Advertisement
ಶಾಖ ಹಾಗೂ ತೇವಾಂಶಕ್ಕಿರುವ ಸಂಬಂಧತಾಪಮಾನ ಕಡಿಮೆಯಾದಷ್ಟೂ ಗಾಳಿಯಲ್ಲಿ ಇರಬಹುದಾದ ನೀರಿನ ಅಂಶ ಕಡಿಮೆಯಾಗುತ್ತ ಹೋಗುತ್ತದೆ. ಹಾಗೆಯೇ ಬಿಸಿಯೇರಿದಷ್ಟೂ ಹೆಚ್ಚು ಹೆಚ್ಚು ತೇವಾಂಶ ಸೇರಿಕೊಳ್ಳಲು ಅನುಕೂಲಕರ. ಇದನ್ನು ರಿಲೆಟೀವ್ ಹ್ಯೂಮಿಡಿಟಿ ಅಥವಾ ಆಯಾ ತಾಪಮಾನದೊಂದಿಗೆ ತಾಳೆ ನೋಡಿ ಲೆಕ್ಕಾಚಾರವಾಗಿ ಕಂಡುಕೊಂಡ ಅಂಶ ಎನ್ನಬಹುದು. ಇನ್ನೊಂದು ರೀತಿಯಲ್ಲಿ ಹೇಳಬಹುದಾದರೆ, ತಾಪಮಾನ ಮೂವತ್ತೆ„ದು ಡಿಗ್ರಿ ಸೆಲಿÒಯಸ್ ಇದ್ದಾಗ ತೇವಾಂಶ- ಶೇ. 50 ರಷ್ಟು ಇದ್ದರೆ, ಫ್ಯಾನ್ ಹಾಕಿಕೊಂಡರೆ ಸಾಕು, ಆರಾಮವೆನಿಸುತ್ತದೆ. ಆದರೆ ತಾಪಮಾನ ಮೂವತ್ತು ಡಿಗ್ರಿ ಇದ್ದಾಗಲೂ ಹ್ಯುಮಿಡಿಟಿ ಶೇ.90ರಷ್ಟು ಇದ್ದರೆ, ಫ್ಯಾನ್ ತಿರುಗಿದರೂ ನಮಗೆ ಆರಾಮ ಎನಿಸುವುದಿಲ್ಲ! ಏಕೆಂದರೆ, ನಮ್ಮ ದೇಹದಿಂದ ಶಾಖ ಹೊರಹೋಗಲು ಅಗತ್ಯವಿರುವ ತಂಪಾಗಿಸುವ ಕ್ರಿಯೆಗೆ – ಎವಾಪೊರೇಷನ್, ಅಂದರೆ- ಬೆವರು ಹರಿದದ್ದು
ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟಲು ಹೆಚ್ಚು ಹೆಚ್ಚು ಕೃತಕ ವಸ್ತುಗಳನ್ನು ಬಳಸುತ್ತಿದ್ದೇವೆ. ಇವು ಮರ, ಇಟ್ಟಿಗೆ, ಕಲ್ಲಿನಂತೆ “ಉಸಿರಾಡುವುದಿಲ್ಲ’! ಅಂದರೆ, ಇಟ್ಟಿಗೆ ಹಾಗೂ ಮರದಲ್ಲಿ ಸಣ್ಣ ಸಣ್ಣ ರಂದ್ರಗಳಿದ್ದು, ಇವು ಮನೆಯ ಹೊರಗೆ ಹಾಗೂ ಒಳಗಿನ ವಾತಾವರಣವನ್ನು ಸರಿದೂಗಿಸಿಕೊಂಡು ಹೋಗಲು ಸಹಾಯಕಾರಿಯಾಗಿರುತ್ತವೆ. ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಆಧಾರಿತ ಬಣ್ಣ ಬಳಿದ ಗೋಡೆಗಳಿಗೆ ಈ ಮುಖ್ಯ ಗುಣ ಇರುವುದಿಲ್ಲ. ಮನೆಯ ಒಳಾಂಗಣದಲ್ಲಿ ಸೂಕ್ತ ರೀತಿಯಲ್ಲಿ ಗಾಳಿ ಆಡದಿದ್ದರೆ, ತೇವಾಂಶ ಹೆಚ್ಚಾಗಿ, ಬೂಷ್ಟು ಹಿಡಿಯುವುದು, ಮುಗ್ಗಲು ವಾಸನೆ ಬರುವುದು ಇತ್ಯಾದಿ ಶುರುವಾಗುತ್ತದೆ. ಸಾಮಾನ್ಯವಾಗಿ ಮಳೆಯ ಆರ್ಭಟಕ್ಕೆ ಎಲ್ಲರೂ ಎಲ್ಲ ಕಿಟಕಿ ಬಾಗಿಲುಗಳನ್ನೂ ಭದ್ರ ಪಡಿಸಿ, ಗಾಳಿ ಆಡದಂತೆ ಮಾಡಿಬಿಡುತ್ತಾರೆ. ಹೇಳಿ ಕೇಳಿ ಈ ಸಂದರ್ಭದಲ್ಲಿ ಮನೆಯೊಳಗೆ ಹೊರಗಡೆಗಿಂತಲೂ ಹೆಚ್ಚು ತಾಪಮಾನವಿರುತ್ತದೆ. ಜೊತೆಗೆ ನೀರಿನ ಅಂಶವೂ ವಿವಿಧ ಮೂಲಗಳಿಂದ, ಅಂದರೆ, ಉಸಿರು ಹೊರಬಿಡುವ ಗಾಳಿಯಿಂದಲೂ ನಿರಂತರವಾಗಿ ಸೇರ್ಪಡೆ ಯಾಗುತ್ತಿರುತ್ತದೆ. ಇದೆಲ್ಲ ಹೊರಹೋಗಲು ಸೂಕ್ತ ವ್ಯವಸ್ತೆ ಇರದಿದ್ದರೆ, ಮನೆಯ ಒಳಾಂಗಣದಲ್ಲಿ ವಿಪರೀತ ಎನ್ನುವಷ್ಟು ತೇವಾಂಶ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.
Related Articles
ದೊಡ್ಡ ದೊಡ್ಡ ತೆರೆದ ಜಾಗ ಅಂದರೆ ಕಿಟಕಿ ಬಾಗಿಲುಗಳನ್ನು ಮಳೆ ಜೋರಾಗಿ ಸುರಿಯುತ್ತಿದ್ದರೆ ಮುಚ್ಚುವುದು
ಅನಿವಾರ್ಯವಾದರೂ, ಕೆಲವೊಂದು ಸಣ್ಣ ಸ್ಥಳ ಅಂದರೆ ಗವಾಕ್ಷಿಗಳ ಮೂಲಕ ಸ್ವಲ್ಪವಾದರೂ ತಾಜಾ ಗಾಳಿ ಮನೆಯ ಒಳಗೆ ಪ್ರವೇಶಿಸುವಂತೆ ಮಾಡಬೇಕು. ಸಾಮಾನ್ಯವಾಗಿ ಸೂಕ್ತ ನೀರು ನಿರೋಧಕ ಸಜ್ಜಾ ಮಾದರಿಯ ಹೊರಚಾಚುಗಳನ್ನು ವೆಂಟಿಲೇಟರ್‌ಗಳಿಗೆ ನೀಡಿದರೆ, ಮಳೆ ಮನೆಯೊಳಗೆ ಪ್ರವೇಶಿಸುವುದಿಲ್ಲ. ಹಿಂದಿನ ಕಾಲದಲ್ಲಿ, ಕಡೇ ಪಕ್ಷ ಮನೆಯೊಳಗೆ ಗಾಳಿ ಆಡಲಿ ಎಂದು