Advertisement

3 ದಶಕಗಳ ಬಳಿಕ 500 ಕುಟುಂಬಗಳಿಗೆ ನೆಲೆ

06:32 PM Jul 07, 2022 | Team Udayavani |

ಚನ್ನರಾಯಪಟ್ಟಣ: ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ 500 ಕುಟುಂಬಕ್ಕೆ 30 ವರ್ಷ ದ ನಂತರ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ಶಾಸಕ ಸಿ.ಎನ್‌ .ಬಾಲಕೃಷ್ಣ ತಿಳಿಸಿದರು.

Advertisement

ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ವಾಜಪೇಯಿ ಆವಾಸ್‌ ಯೋಜನೆ, ಅಂಬೇಡ್ಕರ್‌ ಆವಾಸ್‌ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫ‌ಲಾನುಭವಿ ಗಳಿಗೆ ಆದೇಶ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು. ಮನೆ ಯನ್ನು ಹೊಂದಿದ್ದ ಸಾಕಷ್ಟು ಕುಟುಂಬಗಳಿಗೆ ಹಕ್ಕು ಪತ್ರವಿಲ್ಲದೆ ಪರಿತಪಿಸುತ್ತಿದ್ದರು ಅವರ ಸಮಸ್ಯೆ ಬಗೆ ಹರಿಸಲಾಗಿದೆ ಎಂದರು.

ನೆಲೆ ಕಲ್ಪಿಸಲು ಹಕ್ಕು ಪತ್ರ: ಪುರಸಭೆ ವ್ಯಾಪ್ತಿಯ ಸಂತೆ ಮೈದಾನದ ಸಮೀಪದ ರೇಣುಕಾನಗರ, ಕರೆಬೀದಿ ಗಂಗಾಮತಸ್ಥರ ಬೀದಿ, ಅಗ್ರಹಾರ ರಸ್ತೆ ಅರಳಿಕಟ್ಟೆ ಕೊಳಚೆ ಪ್ರದೇಶದಲ್ಲಿ ವಾಸವಾಗಿರುವ ಅನೇಕ ಕುಟುಂಬಗಳು ಮನೆ ನಿರ್ಮಾಣ ಮಾಡಿಕೊಂಡು ಮೂರು ದಶಕ ದಿಂದ ವಾಸವಾಗಿದ್ದಾರೆ. ಅವರಿಗೆ ಈವರೆಗೂ ಹಕ್ಕು ಪತ್ರವಿಲ್ಲದೆ ಅತಂತ್ರರಾಗಿದ್ದರು. ಅವರಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ಮೂಲಕ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ಹೇಳಿದರು.

ಸಹಾಯ ಧನ ಲಭಿಸಲಿದೆ: ವಾಜಪೇಯಿ ಆವಾಸ್‌ ಯೋಜನೆ, ಅಂಬೇಡ್ಕರ್‌ ಆವಾಸ್‌ ಯೋಜನೆ ಅಡಿಯಲ್ಲಿ ಸೂರು ನಿರ್ಮಾಣ ಮಾಡಿಕೊಳ್ಳುವ ಫ‌ಲಾನುಭವಿಗಳಿಗೆ ಪುರಸಭೆಯಿಂದ ಸಹಾಯ ಧನ ನೀಡಲಾಗುವುದು. ಇದರ ಆದೇಶ ಪತ್ರವನ್ನು ಈಗಾಗಲೆ ನೀಡಲಾಗುತ್ತಿದೆ.

ಅವರು ಮನೆ ನಿಗದಿತ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಇನ್ನು ಪುರಸಭೆ ವ್ಯಾಪ್ತಿಯಲ್ಲಿ 75 ಮನೆ ನಿರ್ಮಾಣದ ಗುರಿ ಹೊಂದಲಾಗಿದೆ. ಈವರೆಗೆ 49ಅರ್ಜಿ ಬಂದಿವೆ. ಇನ್ನು 26ಅರ್ಜಿ ಸಲ್ಲಿಕೆಗೆ ಅವಕಾಶವಿದೆ.ಆಸಕ್ತರು ಕೂಡಲೆ ಅರ್ಜಿ ನೀಡುವಂತೆ ತಿಳಿಸಿದರು.

Advertisement

6.50 ಕೋಟಿ ರೂ. ಅನುದಾನ ಬಿಡುಗಡೆ:
ಪುರಸಭೆಯನ್ನು ಮೇಲ್ದರ್ಜೆಗೆ ಏರಿಸಿ ನಗರಸಭೆಯನ್ನಾಗಿ ಮಾಡುವಂತೆ ಕಳೆದ ವರ್ಷ ಸರ್ಕಾರಕ್ಕೆ ಸೂಕ್ತ ದಾಖಲಾತಿ ಗಳೊಂದಿಗೆ ಮನವಿ ಸಲ್ಲಿಸಲಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಮಂಡನೆ ವೇಳೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು. ನಗರೋತ್ಥಾನ ಯೋಜನೆ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಹಾಗೂ ಡಕ್‌ ನಿರ್ಮಾಣ ಸೇರಿದಂತೆ ಅಭಿವೃದ್ದಿ ಕೆಲಸಕ್ಕಾಗಿ ರಾಜ್ಯ ಸರ್ಕಾರದಿಂದ 6.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ, ಪುರಸಭೆ 23 ವಾರ್ಡಿನಲ್ಲಿ ಅಗತ್ಯ ಇರುವ ಕಾಮಗಾರಿಯನ್ನು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಪುರಸಭಾಧ್ಯಕ್ಷ ಸುರೇಶ್‌, ಉಪಾಧ್ಯಕ್ಷ ಧರಣೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಬನ ಶಂಕರಿ, ಸದಸ್ಯರಾದ ಸುರೇಶ್‌, ಗಣೇಶ್‌, ಲಕ್ಷ್ಮಣೇಗೌಡ, ಫ‌ರಾನಾ, ಕರೆಬೀದಿ ಜಗದೀಶ್‌, ನಂಜುಂಡಮೈಮ್‌, ನಂದೀಶ್‌, ರಾಣಿ, ರೇಖಾ, ಮುಖ್ಯಾಧಿಕಾರಿ ಕೃಷ್ಣ ಮೂರ್ತಿ ಮೊದಲಾದರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next