Advertisement
ಸ್ನೇಹಿತನ ರೂಂನಲ್ಲಿ ಫಿಟ್‌ನೆಸ್2018ರಲ್ಲಿ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್ ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟ ಹೆಗ್ಗಳಿಕೆಯ ವಂಡ್ಸೆ ಸಮೀಪದ ಚಿತ್ತೂರಿನ ಗುರುರಾಜ್ ಪೂಜಾರಿ ಅವರು ಫಿಟ್‌ನೆಸ್‌ಗಾಗಿ ಉಜಿರೆಯಲ್ಲಿರುವ ತನ್ನ ಸ್ನೇಹಿತನ ರೂಂನಲ್ಲಿ ದ್ದಾರೆ. ಅಲ್ಲೇ ಬೆಳಗ್ಗೆ 2 ಗಂಟೆ ಹಾಗೂ ಸಂಜೆ 2 ಗಂಟೆಗಳ ಕಾಲ ತರಬೇತಿ ಮಾಡುತ್ತಿದ್ದಾರೆ.
ಚಂಡೀಗಢದಲ್ಲಿ ಏರ್‌ಫೋರ್ಸ್‌ನಲ್ಲಿ ಉದ್ಯೋಗದಲ್ಲಿರುವ ಇವರು ಫೆಬ್ರವರಿಯಲ್ಲಿ 40 ದಿನಗಳ ರಜೆಗೆಂದು ಊರಿಗೆ ಬಂದಿದ್ದು, ಆ ಬಳಿಕ ಲಾಕ್‌ಡೌನ್‌ನಿಂದಾಗಿ ವಾಪಸು ತೆರಳಲು ಸಾಧ್ಯವಾಗಿರಲಿಲ್ಲ. ಊರಲ್ಲಿದ್ದರೆ ಫಿಟ್‌ನೆಸ್‌ಗಾಗಿ ಅಭ್ಯಾಸ ಕಷ್ಟ ಎಂದು, ಉಜಿರೆಯ ತನ್ನ ಸ್ನೇಹಿತನ ರೂಂನಲ್ಲಿದ್ದುಕೊಂಡು ಜತೆಯಾಗಿ ಅಭ್ಯಾಸ ಮಾಡುತ್ತಿದ್ದಾರೆ. ಪುಶ್‌ಅಪ್, ಜಾಗ್, ಜಂಪ್ಸ್, ಸ್ಟೆಪ್ಸ್ ವಕೌìಟ್, ಕೋರ್ ಸ್ಟ್ರೆಂಥ್, ಸ್ಟೆಬಿಲಿಟಿ ಎಕ್ಸೈಜ್, ಹೈಪರ್ ಎಕ್ಸೈಜ್, ಮತ್ತಿತರ ತರಬೇತಿಗಳನ್ನು ನಿತ್ಯವೂ ಮಾಡುತ್ತಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ ವೇಟ್‌ಲಿಫ್ಟಿಂಗ್ ಕಾಮನ್‌ವೆಲ್ತ್ ಚಾಂಪಿಯನ್ ಶಿಪ್‌ನಲ್ಲಿ ಗುರುರಾಜ್ ಪಾಲ್ಗೊಳ್ಳಬೇಕಿತ್ತು. ಆದರೆ ಅದೀಗ ಮುಂದೂಡಿಕೆಯಾಗಿದೆ.
ಫಿಟ್‌ನೆಸ್ ಸಲಕರಣೆ
ಎರಡು ಬಾರಿಯ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ದೇವಲ್ಕುಂದ ಗ್ರಾಮದ ಬಾಳಿ ಕೆರೆಯ ವಿಶ್ವನಾಥ ಭಾಸ್ಕರ ಗಾಣಿಗ ಅವರು ಮನೆಯಲ್ಲಿಯೇ ಅಭ್ಯಾಸ ನಿರತರಾಗಿದ್ದಾರೆ. ಮನೆಯಲ್ಲಿ ಮೂಲೆಗುಂಪಾಗಿ ಬಿದ್ದಿದ್ದ ರಾಡ್‌ವೊಂದರ ಎರಡು ಭಾಗಗಳ ತುದಿಗೆ ಮರಳು ಚೀಲ ಹಾಗೂ ಬಕೆಟ್‌ಗಳನ್ನು ಕಟ್ಟಿ ಕೊಂಡು ವೇಯ್r ಪ್ಲೇಟ್ಸ್ ಮಾಡಿ, ತರಬೇತಿ ನಡೆಸುತ್ತಿದ್ದಾರೆ. 35 ಕೆ.ಜಿ.ಯ ನಾಲ್ಕು ಚೀಲಗಳು, 17.5 ಕೆ.ಜಿ.ಯ ಎರಡು ಬಕೆಟ್‌ಗಳು ಸೇರಿದಂತೆ ಒಟ್ಟು 175 ಕೆ.ಜಿ.ಯ ಬಾರ್ಬೆಲ್‌ನಲ್ಲಿ ದಿನನಿತ್ಯ ಅಭ್ಯಾಸ ನಡೆಸುತ್ತಿದ್ದಾರೆ. ಬೆಳಗ್ಗೆ ಒಂದೂವರೆ ಗಂಟೆ ಹಾಗೂ ಸಂಜೆ ಎರಡೂವರೆ ಗಂಟೆ ಅಭ್ಯಾ ಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ತಮ್ಮಲ್ಲಿರುವ ಡಂಬಲ್ಸ್ ಮತ್ತು ರೆಸಿಸ್ಟೆನ್ಸ್ ಬ್ಯಾಂಡ್‌ನಲ್ಲೂ ಅಭ್ಯಾಸ ಮಾಡುತ್ತಿದ್ದಾರೆ.
Related Articles
Advertisement
-ಪ್ರಶಾಂತ್ ಪಾದೆ