Advertisement
ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ವಠಾರದಲ್ಲಿನ ಗೃಹರಕ್ಷಕ ಕಚೇರಿಯಲ್ಲಿ ಗೃಹರಕ್ಷಕ ಸಿಬಂದಿಗಳೊಂದಿಗೆ ಕುಂದುಕೊರತೆಗಳ ಸಭೆ ನಡೆಸಿದ ಅವರು, ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕ ಸಿಬಂದಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಕರ್ತವ್ಯ ನಿರ್ವಹಣ ಆದೇಶವನ್ನು ಪಡೆದು ಕರ್ತವ್ಯದಿಂದ ವಿಮುಖರಾಗಿದ್ದ 2 ಗೃಹರಕ್ಷಕ ಸಿಬಂದಿಯನ್ನು ಅಮಾನತು ಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು.
ಇನ್ನು ಮುಂದೆ ಪೊಲೀಸ್ ಇಲಾಖೆಯೂ ಸೇರಿದಂತೆ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ತಲಾ 3 ತಿಂಗಳಿಗೊಮ್ಮೆ ಕಡ್ಡಾಯ ಬದಲಾವಣೆಯ ನೀತಿಯನ್ನು ಜಾರಿಗೊಳಿಸಲಾಗುವುದು. ಇದರಿಂದ ಗೃಹರಕ್ಷಕರಿಗೆ ಎಲ್ಲ ಇಲಾಖೆಗಳ ಕರ್ತವ್ಯವನ್ನು ಕಲಿಯಲು ಅವಕಾಶ ಲಭಿಸುತ್ತದೆ. ಕಾರ್ಯ ಕ್ಷೇತ್ರದಲ್ಲಿ ಹೊಸತನಕ್ಕೂ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು. ಉಪ್ಪಿನಂಗಡಿ ಮಾದರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಘಟಕಾಧಿಕಾರಿ ರಾಮಣ್ಣ ಆಚಾರ್ಯ, ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ ಮೊದಲಾದವರು ಉಪಸ್ಥಿತರಿದ್ದರು.
Related Articles
ಮುಂಬರುವ ಮಳೆಗಾಲದಲ್ಲಿ ಪ್ರವಾಹ ಸಂಬಂಧಿ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದಲ್ಲಿ ಪ್ರವಾಹ ರಕ್ಷಣ ತಂಡವನ್ನು ರಚಿಸಲಾಯಿತು. ವಿಪತ್ತು ನಿರ್ವಹಣ ಸಾಮಗ್ರಿಗಳನ್ನು ಪರಿಶೀಲಿಸಲಾಯಿತು.
Advertisement