ಬಾಗಿಲುಗಳಿಗೇ “ಲೂವರ್’ – ಮರದ ಅಡ್ಡ ಪಟ್ಟಿಗಳನ್ನು ಸ್ವಲ್ಪ ಸಂದಿಯೊಡನೆ ಅಳವಡಿಸಿ, ನೀಡಲಾಗುತ್ತಿತ್ತು. ಖಾಸಗಿತನ ಬೇಕೆಂದಾಗ ಕರ್ಟನ್ ಎಳೆಯುವುದರ ಮೂಲಕ ಗಾಳಿಯ ಹರಿವು ನಿಲ್ಲದಂತೆ ನೋಡಿಕೊಳ್ಳಲಾಗುತ್ತಿತ್ತು. ಈ ಹಿಂದೆ ಫ್ಯಾನ್ ಇಲ್ಲದ ದಿನಗಳಲ್ಲಿ ಹೀಗೆಲ್ಲ ಮಾಡುವುದು ಅನಿವಾರ್ಯವಾಗಿತ್ತು. ಆದರೆ, ಇಂದಿನ ವಿದ್ಯುತ್ ಚಾಲಿತ ಫ್ಯಾನ್ ಹಾಗೂ ಅದಕ್ಕೂ ಮೀರಿದರೆ ಏರ್ ಕಂಡಿಷನ್ ಮಾಡಿಬಿಡುತ್ತೇವೆ ಹೊರತು ಈ ನೈಸರ್ಗಿಕ ಮೂಲಗಳತ್ತ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಎ.ಸಿ ಇಲ್ಲವೇ ಫ್ಯಾನ್‌ಗೆ ಹೋಲಿಸಿದರೆ, ಮನೆಯೊಳಗೆ ಸ್ವಾಭಾವಿಕವಾಗಿ ಹರಿದಾಡುವ ಗಾಳಿಯೇ ಹೆಚ್ಚು ಆರೋಗ್ಯಕರ.
Advertisement
ಮನೆಯ ಶಾಖ ಕಾಪಾಡಿಕೊಳ್ಳಿಮನೆಯ ಒಳಗಿನ ತಾಪಮಾನ ಹೆಚ್ಚಾದರೆ, ತೇವಾಂಶ ರಿಲೆಟೀವ್ ಆಗಿ ಅಂದರೆ ಹೊರಗಿನ ತಾಪಮಾನಕ್ಕೆ ಹೋಲಿಸಿದರೆ ಕಡಿಮೆ ಆದಂತೆ ಆಗುತ್ತದೆ. ಆದುದರಿಂದ, ಮಳೆಗಾಲದಲ್ಲಿ ಹೊರಗಿನ ತಾಪಮಾನ ಕಡಿಮೆ (ಅಂದರೆ ಸುಮಾರು ಇಪ್ಪತ್ತೆ„ದು ಡಿಗ್ರಿ ಸೆಲಿÏಯಸ್ ಗಿಂತ ಕಡಿಮೆ) ಇದ್ದಾಗಅಡುಗೆ ಮನೆಯ ಶಾಖ ಒಳಾಂಗಣದೊಳಗೆ ಹರಿದು ಹೋಗುವಂತೆ ಮಾಡುವುದರ ಮೂಲಕವೂ ನಾವು ಹ್ಯುಮಿಡಿಟಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಮನೆಯ ವಿನ್ಯಾಸ ಮಾಡುವಾಗಲೇ ನಿರ್ಧರಿಸಿ, ಮಳೆಗಾಲದ ಗಾಳಿಯ ದಿಕ್ಕನ್ನು ಪರಿಗಣಿಸಿ, ಸೂಕ್ತ ಸ್ಥಳದಲ್ಲಿ ಅಡುಗೆ ಮನೆಯನ್ನು ನಿರ್ಮಿಸಬೇಕು. ಹೀಗೆ ಮಾಡುವುದರಿಂದ ಥಂಡಿ ಹೊಡೆಯುವಾಗ ಮನೆ ಬೆಚ್ಚಗಿರುವುದರ ಜೊತೆಗೆ, ಹೊರಗಿನ ತಾಪಮಾನ ಹೆಚ್ಚಿನ ತೇವಾಂಶದಿಂದ ಹದಗೆಟ್ಟಿದ್ದರೂ, ಮನೆಯ ಒಳಾಂಗಣದಲ್ಲಿ ರಿಲೆಟೀವ್ ಹ್ಯುಮಿಡಿಟಿ ಕಡಿಮೆ ಇರುತ್ತದೆ. ಮನೆಯ ಎತ್ತರ ಹಾಗೂ ತೇವಾಂಶ
ಸಾಮಾನ್ಯವಾಗಿ ಒಂದಲ್ಲ ಒಂದು ರೀತಿಯಲ್ಲಿ ನೆಲ ಮಟ್ಟದಲ್ಲಿ ನೀರು ಮನೆಯನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ನಾವು ಎಷ್ಟೇ ಎಚ್ಚರದಿಂದಿದ್ದರೂ ತೇವಾಂಶ ಹೇಗೋ ಒಳನುಸುಳಿ, ಇಡೀ ಮನೆ ಥಂಡಿ ಹೊಡೆಯುವಂತೆ ಮಾಡಿಬಿಡುತ್ತದೆ. ಮನೆಯ ಪ್ಲಿಂತ್ ಅನ್ನು ಒಂದೆರಡು ಅಡಿ ಹೆಚ್ಚಿಗೆ ಇಡುವುದರ ಮೂಲಕವೂ ನಾವು ಮನೆಯೊಳಗೆ ನೆಲದ ಮೂಲಕ ತೇವಾಂಶ ಹೆಚ್ಚುವರಿಯಾಗಿ ಸೇರುವುದನ್ನು ತಡೆಯಬಹುದು. ಜೊತೆಗೆ, ಗೋಡೆಗಳ ಮೂಲಕ ತೇವಾಂಶ ಮೇಲೆ ಬರುವುದನ್ನು ತಡೆಯಲು, ಸೂಕ್ತ ಪ್ಲಿಂತ್ – ತೇವಾಂಶ ನಿರೋಧಕ ಪದರವನ್ನು ಪಾಯದ ಮೇಲೆ ಹಾಗೂ ಗೋಡೆಯ ಕೆಳಗೆ, ವಾಟರ್ ಪೂ›ಫ್ ಕೆಮಿಕಲ್ ಬೆರೆಸಿ ಹಾಕಬೇಕು. ಮಳೆ ಬಿದ್ದಂತೆ, ಬಿಸಿಲು ಕಾಯ್ದಂತೆ ವಾತಾವರಣ ಬದಲಾಗುತ್ತಲೇ ಇರುತ್ತದೆ. ನಮ್ಮ ದೇಹದ ಹಾಗೆಯೇ ನಮ್ಮ ಮನೆಯೂ ಕೂಡ ಕೆಲ ನಿರ್ದಿಷ್ಟ ತಾಪಮಾನ ಹಾಗೂ ತೇವಾಂಶ ಹೊಂದಿದ ವಾತಾವರಣದಲ್ಲಿ ಇರಲು ಬಯಸುತ್ತದೆ. ಹಾಗಾಗಿ ಮನೆಯ ವಿನ್ಯಾಸ ಮಾಡುವಾಗ ಸ್ವಲ್ಪ ಕಾಳಜಿವಹಿಸಿ ಈ ಆಂಶಗಳನ್ನು ಪರಿಗಣಿಸಿದರೆ, ಆರೋಗ್ಯಕರ ಒಳಾಂಗಣ ನಮ್ಮದಾಗುತ್ತದೆ. ಹೆಚ್ಚಿನ ಮಾತಿಗೆ ಫೋನ್ 98441 32826 ಆರ್ಕಿಟೆಕ್ಟ್ ಕೆ ಜಯರಾಮ್