Advertisement

ಹೋಂ ಕ್ವಾರಂಟೈನ್‌: ಮನೆಮಂದಿಗೆಲ್ಲ ಸೋಂಕು!

04:55 PM May 14, 2021 | Team Udayavani |

ತುಮಕೂರು: ನಗರದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೋಂ ಕ್ವಾರಂಟೈನ್‌ ನಲ್ಲಿ ಇರುವವರು ಮನೆಯವರಿಗೆಲ್ಲ ಕೊರೊನಾ ಹರಡಿಸುತ್ತಿದ್ದು, ಇದನ್ನು ನಿಯಂತ್ರಿಸುವುದಕ್ಕಾಗಿ ಸ್ಥಳೀಯ ಸಂಸ್ಥೆಗಳ ನೆರವಿನಿಂದ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭಿಸಲಾಗುತ್ತಿದೆ ಎಂದು ಮಾಜಿ ಸಚಿವ ಸೊಗಡು ಎಸ್‌. ಶಿವಣ್ಣ ತಿಳಿಸಿದರು.

Advertisement

ನಗರದ ರೇಣುಕಾ ವಿದ್ಯಾಪೀಠದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಆಹಾರ, ಮೊಟ್ಟೆಯನ್ನು ನೀಡಲು ಕ್ರಮವಹಿಸಲಾಗು ವುದು. ಆರೋಗ್ಯ, ಜಿಲ್ಲಾಸ ³ತ್ರೆ ವೈದ್ಯರು ರೋಗಿಗಳ ಮೇಲ್ವಿಚಾರಣೆ ನಡೆಸಲಿದ್ದು, ಆಮ್ಲಜನಕದ ಅಗತ್ಯ ಇರುವವರಿಗೆ ಆಮ್ಲಜನಕ ಒದಗಿಸಲಾಗುವುದು. ಶನಿವಾರದಿಂದ ಈ ಕೋವಿಡ್‌ ಕೇರ್‌ ಘಟಕ ಪ್ರಾರಂಭ ವಾಗಲಿದ್ದು, ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಾಗುವಂತೆ ಮನವಿ ಮಾಡಿದರು.

ರೋಗಿಗಳಿಗೆ ಊಟದ ವ್ಯವಸ್ಥೆ: ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್‌ ಮಾತನಾಡಿ, ಸಮಾಜದ ವತಿಯಿಂದ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭಕ್ಕೆ ಮೂಲಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಕೋವಿಡ್‌ ರೋಗಿಗಳಿಗೆ ಮನರಂಜನೆ ಒದಗಿಸಲು ಎಲ್‌ ಇಡಿ ಅಳವಡಿಸುವ ಮೂಲಕ ಯಾವುದೇ ಕೊರತೆಯಾಗದಂತೆ ಕ್ರಮವಹಿಸಲಾಗಿದೆ ಎಂದರು.

ಕೋವಿಡ್‌ ಸೋಂಕಿತರಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದ್ದು, ರೋಟರಿ ವತಿಯಿಂದ ಆರ್‌ ಟಿಪಿಸಿಆರ್‌ ಯೂನಿಟ್‌ ಸ್ಥಾಪಿಸಲಾಗುತ್ತಿದೆ. ರೋಗಿ ಗಳಿಗೆ 500 ರೂ. ಶುಲ್ಕವನ್ನು ವಿಧಿಸಲಾಗುವುದು. ಹಾಗೆಯೇ ವೀರ ಶೈವ ಸಮಾಜದ ವತಿಯಿಂದಲೇ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಅಂತ್ಯಸಂಸ್ಕಾರಕ್ಕೆ ತೊಂದರೆ ಆಗುವುದಿಲ್ಲ: ಟಿಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಎನ್‌.ಎಸ್‌.ಜಯಕುಮಾರ್‌ ಮಾತ ನಾಡಿ, ಕೋವಿಡ್‌ ಅಲೆ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡುತ್ತಿರುವುದು ಶ್ಲಾಘನೀಯ ವಿಚಾರ. ಸ್ಮಶಾನ ಅಭಿವೃದ್ಧಿ ಆಗದೇ ಇರುವುದರಿಂದ ಅಂತ್ಯ ಸಂಸ್ಕಾ ರಕ್ಕೆ ತೊಂದರೆಯಾಗುತ್ತಿದ್ದನ್ನು ಮನಗಂಡು, ಥಾಣೆ ಮತ್ತು ಮಂಗಳೂರಿನಿಂದ ಒಟ್ಟು ಆರು ಅಂತ್ಯ ಸಂಸ್ಕಾರದ ಘಟಕವನ್ನು ತರಿಸಿ ಅಳವಡಿಸಲಾಗಿದ್ದು, ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುವುದಿಲ್ಲ ಎಂದರು.

