Advertisement

ಕೀಲು ನೋವಿಗೆ ಹೋಮಿಯೋ ಪರಿಹಾರ

10:26 PM May 07, 2019 | mahesh |

ಕೀಲು ನೋವಿನಿಂದ ನಡುವಯಸ್ಸಿನಲ್ಲಿಯೇ ಇಳಿ ವಯಸ್ಸಿನವರಂತೆ ವ್ಯಥೆ ಪಡುತ್ತಿದ್ದೀರ? ನಿಮ್ಮ ಸಮಸ್ಯೆಗೆ “ಅಸ್ಟೀಯೋ ಅರ್ಥಟೀಸ್‌’ ಎಂದು ಹೆಸರು. ಈ ರೋಗ, ಕೀಲುಗಳಲ್ಲಿರುವ ಕಾರ್ಟಿಲೇಜ್‌ ಕಡಿಮೆಯಾದಾಗ ಅದರ ಸುತ್ತಲೂ ಇರುವ ಅಂಗಾಂಶದ ಮೇಲೆ ಪ್ರಭಾವ ತೋರಿಸುತ್ತದೆ, ಈ ಸಮಸ್ಯೆಯು ಸಾಧಾರಣವಾಗಿ 40-45 ವಯಸ್ಸು ದಾಟಿದ ನಂತರ ಕಾಣಿಸಿಕೊಳ್ಳುತ್ತದೆ. ಆದರೆ, ಪ್ರಸ್ತುತ ಜೀವನ ಶೈಲಿಯ ಕಾರಣದಿಂದಾಗಿ ಸಣ್ಣ ವಯಸ್ಸಿನವರನ್ನೂ ಇದು ಕಾಡುತ್ತಿದೆ.

Advertisement

ಈ ಸಮಸ್ಯೆಯಿಂದ ಕೆಳಗೆ ಕೂರಲು ಕಷ್ಟವಾಗುತ್ತದೆ. ನೋವಿನಿಂದ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುವುದಿಲ್ಲ. ಹೋಮಿಯೋ ವೈದ್ಯ ಪದ್ಧತಿಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ.

ಅಸ್ಟಿಯೋ ಅರ್ಥಟೀಸ್‌: ದಿನದಿಂದ ದಿನಕ್ಕೆ ಕಾರ್ಟಿಲೇಜ್‌ ಮೆಲ್ಲಗೆ ಕ್ಷೀಣಗೊಳ್ಳುತ್ತದೆ. ಇದರಿಂದ ನಿಧಾನವಾಗಿ ಅದು ಹಗುರವಾಗುತ್ತದೆ. ಫ‌ಲಿತಾಂಶವಾಗಿ ಮೂಳೆಗಳ ಅಂಗಾಂಶವು ಶೋಧನೆಗೆ ಗುರಿಯಾಗುತ್ತದೆ. ಇದರಿಂದ ಮೂಳೆಗಳ ಕೊನೆಯ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಇವುಗಳಿಗೆ ಅಸ್ಟಿಯೋಪೈಟ್ಸ್‌ ಎನ್ನುತ್ತಾರೆ. ಇದರ ಪ್ರಭಾವದಿಂದ ಸ್ಟೆನೋಯಲ್‌ ಪೊರೆಯು ಸ್ವಲ್ಪಊದಿಕೊಂಡು ಹೆಚ್ಚಾದ ದ್ರವ ಬಿಡುಗಡೆಯಿಂದ ಕೀಲುಗಳಲ್ಲಿ ಊತ ಉಂಟಾಗುತ್ತದೆ. ಈ ಎರಡೂ ಮೂಳೆಗಳು ಒಂದರಿಂದ ಒಂದಕ್ಕೆ ಉಜ್ಜುವುದರಿಂದ ಬಹಳ ನೋವು ಕಾಣಿಸಿಕೊಳ್ಳುತ್ತದೆ.

