ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ವಾಯುಪಡೆ ಕೇಂದ್ರದ ಮೇಲೆ ಡ್ರೋನ್ ದಾಳಿ ನಡೆಸಿದ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿರುವುದಾಗಿ ಮಂಗಳವಾರ(ಜೂನ್ 29) ವರದಿ ತಿಳಿಸಿದೆ.
ಇದನ್ನೂ ಓದಿ:ಇಂಗ್ಲೆಂಡ್-ಲಂಕಾ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ್ದ ರೆಫ್ರಿಗೆ ಕೋವಿಡ್ ಪಾಸಿಟಿವ್!
ಜಮ್ಮು ವಾಯುಪಡೆ ನೆಲೆ ಮೇಲೆ ನಡೆದ ಡ್ರೋನ್ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ)ಕ್ಕೆ ಹಸ್ತಾಂತರಿಸಲಾಗಿದೆ
ಎಂದು ಗೃಹ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಜಮ್ಮು-ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯು ನೆಲೆ ಮೇಲೆ ಭಾನುವಾರ ಬೆಳಗಿನ ಜಾವ ಎರಡು ಡ್ರೋನ್ ಗಳ ಮೂಲಕ
ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಅಲ್ಲದೇ ಸೋಮವಾರವೂ ಕೂಡಾ ಎರಡು ಡ್ರೋನ್ ಪತ್ತೆಯಾಗಿದ್ದು, ಕೂಡಲೇ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದ ಪರಿಣಾಮ ಅವು ಕಣ್ಮರೆಯಾಗಿರುವುದಾಗಿ ವರದಿ ತಿಳಿಸಿತ್ತು.
ಏತನ್ಮಧ್ಯೆ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್ ಎಸ್ ಜಿ) ವಿಶೇಷ ಬಾಂಬ್ ತಪಾಸಣಾ ತಂಡ ಜಮ್ಮು ವಾಯು ನೆಲೆ ಮೇಲೆ ನಡೆದ ಬಾಂಬ್ ಸ್ಫೋಟದ ಸ್ವರೂಪವನ್ನು ಪರಿಶೀಲಿಸಿರುವುದಾಗಿ ವರದಿ ಹೇಳಿದೆ. ಸ್ಫೋಟಕ್ಕೆ ಆರ್ ಡಿಎಕ್ಸ್ ಅಥವಾ ಟಿಎನ್ ಟಿ ಉಪಯೋಗಿಸಲಾಗಿದೆಯೇ ಎಂಬ ಬಗ್ಗೆ ಎನ್ ಎಸ್ ಜಿ ಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ.