಾನ್ಯವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದಲ್ಲಿ ಡಯಾಬಿಟಿಸ್‌ ವ್ಯಾಧಿ ಬರುತ್ತದೆ. ಮನುಷ್ಯನ ಶರೀರದಲ್ಲಿ ಬಹಳ ಮುಖ್ಯವಾದ ಗ್ರಂಥಿಯಲ್ಲಿ ಪ್ಯಾಂಕ್ರಿಯಾಸ್‌ ಕೂಡಾ ಒಂದು. ಯಾವುದೇ ಕಾರಣದಿಂದ ಇದು ಶರೀರದಲ್ಲಿ ಅಗತ್ಯವಿದ್ದಷ್ಟು ಇನ್ಸುಲಿನ್‌ ಉತ್ಪಾದಿಸಲು ಆಗದೇ ಇರುವುದರಿಂದ ಅಥವಾ ಇನ್ಸುಲಿನನ್ನು ಶರೀರದ ಕಣಗಳು ಸಹಜವಾಗಿ ಗ್ರಹಿಸುವ ಪ್ರಕ್ರಿಯೆ ಘಾಸಿಗೊಂಡಾಗ ಮಧುಮೇಹ ರೋಗವು ಉಂಟಾಗುತ್ತದೆ.

ಡಯಾಬಿಟಿಸ್‌ ವಿಧಗಳು:
ಟೈಪ್‌ 1 ಡಯಾಬಿಟಿಸ್‌ (ಇನ್ಸುಲಿನ್‌ ಡಿಪೆಂಡೆಂಟ್‌ ಡಯಾಬಿಟೀಸ್‌)
ಇದು ಶರೀರದ ರೋಗ ನಿರೋಧಕ ವ್ಯವಸ್ಥೆ ಪ್ಯಾಂಕ್ರಿಯಾಸ್‌ ಗ್ರಂಥಿಯಲ್ಲಿ ಇನ್ಸುಲಿನ ಉತ್ಪತ್ತಿ ಮಾಡುವ ಕಣಗಳನ್ನು ನಾಶಗೊಳಿಸುತ್ತದೆ. ಇದು ಹೆಚ್ಚಾಗಿ 20 ವರ್ಷದೊಳಗಿನವರಲ್ಲಿ ಬರುವ ಅವಕಾಶವಿರುತ್ತದೆ.

ಕಾರಣಗಳು: ಆಟೋ ಇಮ್ಯುನಲ್‌ ವ್ಯಾಧಿಗಳು ಪ್ಯಾಂಕ್ರಿಯಾಸ್‌ ಗ್ರಂಥಿ ಸಿಸ್ಟಿಕ ಫೈಬ್ರೋಸಿಸ್‌ ಕ್ರೋನಿಕ್‌ ಪ್ಯಾಂಕ್ರಿಯಾಟಿಸ್‌ ಇವುಗಳು ಈ ವ್ಯಾಧಿಗೆ ಕಾರಣವಾಗಬಹುದು.

ಟೈಪ್‌ 2 ಡಯಾಬಿಟಿಸ್‌ (ನಾನ್‌ ಇನ್ಸುಲಿನ್‌ ಡಿಪೆಂಡೆಂಟ್‌ ಡಯಾಬಿಟಿಸ್‌):
ಈ ವಿಧದ ಡಯಾಬಿಟಿಸ್‌ ಹೆಚ್ಚಾಗಿ 30 ವರ್ಷ ದಾಟಿದವರಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಎರಡು ವಿಧ.
1. ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್‌ಅನ್ನು ಉತ್ಪಾದಿಸದೆ ಇದ್ದರೆ
2. ಇನ್ಸುಲಿನ್‌ ಉತ್ಪತ್ತಿಯನ್ನು ಕಣಗಳು ಸರಿಯಾಗಿ ಉಪಯೋಗಿಸಿದ್ದರೆ.

Advertisement

ಕಾರಣಗಳು: ವಯಸ್ಸು ಹೆಚ್ಚಾದಾಗ, ಶರೀರದ ಶ್ರಮ ಕಡಿಮೆಯಾದಾಗ ಅಧಿಕ ಮಾನಸಿಕ ಒತ್ತಡ, ಚರ್ಮ ಜೆಸ್ಟಷನಲ್‌ ಡಯಾಬಿಟಿಸ್‌ ಇರುವುದರಿಂದ ಮತ್ತು ವಂಶಪಾರಂಪರ್ಯ ಕಾರಣದಿಂದಲೂ ಡಯಾಬಿಟಿಸ್‌ ಬರಬಹುದು.

ಟೈಪ್‌ 3 ಡಯಾಬಿಟಿಸ್‌: ಜೆಸ್ಟಷನಲ್‌ ಡಯಾಬಿಟಿಸ್‌
ಇದನ್ನು ಗರ್ಭಿಣಿಯರಲ್ಲಿ ಕಾಣಬಹುದು

ಲಕ್ಷಣಗಳು: ಬಾಯಾರಿಕೆ ಹೆಚ್ಚಾಗುವುದು, ಅಧಿಕ ಹಸಿವು ಮತ್ತು ಅನಿಯಮಿತ ಮೂತ್ರ ವಿಸರ್ಜನೆ, ಇದ್ದಕ್ಕಿದ್ದ ಹಾಗೆ ತೂಕ ಕಡಿಮೆಯಾಗುವುದು, ತುಂಬಾ ಸುಸ್ತು, ಕೈಕಾಲು ನೋವು ಮತ್ತು ಗಾಯಗಳು ನಿಧಾನವಾಗಿ ಗುಣ ಹೊಂದುವುದು, ಫ‌ಂಗಸ್‌ ಇನ್‌ಫೆಕ್ಷನ್‌, ಚರ್ಮ ಸಮಸ್ಯೆ, ಲೈಂಗಿಕ ಬಯಕೆ ಕಡಿಮೆಯಾಗುವುದು, ಕೈಕಾಲುಗಳು ಜೋಮು ಹಿಡಿಯುವುದು.

ಹೋಮಿಯೋಕೇರ್‌ ಚಿಕಿತ್ಸೆ:
ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ ಜೆನೆಟಿಕ್‌ ಕಾನ್ಸ್ಟಿಟ್ಯೂಷನ್‌ನಲ್ಲಿ ಚಿಕಿತ್ಸೆಯಿಂದ ವ್ಯಕ್ತಿಯಲ್ಲಿನ ಡಯಾಬಿಟಿಸ್‌ ಲಕ್ಷಣದ ಮುಖಾಂತರ ಚಿಕಿತ್ಸೆ ನೀಡುವುದರಿಂದ ಯಾವುದೇ ಡಯಾಬಿಟಿಸ್‌ ಕಾಂಪ್ಲಿಕೇಷನ್‌ ಬರದ ಹಾಗೆ ಚಿಕಿತ್ಸೆ ಸಾಧ್ಯ. ಡಯಾಬಿಟಿಸ್‌ಅನ್ನು ಗುರುತಿಸಿದ ನಂತರ ಹೋಮಿಯೋಪತಿ ಚಿಕಿತ್ಸೆ ಕೊಡಲಾಗುವುದು. ಜೊತೆಗೆ ಚಿಕ್ಕ ವಯಸ್ಸಿನಲ್ಲಿ ಅಧಿಕ ಒತ್ತಡದಿಂದ ಬರುವ ಸ್ಟ್ರೆಸ್‌ ಡಯಾಬಿಟಿಸ್‌ಅನ್ನು ಗುಣಪಡಿಸುವ ಅವಕಾಶವೂ ಇರುತ್ತದೆ.

ಒಮ್ಮೆ 56 ವರ್ಷ ವಯಸ್ಸಿನ ವ್ಯಕ್ತಿ ನಮ್ಮ ಕ್ಲಿನಿಕ್‌ಗೆ ಬಂದರು. ಆವರು ತಾವು 15 ವರ್ಷಗಳಿಂದ ಡಯಾಬಿಟಿಸ್‌ನಿಂದ ಬಳಲುತ್ತಿದ್ದೇನೆ ಎಂದಾಗ ರಿಪೋರ್ಟ್‌ ಪರಿಶೀಲಿಸಿದೆವು. ಅವರಿಗೆ FBS 180 mg/DL,PLBS_318mg/al ಇರುವುದು ಖಚಿತವಾಯಿತು. ಒಂದು ವರ್ಷದವರೆಗೆ ನಮ್ಮ ಹೋಮಿಯೊ ಕೇರ್‌ ಇಂಟರ್‌ನ್ಯಾಷನಲ್‌ನ ಜೆನೆಟಿಕ್‌ ಕಾನ್‌ಸ್ಟಿಟ್ಯೂಷನ್‌ನಲ್ಲಿ ಚಿಕಿತ್ಸೆ ಪಡೆದ ಮೇಲೆ ಆತನ ರಿಪೋರ್ಟ್‌ನಲ್ಲಿ FBS_110, plbs-180mg/al ಎಂದು ಬಂದಿತು. ಈ ದಿನ ಆ ವ್ಯಕ್ತಿ ಯಾವುದೇ ಮಾತ್ರೆಗಳನ್ನು ಉಪಯೋಗಿಸದೆ, ಯಾವ ತರಹದ ಸಮಸ್ಯೆಯೂ ಇಲ್ಲದೆ ಸಂತೋಷವಾಗಿದ್ದಾರೆ. ನೀವೂ ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಮ್ಮ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಹೊಂದಿ ಗುಣಪಡಿಸಿಕೊಳ್ಳುವ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next