Advertisement

ಚಿಕ್ಕನಾಯಕಹಳ್ಳಿಗೆ ಅಂತ್ಯಸಂಸ್ಕಾರದ ಘಟಕ ನೀಡುವಂತೆ ಸಚಿವ ಜೆ.ಸಿ ಮಾಧುಸ್ವಾಮಿ ಕೇಳಿದ್ದರು. ಈಗ ಮತ್ತೆ ಜನರು ಕೇಳಿದ್ದಾರೆ ಅದನ್ನು ತರಿಸಿಕೊಡು ತ್ತೇವೆ. 75 ಸಾವಿರ ಬೆಲೆಯ 9 ಲೀಟರ್‌ 300 ಕಾಂನ್ಸ ಟ್ರೇ ಟರ್‌ ನೀಡಲು ಉದ್ಯಮಿ ಹಾಗೂ ಸಂಘ- ಸಂಸ್ಥೆಗಳು ಮುಂದೆ ಬಂದಿದ್ದು, ಶೀಘ್ರದಲ್ಲಿಯೇ ಜಿಲ್ಲೆಗೆ ಬರಲಿದೆ. ನಂತರ ತಾಲೂಕುವಾರು ಹಂಚಿಕೆ ಮಾಡಲಾಗುವುದು. ಚೀನಾ ಉತ್ಪನ್ನಗಳನ್ನು ಬಹಿಷ್ಕರಿ ಸಲು ಹಿಂದೆ ಕರೆ ನೀಡಲಾಗಿತ್ತು. ಯಾವುದೇ ದೇಶಗಳು ಯಾವ ಉತ್ಪನ್ನವನ್ನು ಕಡೆಗಣಿಸುವುದಿಲ್ಲ. ಪರಸ್ಪರ ಅವಲಂಬನೆ ಇದ್ದು, ಭಾರತದಲ್ಲಿ ಚೀನಾ ಉತ್ಪನ್ನ ಆಮದಿಗೆ ಸರ್ಕಾರ ಅನುಮತಿ ನೀಡಿದೆ. ಜನರು ಬದುಕುವುದು ಮುಖ್ಯವಾಗಿದ್ದು, ಆಮದು ಶುಲ್ಕ ಕಡಿಮೆಯಾಗಿದ್ದು, ಜಿಎಸ್‌ಟಿ ಅನ್ನು ತೆಗೆದು ಹಾಕುವುದು ಅವಶ್ಯಕ ಎಂದರು.

ಪಾಲಿಕೆ ಸದಸ್ಯ ಲಕ್ಷ್ಮೀ  ನರಸಿಂಹರಾಜು, ಬಿಜೆಪಿ ಉಪಾಧ್ಯಕ್ಷ ಚಂದ್ರಶೇಖರ್‌, ಸಿದ್ದರಾಮೇಶ್ವರ್‌ ಅಡುಗೆ ಗ್ರೂಪ್‌ನ ಪ್ರಸನ್ನ, ರಮೇಶ್‌ ಬಾಬು, ಉಪಾಧ್ಯಕ್ಷ ಚಂದ್ರಮೌಳಿ, ರಂಗನಾಥ್‌, ಹರೀಶ್‌, ಪರಮೇಶ್‌, ರವಿಶಂಕರ್‌, ಸಿದ್ಧಲಿಂಗಮೂರ್ತಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next