Advertisement

ಮನೆಯಲ್ಲಿ ತಯಾರಿಸುತ್ತಿದ್ದ ಪ್ಲಾಸ್ಟಿಕ್‌ ಜಪ್ತಿ

08:24 AM Jul 19, 2019 | Team Udayavani |

ಬೆಂಗಳೂರು: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪಾದನೆ ಮಾಡುವ ಕಾರ್ಖಾನೆಗಳ ಮೇಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣಿಟ್ಟಿದೆ. ನಿಷೇಧಿತ ಪ್ಲಾಸ್ಟಿಕ್‌ ಉತ್ಪಾದನೆ ಮಾಡುತ್ತಿದ್ದ ಆರೋಪದ ಮೇಲೆ ಕಳೆದ ಎರಡು ವರ್ಷಗಳಲ್ಲಿ 80ಕ್ಕೂ ಹೆಚ್ಚು ಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಿ, ಮುಚ್ಚಿಸುತ್ತಿದೆ. ಆದರೆ, ಈಗ ಮನೆಗಳಲ್ಲೇ ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿರುವುದನ್ನು ಬಿಬಿಎಂಪಿ ಪತ್ತೆಹಚ್ಚಿದೆ!

Advertisement

ರಾಜಗೋಪಾಲನಗರ ವಾರ್ಡ್‌ನ ಮದ್ದೂರಮ್ಮ ಲೇಔಟ್‌ನ ಮನೆಯೊಂದರಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪಾದಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಗುರುವಾರ ಮನೆಯ ಮೇಲೆ ದಿಢೀರ್‌ ದಾಳಿ ನಡೆಸಿದ್ದಾರೆ. 350 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್‌ ಜಪ್ತಿ ಮಾಡಿದ್ದು, 30 ಸಾವಿರ ರೂ. ದಂಡ ವಿಧಿಸಿದ್ದಾರೆ.

ಮದ್ದೂರಮ್ಮ ಲೇಔಟ್‌ನ ಶ್ರೀನಿವಾಸಮೂರ್ತಿ ಎಂಬವರು ತಮ್ಮ ಮನೆಯ 2 ಮತ್ತು 3ನೇ ಮಹಡಿಯಲ್ಲಿ ಪ್ಲಾಸ್ಟಿಕ್‌ ಕೈಚೀಲ ಮತ್ತು ಕಲ್ಯಾಣ ಮಂಟಪಗಳಲ್ಲಿ ಊಟದ ಮೇಜಿನ ಮೇಲೆ ಹಾಸುವ ಪ್ಲಾಸ್ಟಿಕ್‌ ತಯಾರಿಸಿ ಶೇಖರಿಸಿಟ್ಟಿದ್ದರು. ಈ ಕುರಿತು ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚ ರಣೆ ನಡೆಸಿ, ಪ್ಲಾಸ್ಟಿಕ್‌ ತಯಾರಿಸಲು ಬಳಸುತ್ತಿದ್ದ ಯಂತ್ರ ಜಪ್ತಿ ಮಾಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ತಂಡದೊಂದಿಗೆ ಶುಕ್ರವಾರ ಯಂತ್ರೋಪ ಕರಣ ವಶಕ್ಕೆ ಪಡೆಯಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ದಾಳಿ: ದಕ್ಷಿಣ ವಲಯದ ಮುನೇಶ್ವರ ಬ್ಲಾಕ್‌, ಕತ್ರಿಗುಪ್ಪೆ, ಬನಶಂಕರಿ ಮಾರುಕಟ್ಟೆ, ಕನಕಪುರ ಮುಖ್ಯರಸ್ತೆ, ರಾಜರಾಜೇಶ್ವರಿ ನಗರ ವಲಯದ ಗೊಲ್ಲರಹಟ್ಟಿ, ಮಾಗಡಿ ಮುಖ್ಯರಸ್ತೆ, ಬ್ಯಾಡರಹಳ್ಳಿ, ಕೆಂಗೇರಿ, ಕೋಡಿಪಾಳ್ಯ, ತಲಘಟ್ಟಪುರ, ಮಹದೇವಪುರ ವಲಯದ ಪೈ ಲೇಔಟ್, ದೇವಸಂದ್ರ ಮುಖ್ಯರಸ್ತೆ, ಸರ್ಜಾಪುರ ರಸ್ತೆ, ಯಲಹಂಕ ವಲಯದ ವಿನಾಯಕನಗರ, ಭುವನೇಶ್ವರಿ ನಗರ, ಸಹಕಾರನಗರ, ನಾಗೇನಹಳ್ಳಿ, ವಿದ್ಯಾರಣ್ಯಪುರ, ದಾಸರಹಳ್ಳಿ ವಲಯದ ಮದ್ದೂರಮ್ಮ ಲೇಔಟ್, ಪಶ್ಚಿಮ, ಪೂರ್ವ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ವಾರ್ಡ್‌ಗಳಲ್ಲಿ ದಾಳಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next