Advertisement

ಝೀರೋ ಬೆಲೆಗೆ ಜಿಯೋ; ರಿಲಯನ್ಸ್‌ ಕಂಪೆನಿಯಿಂದ  ಹೊಸ ಫೋನ್‌

07:25 AM Jul 22, 2017 | Team Udayavani |

ಮುಂಬಯಿ: ಈಗಾಗಲೆ ಜನರ ಕೈಗೆ ಉಚಿತ ಸಿಮ್‌ ಕೊಟ್ಟು, ಉಚಿತ ಡಾಟಾ ಮತ್ತು ಕರೆ ಸೌಲಭ್ಯ ನೀಡಿ, ಅತ್ಯಲ್ಪ ಅವಧಿಯಲ್ಲೇ 12 ಕೋಟಿ ಚಂದಾದಾರರನ್ನು ತೆಕ್ಕೆಗೆ ಸೆಳೆದುಕೊಂಡ ರಿಲಯನ್ಸ್‌ ಜಿಯೋ, ಇದೀಗ ವಾಸ್ತವದಲ್ಲಿ “ಶೂನ್ಯ ಬೆಲೆ’ಗೆ 4ಜಿ ಸೌಲಭ್ಯವಿರುವ ಫೀಚರ್‌ ಫೋನ್‌ ಬಿಡುಗಡೆ ಮಾಡಿದೆ!

Advertisement

ಆರಂಭದಲ್ಲಿ 1500 ರೂ. ಠೇವಣಿ ಇರಿಸಿ “ಜಿಯೋ ಫೋನ್‌’ ಪಡೆಯುವ ಗ್ರಾಹಕರು, ಜೀವಮಾನವಿಡೀ ಉಚಿತ ವಾಯ್ಸ ಕಾಲ್‌, ಉಚಿತ ಎಸ್‌ಎಂಎಸ್‌ ಸೌಲಭ್ಯ ಪಡೆಯಲಿದ್ದಾರೆ. ಮೂರು ವರ್ಷ ನಂತರ ಈ ಫೋನ್‌ ವಾಪಸ್‌ ಕೊಟ್ಟರೆ 1500 ರೂ. ಠೇವಣಿ ಹಣವನ್ನು ಸಂಸ್ಥೆ ವಾಪಸ್‌ ನೀಡಲಿದೆ. ಹೀಗಾಗಿ ಗ್ರಾಹಕರು ವಾಸ್ತವದಲ್ಲಿ ಶೂನ್ಯ ಬೆಲೆಗೆ ಫೋನ್‌ ಖರೀದಿಸಿದಂತಾಗುತ್ತದೆ.

ಈಗಾಗಲೆ ದೂರಸಂಪರ್ಕ ಕ್ಷೇತ್ರದಲ್ಲಿ ಡಾಟಾ ಕ್ರಾಂತಿಗೆ ನಾಂದಿ ಹಾಡಿರುವ ಉದ್ಯಮಿ ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಸಂಸ್ಥೆ, “ಜಿಯೋ ಫೋನ್‌’ ಮೂಲಕ, ಕಡಿಮೆ ಆದಾಯ ಹೊಂದಿರುವ ದೇಶದ 50 ಕೋಟಿ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ. ಇದರೊಂದಿಗೆ ಸದ್ಯದಲ್ಲೇ ಸ್ಥಿರ ದೂರವಾಣಿ ಕ್ಷೇತ್ರವನ್ನೂ ಪ್ರವೇಶಿಸುವುದಾಗಿಯೂ ಹೇಳಿದೆ.

ಐದು ಪ್ರಮುಖ ಅಂಶಗಳು
ಜಿಯೋ ಫೋನ್‌ ಉಚಿತವಾಗಿದ್ದು, ಗ್ರಾಹಕರು 1,500 ರೂ. ಠೇವಣಿ ಇರಿಸಬೇಕು (3 ವರ್ಷದ ನಂತರ ಫೋನ್‌ ಮರಳಿಸಿದರೆ ಠೇವಣಿ ಹಣ ವಾಪಸ್‌)

ಜಿಯೋ ಫೋನ್‌ ಗ್ರಾಹಕರಿಗೆ ಜೀವನವಿಡೀ ವಾಯ್ಸ ಕಾಲ್‌, ಎಸ್‌ಎಂಎಸ್‌ ಉಚಿತ ವಾಗಿದ್ದು, ತಿಂಗಳಿಗೆ 153 ರೂ. ಪಾವತಿ ಸಿದರೆ ಅನಿಯಮಿತ 4ಜಿ ಡಾಟಾ ಸಿಗಲಿದೆ.

