Advertisement

ಹೇನು ನಿವಾರಣೆಗೆ ಮನೆ ಮದ್ದು

09:03 PM Oct 28, 2019 | mahesh |

ಶಾಲೆ, ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಲ್ಲಿ ಹೇನಿನ ಸಮಸ್ಯೆ ಹೆಚ್ಚು. ಇದರ ನಿವಾರಣೆಗೆ ತಾಯಿ ಪಡುವ ಪಾಡು ಹೇಳ ತೀರದು. ಒಬ್ಬರ ತಲೆಯಿಂದ ಇನ್ನೊಬ್ಬರ ತಲೆಗೆ ಈ ಹೇನು ಹರಡುವುದರಿಂದ ತಲೆನೋವಾಗಿ ಪರಿಣಮಿಸಿದೆ. ಇದರ ನಿವಾರಣೆಗೆ ರಾಸಾಯನಿಕ ವಸ್ತುಗಳನ್ನು ಬಳಸಿದರೆ ಕೂದಲಿಗೆ ಹಾನಿಯಾಗುವ ಸಂಭವಿರುತ್ತದೆ. ಆದರೆ ರಾಸಾಯನಿಕ ವಸ್ತುಗಳನ್ನು ಬಳಸದೆಯೇ ಕೆಲವು ನೈಸರ್ಗಿಕ ವಿಧಾನಗಳ ಮೂಲ ಹೇನನ್ನು ನಿವಾರಿಸಬಹುದು. ಇದರಿಂದ ಕೂದಲು ಉದುರುವ ಅಥವಾ ಕೂದಲಿಗೆ ಹಾನಿಯುಂಟಾಗುವ ಸಾಧ್ಯತೆ ಕಡಿಮೆ. ರಾಸಯನಿಕ ಬಳಸುವ ಬದಲು ಮನೆಮದ್ದುಗಳನ್ನು ಬಳಸಿ ಹೇನಿನಿಂದ ಮುಕ್ತಿ ಪಡೆಯಲು ಸಾಧ್ಯ.

Advertisement

ಒದ್ದೆ ಕೂದಲನ್ನು ಬಾಚುವುದು:
ತಲೆಗೆ ಸ್ನಾನ ಮಾಡಿ ಕೂದಲು ಒದ್ದೆ ಇರುವಾಗಲೇ ಕೂದಲನ್ನು ಬಾಚುವುದರಿಂದ ಹೇನನ್ನು ತೆಗೆಯಬಹುದು. ಕೂದಲು ಒದ್ದೆ ಇರುವಾಗ ಹೇನುಗಳಿಗೆ ಕೂದಲಿನ ಮಧ್ಯೆ ಓಡಿ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದುದರಿಂದ ಅವುಗಳನ್ನು ಸುಲಭವಾಗಿ ತೆಗೆಯಬಹುದು.

ಎಣ್ಣೆ ಬಳಸುವುದು
ಲ್ಯಾವೆಂಡರ್‌ ಎಣ್ಣೆ , ಈರುಳ್ಳಿ ಎಣ್ಣೆಯಂತಹ ಎಣ್ಣೆಗಳನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನಲ್ಲಿರುವ ಹೇನುಗಳು ನಾಶವಾಗುತ್ತವೆ. ಇದರ ಘಾಟಿಗೆ ಅವುಗಳು ಸಾಯುತ್ತವೆ.

ಉಪ್ಪು ಮತ್ತು ವಿನೇಗರ್‌ ಮಿಶ್ರಣ
ಕಾಲು ಕಪ್‌ ಉಪ್ಪು ಮತ್ತು ಕಾಲು ಕಪ್‌ ವಿನೇಗರ್‌ನ್ನು ಒಂದು ಸ್ಪ್ರೆ ಬಾಟಲ್‌ನಲ್ಲಲಿ ಹಾಕಿ ಕೂದಲಿನ ಬುಡ ಹಾಗೂ ಇಡೀ ಕೂದಲಿಗೆ ಸ್ಪ್ರೆ ಮಾಡಬೇಕು. ಎರಡು ಗಂಟೆಯ ಅನಂತರ ಸ್ನಾನ ಮಾಡಿದರೆ ಹೇನುಗಳು ನಾಶವಾಗುತ್ತವೆ.

ಬೇವು
ಬೇವಿನ ಎಲೆಯ ರಸ ಅಥವಾ ಬೇವಿನ ಎಲೆಯ ಪೇಸ್ಟ್‌ ನ್ನು ತಲೆಗೆ ಹಚ್ಚುವುದರಿಂದ ಹೇನು ನಾಶವಾಗಬಹುದು. ಎರಡು ಗಂಟೆ ಹೊತ್ತು ರಸ ಕೂದಲಿನಲ್ಲಿರಬೇಕು. ಹೀಗೆ ಮಾಡುವುದರಿಂದ ಕೂದಲಿನಲ್ಲಿರುವ ಹೇನುಗಳು ನಾಶವಾಗುತ್ತವೆ.

Advertisement

ಹೇನು ಹೇಗೆಲ್ಲ ಹರಡುತ್ತದೆ
· ಶಾಲೆ, ಕಾಲೇಜಿನಿಂದ
· ಹೇನು ಇರುವವವರ ಹತ್ತಿರ ಕುಳಿತುಕೊಳ್ಳುವುದರಿಂದ
· ಒಂದೇ ಹಾಸಿಗೆಯಲ್ಲಿ ಮಲಗುವುದರಿಂದ
· ಬಾಚಣಿಗೆ, ಬರ್ಶ್‌ ಅಥವಾ ಟವೆಲ್‌ ಹಂಚಿಕೊಳ್ಳುವುದರಿಂದ

- ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next