Advertisement

ಪಾಕ್ ಪರ ಘೋಷಣೆ: ಆಯೋಜಕರಿಗೆ ಸಮನ್ಸ್ ನೀಡಲಾಗುತ್ತದೆ ಎಂದ ಗೃಹ ಸಚಿವರು

10:01 AM Feb 22, 2020 | keerthan |

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿ ಸಭೆಯ ವೇದಿಕೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ಧ ಈಗಾಗಲೇ ಪೋಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Advertisement

ನಿನ್ನೆ ಘೋಷಣೆ ಕೂಗಿದ ಅಮೂಲ್ಯಳ ಹಿನ್ನಲೆ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಈ ಸಭೆಯ ಆಯೋಜಕರೇ ಆಕೆಯನ್ನು ಕರೆಸಿದ್ದರಾ ಎಂದೂ ವಿಚಾರಿಸಲಾಗುತ್ತಿದೆ. ಆಯೋಜಕರಿಗೆ ಸಮನ್ಸ್ ನೀಡಲಾಗುತ್ತದೆ. ನಿನ್ನೆಯ ಪ್ರಕರಣದಲ್ಲಿ ಸಂಘಟನೆಗಳ ಕೈವಾಡದ ಬಗ್ಗೆ ಅನುಮಾನಗಳಿವೆ ಎಂದರು.

ಸಿಎಎ, ಕಾಯ್ದೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಅದರೆ ವ್ಯವಸ್ಥಿತವಾಗಿ ಸಿಎಎಯಿಂದ ತೊಂದರೆ ಅಂತಾ ಅಪಪ್ರಚಾರ ಮಾಡಲಾಗ್ತಿದೆ. ವಿದ್ಯಾರ್ಥಿಗಳನ್ನು ಇದಕ್ಕಾಗಿ ಬಳಕೆ ಮಾಡುತ್ತಿರುವುದು ದೇಶಕ್ಕೆ ಮಾರಕ. ಪರೋಕ್ಷವಾಗಿ ಕೂಡಾ ಇಂತಹುದಕ್ಕೆ ಬೆಂಬಲ ಕೊಡಬಾರದು ಎಂದರು.

ಅಮೂಲ್ಯ ಗಡೀಪಾರಿನ ಬಗ್ಗೆ ಯೋಚನೆ ಮಾಡಿಲ್ಲ, ನಮ್ಮಲ್ಲೇ ಸಾಕಷ್ಟು ಬಿಗಿಯಾದ ಕಾನೂನುಗಳಿವೆ. ಆಕೆ ಈ ಹಿಂದೆ ನನ್ನ ಹಿಂದೆ ಸಾಕಷ್ಟು ಸಂಘಟನೆಗಳಿವೆ ಎಂಬ ಬಗ್ಗೆ ಸಂದರ್ಶನ ಕೊಟ್ಟಿರುವ ಬಗ್ಗೆ ಗಮನಕ್ಕೆ ಬಂದಿದೆ. ಎಲ್ಲವನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ಗೃಹ ಸಚಿವರು ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next