Advertisement

ಆ.24ರಿಂದ ಮುಂಗಡ ಬುಕಿಂಗ್‌ ಆರಂಭವಾಗಲಿದ್ದು, ಸೆಪ್ಟಂಬರ್‌ ತಿಂಗಳಿ ನಿಂದ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಜಿಯೋ ಫೋನ್‌ ಸಿಗಲಿದೆ.

ಜಿಯೋ ಫೋನ್‌ ಇಂಟರ್‌ನೆಟ್‌ ಸಂಪರ್ಕದೊಂದಿಗೆ ಬರಲಿದ್ದು, 22 ಭಾರತೀಯ ಭಾಷೆಗಳು ಮತ್ತು ವಾಯ್ಸ ಕಮಾಂಡ್‌ಗೆ ಫೋನ್‌ ಬೆಂಬಲಿಸುತ್ತದೆ.

ಜಿಯೋ ಟೀವಿ, ಜಿಯೋ ಮೂವೀಸ್‌ ಸೇರಿದಂತೆ ಎಲ್ಲ ಜಿಯೋ ಸೇವೆಗಳು ಫೋನ್‌ನಲ್ಲಿ ಇರಲಿವೆ.

ಟೆಲಿಕಾಂ ಕಂಪೆನಿಗಳಿಗೆ ಶಾಕ್‌; ಸೆನ್ಸೆಕ್ಸ್‌ ಏರಿಕೆ
ರಿಲಯನ್ಸ್‌ ಕಂಪೆನಿಯ ತ್ತೈಮಾಸಿಕ ಆದಾಯದಲ್ಲಾದ ಹೆಚ್ಚಳ, ಶೂನ್ಯ ಬೆಲೆಗೆ ಮೊಬೈಲ್‌ ಬಿಡುಗಡೆ, ಪ್ರತಿ ಷೇರಿಗೂ ಒಂದು ಬೋನಸ್‌ ಷೇರು ಘೋಷಣೆ… ಇವೆಲ್ಲವೂ ಮುಂಬಯಿ ಷೇರುಪೇಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಶುಕ್ರವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 124 ಅಂಕ ಏರಿಕೆಯಾದರೆ, ನಿಫ್ಟಿ 41 ಅಂಕ ಏರಿಕೆ ದಾಖಲಿಸಿದೆ. ಇದರಲ್ಲಿ ರಿಲಯನ್ಸ್‌ ಷೇರುಗಳ ಕೊಡುಗೆಯೇ ಶೇ.3.76ರಷ್ಟಿತ್ತು. 

ಇನ್ನೊಂದೆಡೆ, ರಿಲಯನ್ಸ್‌ನ ಈ ಅಲೆಗೆ ಉಳಿದ ಟೆಲಿಕಾಂ ಕಂಪೆನಿಗಳು ತರಗೆಲೆಗಳಂತಾಗಿವೆ. ಭಾರ್ತಿ ಏರ್‌ಟೆಲ್‌ ಷೇರುಗಳು ಶೇ.2.05ರಷ್ಟು ಕುಸಿತ ದಾಖಲಿಸಿದೆ. ಜಿಯೋ ಸಿಮ್‌ನಿಂದ ತೀವ್ರ ಒತ್ತಡಕ್ಕೊಳಗಾಗಿರುವ ಟೆಲಿಕಾಂ ಕಂಪೆನಿಗಳಿಗೆ ಹೊಸ ಮೊಬೈಲ್‌ ಬಿಡುಗಡೆ ಮತ್ತಷ್ಟು ಆಘಾತ ನೀಡಿದೆ. ಜಿಯೋ ಫೋನ್‌ ಮತ್ತು ಟಿವಿಯಿಂದಾಗಿ ಕೇಬಲ್‌ ಟಿವಿ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಏಕೆಂದರೆ, ಜಿಯೋ ಫೋನ್‌ನಲ್ಲಿ ಟಿವಿ ಕೇಬಲ್‌ ಎಂಬ ಹೊಸ ಫೀಚರ್‌ ನೀಡಿರುವುದರಿಂದ ಅದನ್ನು ಮನೆಯಲ್ಲಿ ಯಾವುದೇ ಟಿವಿಗೆ ಅಳವಡಿಸಬಹುದು.
 

Advertisement

Udayavani is now on Telegram. Click here to join our channel and stay updated with the latest news.

Next