ಕಾರಣಗಳು: 40ರ ವಯಸ್ಸಿನ ನಂತರ ಮುಖ್ಯವಾಗಿ ಸ್ತ್ರೀಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅತಿಯಾದ ಬೊಜ್ಜು ಇರುವುದರಿಂದ, ಕೀಲುಗಳ ಮೇಲೆ ಒತ್ತಡ ಹೆಚ್ಚುವಂಥ ಕೆಲಸ ಮಾಡುವುದರಿಂದ, ಕೀಲುಗಳಿಗೆ ಗಾಯವಾದಲ್ಲಿ, ಕೀಲಿನ ಕಾರ್ಟಿಲೇಜ್‌ನಲ್ಲಿ ಅನುವಂಶಕ ದೋಷಗಳು ಇದ್ದಲ್ಲಿ ಇಂಥ ರೋಗಗಳು ಕಂಡು ಬರುತ್ತವೆ. (ಉದಾ: ರೋಮಟ್ಯೂಡ್‌ ಅರ್ಥರೈಟಿಸ್‌)

ಲಕ್ಷಣಗಳು:
ಕೀಲುಗಳಲ್ಲಿ ನೋವು, ಊತವನ್ನು ಕೈಗಳಿಂದ ಮುಟ್ಟಿದಾಗ ಬಿಸಿಯಾಗಿರುವುದು.
ಕೀಲುಗಳು ಕಠಿಣವಾಗುವುದು ಮುಖ್ಯವಾಗಿ ಬೆಳಗ್ಗೆ ಏಳುವಾಗ ನಡೆಯಲು ಕಷ್ಟವಾಗುವುದು.
ಕೀಲುಗಳ ಹತ್ತಿರ ಉಜ್ಜಿದಾಗ ಶಬ್ದ ಕೇಳಿಸುವುದು.
ಕೀಲು ನೋವಿನಿಂದ ನಡೆದಾಡುವುದರಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುವುದು.
ಬೆನ್ನೆಲುಬು ಅಸ್ಟೀಯೋ ಅರ್ಥಟೀಸ್‌ಗೆ ಗುರಿಯಾದರೆ ಕೈ ಕಾಲುಗಳಲ್ಲಿ ದೌರ್ಬಲ್ಯ, ಸಂವೇದನಾ ಶಕ್ತಿಯ ನಷ್ಟ ಮತ್ತು ಮರಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ.
ಭಾರತದಲ್ಲಿ 2000ನೇ ಇಸವಿಯಿಂದ 4.6 ಕೋಟಿ ಜನರು ಅಸ್ಟೀಯೋ ಅರ್ಥಟೀಸ್‌ನಿಂದ ನರಳುತ್ತಿದ್ದಾರೆ. ಪ್ರತೀ ವರ್ಷ ಇದರ ಸಂಖ್ಯೆ ಹೆಚ್ಚಾಗುತ್ತಿದೆ. 2018ರಲ್ಲಿ ಸುಮಾರು 60 ಲಕ್ಷ ಜನರು ಅಸ್ಟೀಯೋ ಅರ್ಥಟೀಸ್‌ಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಆಂಧ್ರಪ್ರದೇಶ ಹಾಗೂ ಬಿಹಾರದಲ್ಲಿ ಮಹಿಳೆಯರಿಗಿಂತ ಪುರುಷರಲ್ಲಿ ಈ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

Advertisement

ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ ಚಿಕಿತ್ಸೆ
ಬಹಳಷ್ಟು ಜನರು ಅಸ್ಟೀಯೋ ಅರ್ಥಟೀಸ್‌ ರೋಗಕ್ಕೆ ಹೋಮಿಯೋಕೇರ್‌
ಇಂಟರ್‌ನ್ಯಾಷನಲ್‌ನಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲಿ 85% ಜನ
ರೋಗಿಗಳು ಗುಣಮುಖರಾಗುತ್ತಿದ್ದಾರೆ. ಈ ರೋಗ ಸಂಪೂರ್ಣವಾಗಿ ವಾಸಿಯಾಗುವ
ಸಾಧ್ಯತೆಯೂ ಇದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಹೋಮಿಯೋ ಕೇರ್‌ ಇಂಟರ್‌ನ್ಯಾಷನಲ್‌
9550001133, ಉಚಿತ ಕರೆ: 18001081212

ಶಾಖೆಗಳು: ಬೆಂಗಳೂರು (ಜಯನಗರ, ಮಲ್ಲೇಶ್ವರಂ, ಇಂದಿರಾನಗರ,
ಎಚ್‌.ಎಸ್‌.ಆರ್‌ ಲೇಔಟ್‌), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ,
ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್‌, ಕಲಬುರಗಿ, ಶಿವಮೊಗ್ಗ,
ತುಮಕೂರು, ಹಾಸನ , ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ

Advertisement

Udayavani is now on Telegram. Click here to join our channel and stay updated with the latest news.

Next