Advertisement

ಮನೆ ಖರೀದಿ ಸಬ್ಸಿಡಿ ಪಡೆವ ಅವಧಿ ವಿಸ್ತರಣೆ

12:30 AM Jan 01, 2019 | Team Udayavani |

ಹೊಸದಿಲ್ಲಿ: ಹೊಸ ವರ್ಷ ಪ್ರವೇಶದ ಸಂದರ್ಭದಲ್ಲಿ ಸ್ವಂತ ಮನೆ ಹೊಂದಬೇಕು ಕನಸನ್ನು ಹೊತ್ತ ಮಧ್ಯಮ ವರ್ಗದವರಿಗೆ ಕೇಂದ್ರ ಸರಕಾರವು ಶುಭ ಸುದ್ದಿ ನೀಡಿದೆ. 6 ಲಕ್ಷ ರೂ.ಯಿಂದ 18 ಲಕ್ಷ ರೂ. ಆದಾಯ ಹೊಂದಿರುವ ಮಧ್ಯಮ ವರ್ಗದ ಜನರು ಖರೀದಿಸುವ ಮೊದಲ ಮನೆಗೆ 2020ರ ಮಾರ್ಚ್‌ ವರೆಗೂ ಸಬ್ಸಿಡಿ ಪಡೆಯಬಹುದಾಗಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಖಾತೆ ಸಹಾಯಕ ಸಚಿವ ಖಾತೆ ಸಚಿವ ಹರದೀಪ್‌ ಸಿಂಗ್‌ ಪುರಿ ಘೋಷಿಸಿದ್ದಾರೆ. ಈ ಯೋಜನೆಯ ಪ್ರಗತಿ ಅತ್ಯಂತ ಉತ್ತಮವಾಗಿದೆ. ಈ ವರ್ಷದ ಅಂತ್ಯದಲ್ಲಿ ಒಂದು ಲಕ್ಷ ಜನರು ಈ ಸೌಲಭ್ಯವನ್ನು ಪಡೆದಿದ್ದಾರೆ. ಹೀಗಾಗಿ ಬಡ್ಡಿ ಮೇಲಿನ ಸಬ್ಸಿಡಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಯನ್ನು 2016 ಡಿಸೆಂಬರ್‌ನಲ್ಲಿ ಮಧ್ಯಮ ವರ್ಗದವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದರು. ಆರಂಭದಲ್ಲಿ ಇದನ್ನು ಒಂದು ವರ್ಷದ ಅವಧಿಗೆ ಜಾರಿಗೆ ತರಲಾಗಿತ್ತು. ಅಂದಿನಿಂದಲೂ ಪ್ರತಿ ವರ್ಷ ಯೋಜ ನೆಯ ಅವಧಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next